ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ಲಸಿಕೆ ವಿತರಣೆ ಆರಂಭಿಸಿದೆ. ಸದ್ಯ ಅಗತ್ಯ ಸೋಂಕಿತರಿಗೆ ಕರೋನಾ ಲಸಿಕೆ ನೀಡಲಾಗುತ್ತಿದೆ. ಆದರೆ ಮಕ್ಕಳಿಗೆ ಇದುವರೆಗೂ ಕೊರೋನಾ ಲಸಿಕೆ ನೀಡಿಲ್ಲ, ಈ ಕುರಿತು ನೀತಿ ಆಯೋಗ ಮಹತ್ವದ ಪ್ರಕಟಣೆ ಹೊರಡಿಸಿದೆ.

ನವದೆಹಲಿ(ಡಿ.22): ಕೊರೋನಾ ವೈರಸ್ ನಿಯಂತ್ರಸಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಇದೀಗ ರೂಪಾಂತರಗೊಂಡಿರುವ ಕೊರೋನಾ ವೈರಸ್ ಬ್ರಿಟನ್‌ನಲ್ಲಿ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಹೊಸ ವೈರಸ್‌‌ನಿಂದ ಎಚ್ಚರಿಕೆಯಿಂದಿರಲು ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ನಡುವೆ ಕೊರೋನಾ ಲಸಿಕೆ ಅಗತ್ಯತೆ ತೀವ್ರವಾಗುತ್ತಿದೆ. ಆದರೆ ಮಕ್ಕಳಿಗೆ ಲಸಿಕೆ ನೀಡವುದಿಲ್ಲ ಎಂದು ನೀತಿ ಆಯೋಗ ಹೇಳಿದೆ.

ಒಂದೂವರೆ ತಿಂಗಳಲ್ಲಿ ಹೊಸ ಕೊರೋನಾ ವೈರಸ್‌ಗೂ ಲಸಿಕೆ ಸಿದ್ಧ; ಬಯೋNಟೆಕ್!.

ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕೊರೋನಾ ವೈರಸ್ ನೀಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ. ಲಭ್ಯವಿರುವ ಸಾಕ್ಷ್ಯಾಧಾರಗಳ ಪ್ರಕಾರ ಮಕ್ಕಳನ್ನು ಲಸಿಕೆಗೆ ಪರಿಗಣಿಸಲು ಯಾವುದೇ ಕಾರಣಗಳಿಲ್ಲ ಎಂದು ಪೌಲ್ ಹೇಳಿದ್ದಾರೆ.

Scroll to load tweet…

ಬೇಸಿಗೆಯಲ್ಲಿ ಶೇ.70ರಷ್ಟು ಮಂದಿಗೆ ಉಚಿತ ಕೊರೋನಾ ಲಸಿಕೆ; ಆರೋಗ್ಯ ಸಚಿವರ ಭರವಸೆ!

ಬ್ರಿಟನ್‌ನಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿದೆ. ಇತ್ತ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ ಕೆಲ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ನೀತಿ ಆಯೋಗದ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರದ ಕೊರೋನಾ ವೈರಸ್, ಇದುವರೆಗೂ ಭಾರತದಲ್ಲಿ ಪತ್ತೆಯಾಗಿಲ್ಲ. ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಸದ್ಯ ಕೊರೋನಾಗೆ ಲಭ್ಯವಿರುವ ಲಸಿಕೆ, ರೂಪಾಂತರ ಕೊರೋನಾ ವೈರಸ್‌ ನಿಯಂತ್ರಣದಲ್ಲಿ ಕೆಲಸ ಮಾಡಲಿದೆ ಎಂದು ಪೌಲ್ ಹೇಳಿದ್ದಾರೆ.