Asianet Suvarna News Asianet Suvarna News

ಗೋಧಿ ಕೊರತೆ ಇಲ್ಲ, ಆಮದು ಮಾಡಲ್ಲ: ಕೇಂದ್ರ ಸ್ಪಷ್ಟನೆ

ಧವಸ ಧಾನ್ಯಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಹೀಗಾಗಿ ಭಾರತ ಗೋಧಿ ಸೇರಿದಂತೆ ಇತರ ಆಹಾರ ವಸ್ತುಗಳ ಆಮದು ಮಾಡಿಕೊಳ್ಳು ಸ್ಥಿತಿಯಲ್ಲಿದೆ ಅನ್ನೋ ವರದಿಯನ್ನು ಭಾರತ ಅಲ್ಲಗೆಳೆದಿದೆ. 
 

No plan to import wheat sufficient stocks to meet our domestic requirements india clarify shortage reports ckm
Author
Bengaluru, First Published Aug 21, 2022, 5:52 PM IST

ನವದೆಹಲಿ(ಆ.21): ಬೆಲೆ ಹೆಚ್ಚಳ, ಉತ್ಪಾದನಾ ಕಡಿತದಿಂದ ಭಾರತ ಗೋಧಿ ಸೇರಿದಂತೆ ಧಾನ್ಯಗಳ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆದರೆ ಈ ವರದಿಯನ್ನು ಭಾರತ ತಳ್ಳಿ ಹಾಕಿದೆ. ದೇಶಿಯ ಬಳಕೆಗೆ ಸಾಕಾಗುವಷ್ಟ ಗೋಧಿ ದಾಸ್ತಾನು ನಮ್ಮಲ್ಲಿದೆ. ಭಾರತಕ್ಕೆ ಗೋಧಿ ಸೇರಿದಂತೆ ಆಹಾರ ಧಾನ್ಯ ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆಹಾರ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ದೇಶಿಯ ಬಳಕಿಗೆ ಬೇಕಾದಷ್ಟು ಗೋಧಿ ಸೇರಿದಂತೆ ಆಹಾರ ಧಾನ್ಯಗಳ ದಾಸ್ತಾನು ಇದೆ. ಸಾರ್ವಜನಿಕ ವಿತರಣೆಗೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಆಹಾರ ಸರಬರಾಜು ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಆಹಾರ ಧಾನ್ಯಗಳ ಬೇಡಿಕೆ, ಭಾರತದಲ್ಲಿನ ಕೊರತೆ, ಹಣದುಬ್ಬರಗಳಿಂದ ಆಮದು ಮಾರ್ಗ ಮಾತ್ರ ಉಳಿದಿದೆ. ಈ ಕುರಿತು ಬ್ಲೂಮ್‌ಬರ್ಗ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಇ ಮೇಲ್ ಮೂಲಕ ಸ್ಪಷ್ಟನೆ ಕೇಳಿತ್ತು. ಆದರೆ ಯಾವುದೇ ಉತ್ತರ ಬರದ ಕಾರಣ ಬ್ಲೂಮ್‌ಬರ್ಗ್ ಭಾರತ ಗೋಧಿ ಸೇರಿದಂತೆ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಿದೆ ಎಂಬ ವರದಿ ಪ್ರಕಟಿಸಿತ್ತು. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತ ನಿರೀಕ್ಷೆಗೂ ಮೀರಿ ಗೋಧಿ ಉತ್ಪಾದಿಸುತ್ತಿದೆ. ವಿಶ್ವದ ಎರಡನೇ ಅತೀ ದೊಡ್ಡ ಗೋಧಿ ಉತ್ಪಾದಕ ದೇಶವಾಗಿರುವ ಭಾರತ 2022ರಲ್ಲಿ 106.84 ಮಿಲಿಯನ್ ಟನ್ ಗೋಧಿ ಉತ್ಪಾದಿಸಿದೆ. ಕಳೆದ ವರ್ಷ ಭಾರತ 106.41 ಮಿಲಿಯನ್ ಟನ್ ಗೋಧಿ ಉತ್ಪಾದಿಸಿತ್ತು. ಭಾರತದಲ್ಲಿನ ಗೋಧಿ ಉತ್ಪಾದನೆ ಉತ್ತಮವಾಗಿದೆ. ವಿದೇಶಗಳಲ್ಲಿ ಬಿಸಿ ಗಾಳಿಯಿಂದ ಗೋಧಿ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ. ರೈತರು ಗೋಧಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಭಾರತದಲ್ಲೂ ಗೋಧಿ ಉತ್ಪಾದನೆಗೆ ಬಿಸಿ ಗಾಳಿ ಕೊಂಚ ಮಟ್ಟಿನ ತಲ್ಲಣ ಸೃಷ್ಟಿಸಿದೆ. ಆದರೆ ರೈತರಿಗೆ ನಷ್ಟ ತರುವ ಮಟ್ಟದಲ್ಲಿ ಯಾವುದೇ ಅಪಾಯ ಎದುರಾಗಿಲ್ಲ ಎಂದು ಕೇಂದ್ರ ಆಹಾರ ಇಲಾಖೆ ಹೇಳಿದೆ.

ಪ್ರಧಾನಿ ಮೋದಿ ಭೇಟಿ ವೇಳೆ ಪಂಜಾಬ್‌ನಲ್ಲಿ ಉಗ್ರ ದಾಳಿಗೆ ಸಂಚು, ಗುಪ್ತಚರ ಇಲಾಖೆ ಎಚ್ಚರಿಕೆ!

ಒಂದು ಟನ್ ಗೋಧಿ ಬೆಲೆ 24,309 ರೂಪಾಯಿಗೆ ಏರಿಕೆಯಾಗಿದೆ. ಶೇಕಡಾ 15 ರಷ್ಟು ಏರಿಕೆಯಿಂದ ಜನರು ಕಂಗಲಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯಿಂದ ಭಾರತದ ಗೋಧಿ ದಾಸ್ತಾನು ಹಾಗೂ ಇಡೀ ಮಾರುಕಟ್ಟೆ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

 

 

ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಈ ಎರಡು ದೇಶಗಳಿಂದ ಗೋಧಿ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ  ಭಾರತದ ಗೋಧಿ ರಫ್ತು ಹೆಚ್ಚಳವಾಗಿತ್ತು.   ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ ಭಾರತದ ಗೋಧಿ ರಫ್ತಿನಲ್ಲಿ ಏರಿಕೆಯಾಗಿದೆ. ಜೊತೆಗೆ ಮಾರಾಟದಿಂದ ಲಾಭವೂ ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾನ್ಷು ಪಾಂಡೆ  ಇತ್ತೀಚಗೆ ಹೇಳಿದ್ದರು.. ವಿಶ್ವದಲ್ಲೇ ಗೋಧಿ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದ ಗೋಧಿ ರಫ್ತುನಿಂದ ಬರುತ್ತಿದ್ದ ಲಾಭ ಹೆಚ್ಚಾಗಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಧಿಯ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯೂ ಏರಿಕೆ ಕಂಡಿದೆ. ದೇಶದ ಗೋಧಿ ರಫ್ತಿನ ಪ್ರಮಾಣ ಈಗಾಗಲೇ 66 ಲಕ್ಷ ಟನ್‌ ಮೀರಿದೆ ಎಂದು ಪಾಂಡೆ ಹೇಳಿದ್ದಾರೆ. ಮಾ.15ರ ನಂತರ ಭಾರತದಲ್ಲಿ ಗೋಧಿಯ ಹೊಸ ಬೆಳೆ ಬರಲಿದೆ. ಹಾಗಾಗಿ ಇದು ಭಾರತಕ್ಕೆ ಉತ್ತಮ ಅವಕಾಶವಾಗಿದೆ. ರಷ್ಯಾ ಮತ್ತು ಉಕ್ರೇನ್‌ ವಿಶ್ವದ ಗೋಧಿ ಬೇಡಿಕೆಯ ಶೇ.25ರಷ್ಟನ್ನು ಪೂರೈಕೆ ಮಾಡುತ್ತಿದ್ದವು. ಈಗ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗಿರುವುದರಿಂದ ಭಾರತಕ್ಕೆ ಅವಕಾಶ ದೊರಕಿದೆ’ ಎಂದು ಅವರು ಹೇಳಿದರು.
 

Follow Us:
Download App:
  • android
  • ios