ಪತ್ನಿಗೆ ಮಾದಕವಸ್ತು ನೀಡಿ 50 ಮಂದಿಯಿಂದ ಅತ್ಯಾಚಾರಕ್ಕೆ ಒಳಪಡಿಸಿದ ಪತಿಗೆ 20 ವರ್ಷ ಜೈಲು!
ಪತ್ನಿಗೆ ಮಾದಕ ವಸ್ತು ನೀಡಿ, ಅತ್ಯಾಚಾರ ಮಾಡಿಸಿದ 72 ವರ್ಷದ ಪತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಒಟ್ಟು 51 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ಯಾರಿಸ್ (ಡಿ.20): ಪತ್ನಿಗೆ ಮಾದಕ ವಸ್ತು ನೀಡಿ, ಆಕೆಯ ಅರಿವಿಗೆ ಬಾರದಂತೆ 50 ಪುರುಷರಿಂದ ಅತ್ಯಾಚಾರ ಮಾಡಿಸಿದ 72 ವರ್ಷದ ಪತಿಗೆ ಪ್ಯಾರಿಸ್ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2020ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಡೊಮಿನಿಕ್ ಪೆಲಿಕಾಟ್ ಎಂಬಾತನ ಕಂಪ್ಯೂಟರ್‌ನಲ್ಲಿ ಮಾಜಿ ಪತ್ನಿ ಗಿಸೆಲೆ ಪೆಲಿಕಾಟ್‌ಗೆ ಸೇರಿದ್ದ 20 ಸಾವಿರ ಅಶ್ಲೀಲ ಫೋಟೋಗಳು, ವಿಡಿಯೋಗಳು ಪತ್ತೆಯಾಗಿತ್ತು. ಪೊಲೀಸರ ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದ.
‘ದಶಕದ ಕಾಲ ಆಕೆಗೆ ಡ್ರಗ್ಸ್ ನೀಡಿ, ರೇಪ್ ಮಾಡಲಾಗಿದೆ. ಪ್ರಜ್ಞೆ ತಪ್ಪಿಸಿ, ದೇಹ ತೋರಿಸಿ ಅಪರಿಚಿತರನ್ನು ಆನ್‌ಲೈನ್ ಮೂಲಕ ಆಹ್ವಾನಿಸಿ ರೇಪ್ ಮಾಡಿಸಲಾಗಿತ್ತು. ವಿಡಿಯೋ ಕೂಡ ಮಾಡಲಾಗಿತ್ತು’ ಎಂದು ಹೇಳಿದ್ದ.
ರಣಭಯಂಕರ ಚಿಡೋ ಸೈಕ್ಲೋನ್‌ಗೆ ತತ್ತರಿಸಿದ ಫ್ರಾನ್ಸ್: ಚಿಡೋ ಅಬ್ಬರ.. ಬೀದಿಗೆ ಬಂದ ಕರಾವಳಿ ತೀರದ ವಾಸಿಗಳು
ವಿಚಾರಣೆ ನಡೆಸಿದ ನ್ಯಾಯಾಲಯ ಪತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಒಟ್ಟು 51 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು 47 ಮಂದಿಗೆ ಅತ್ಯಾಚಾರ, ಇಬ್ಬರಿಗೆ ಅತ್ಯಾಚಾರ ಯತ್ನ, ಇಬ್ಬರು ಆರೋಪಿಗಳನ್ನು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಶಿಕ್ಷೆ ವಿಧಿಸಿದೆ.
20 ರು.ಗೆ ಬೋಳು ತಲೇಲಿ ಕೂದಲು ಬರಿಸುವ ಚಿಕಿತ್ಸೆ: ‘ವೈದ್ಯ’ ಸೆರೆ
ಮೀರತ್: ಕೂದಲುದುರುವಿಕೆಯಿಂದ ಬೇಸತ್ತಿರುವವರಿಗಾಗಿ ಬಲೆ ಬೀಸಿ, ಕೇವಲ 20 ರು.ಗೆ ತಲೆಗೆ ಎಣ್ಣೆ ಹಚ್ಚುತ್ತಿದ್ದ ಸ್ವಯಂಘೋಷಿತ ವೈದ್ಯ ಹಾಗೂ 2 ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ಎಂದರೆ ‘ವೈದ್ಯ” ಕೂಡ ಬೋಳುತಲೆಯವ.ಕೂದಲು ಬೆಳವಣಿಗೆಗೆ ಸಹಕಾರಿ ಎಂದು ಬಿಂಬಿಸಿ ಇವರು ಮಾರುತ್ತಿದ್ದ ಎಣ್ಣೆಯನ್ನು ಬಳಸಿದವರಿಗೆ ತಲೆಯಲ್ಲಿ ತುರಿಕೆ, ಅಲರ್ಜಿ ಉಂಟಾಗಿದ್ದು, ಹಲವು ದೂರುಗಳು ದಾಖಲಾಗಿದ್ದವು.
AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!
ಇದರ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಇಮ್ರಾನ್, ಸಲ್ಮಾನ್ ಹಾಗೂ ಸಮೀರ್ ಎಂಬುವವರನ್ನು ಬಂಧಿಸಿದ್ದಾರೆ.ಈ ವೇಳೆ ದೆಹಲಿ, ಹರ್ಯಾಣ, ಉತ್ತರಾಖಂಡಗಳಲ್ಲಿ ವಂಚನೆಯಲ್ಲಿ ತೊಡಗಿದ್ದಾಗಿ ಮೂವರು ಒಪ್ಪಿಕೊಂಡಿದ್ದು, ಅವರ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.ಸಮರ್ ಕಾಲೊನಿಯ ಲಿಸರಿ ಗೇಟ್ ಬಳಿ ಕ್ಯಾಂಪ್ ತೆರೆದಿದ್ದ ಇವರು, ಬೊಕ್ಕ ತಲೆಯಲ್ಲೂ ಕೂದಲು ಬೆಳೆಸಬಲ್ಲ ಎಣ್ಣೆ ತಮ್ಮಲ್ಲಿದೆ ಎಂದು ನಂಬಿಸಿ, ಪ್ರವೇಶಕ್ಕೆ 20 ರು. ಹಾಗೂ ಎಣ್ಣೆಗೆ 300 ರು. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.