ಪ್ರಧಾನಿ ಮೋದಿ ಭೇಟಿ ವೇಳೆ ಪಂಜಾಬ್‌ನಲ್ಲಿ ಉಗ್ರ ದಾಳಿಗೆ ಸಂಚು, ಗುಪ್ತಚರ ಇಲಾಖೆ ಎಚ್ಚರಿಕೆ!
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 24 ರಂದು ಪಂಜಾಬ್‌ನ ಮೊಹಾಲಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೊಹಾಲಿ, ಚಂಡೀಘಡದಲ್ಲಿ ಉಗ್ರರ ದಾಳಿಗೆ ಸಂಚು ನಡೆದಿದೆ. ಈ ಕುರಿತು ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಮೊಹಾಲಿ(ಆ.21): ಭಾರತದಲ್ಲಿ ಉಗ್ರರ ದಾಳಿ ಆತಂಕ ಹೆಚ್ಚಾಗುತ್ತಿದೆ. 26/11 ರ ಮುಂಬೈ ಮಾದರಿಯಲ್ಲಿ ಮತ್ತೊಂದು ದಾಳಿಗೆ ಸಂಚು ನಡೆದಿತ್ತು ಅನ್ನೋ ಸುಳಿವು ಇತ್ತೀಚೆಗೆ ಪತ್ತೆಯಾದ ಬೋಟ್ ಮೂಲಕ ಸಿಕ್ಕಿದೆ. ಇದೀಗ ಮತ್ತೊಂದು ಆತಂಕ ಎದುರಾಗಿದೆ. ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಮೊಹಾಲಿಗೆ ಬೇಟಿ ನೀಡುತ್ತಿದ್ದಾರೆ. ಟಾಟಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಗೆ ಮೋದಿ ತೆರಳುತ್ತಿದ್ದಾರೆ. ಆದರೆ ಮೋದಿ ಭೇಟಿ ಬೆನ್ನಲ್ಲೇ ಪಂಜಾಬ್‌ನಲ್ಲಿ ಉಗ್ರರ ದಾಳಿ ಭೀತಿ ಎಚ್ಚರಿಕೆ ಬಂದಿದೆ. ಮೋದಿ ಭೇಟಿ ನೀಡುತ್ತಿರುವ ಮೊಹಾಲಿ ಹಾಗೂ ಚಂಡೀಘಡಲ್ಲಿ ಉಗ್ರರ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಭಾರತದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಚಂಡೀಘಡ, ಮೊಹಾಲಿ ಬಸ್ ಸ್ಟಾಂಡ್‌ನಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಕೆಲ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಪ್ರಧಾನಿ ಮೋದಿ ಸೇರಿ 10 ನಾಯಕರ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಅನ್ನೋ ಸ್ಫೋಟಕ ಮಾಹಿಯನ್ನು ಗುಪ್ತಚರ ಸಂಸ್ಥೆ ಬಹಿರಂಗ ಪಡಿಸಿದೆ.
ಪಾಕಿಸ್ತಾನದ ಇಂಟೆಲಿಜೆನ್ಸ್ ಎಜೆನ್ಸಿ ಪಂಜಾಬ್‌ನಲ್ಲಿ ಭಯೋತ್ಪದನಾ ದಾಳಿಗೆ ಸಂಚು ರೂಪಿಸಿದೆ. ಭಾರತದಲ್ಲಿ ಬಿಜೆಪಿ ಸರ್ಕಾರದಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂಬುದನ್ನು ಬಂಬಿಸಿಲು ಪಾಕಿಸ್ತಾನ ಐಎಸ್‌ಐ ಭಾರಿ ಸಂಚು ರೂಪಿಸಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 10 ನಾಯಕರು ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ.
ಲಿಬಿಯಾದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದು ಕೇರಳದ ಯುವಕ, ಐಸಿಸ್ ಮುಖವಾಣಿಯಲ್ಲಿ ಬಹಿರಂಗ!
ಮಾಜಿ ಉಪ ಮುಖ್ಯಮಂತ್ರಿ ಸುಖಜಿಂದರ್ ರಾಂಧವಾ, ಮಾಜಿ ಸಚಿವ ಗುರುಕೀರತ್ ಕೊಟ್ಲಿ, ವಿಜಯಿಂದರರ್ ಸಿಂಗ್ಲಾ, ಪರ್ಮಿಂದರ್ ಪಿಂಕ್ ಸೇರಿದಂತೆ 10 ರಾಜಕೀಯ ನಾಯಕರು ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ಹೇಳಿದೆ. ಈ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಪಂಜಾಬ್ ಪೊಲೀಸ್‌ಗೆ ರವಾನಿಸಿದೆ.
ಇತ್ತೀಚಗೆ ಪಂಜಾಬ್‌ನಲ್ಲಿ ಭಾರಿ ಉಗ್ರ ದಾಳಿಗೆ ಸಂಚು ರೂಪಿಸಿದ್ದ ಐಸಿಸ್, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಉಗ್ರ ಸಂಘಟನೆಗಳ ಭಯೋತ್ಪಾದಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಪಂಜಾಬ್ ಪೊಲೀಸರು, ಪಾಕಿಸ್ತಾನಿ ಐಎಸ್‌ಐ ಬೆಂಬಲಿತ ಉಗ್ರರ ಜಾಲವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಹ್ಯಾಂಡ್ ಗ್ರೆನೇಡ್, 1 ಸುಧಾರಿತ ಸ್ಫೋಟಕ ಸಾಮಗ್ರಿ, 2 ಪಿಸ್ತೂಲ್ ಹಾಗೂ 40 ಸಿಡಿಮದ್ದು ವಶಪಡಿಸಿಕೊಳ್ಳಲಾಗಿದೆ. ಇವರು ಕೆನಡಾ ಮೂಲದ ಆಶ್‌ರ್ ದಲ್ಲಾ ಹಾಗೂ ಆಸ್ಪ್ರೇಲಿಯಾ ಮೂಲದ ಗುರ್ಜಂತ್ ಸಿಂಗ್‌ನೊಂದಿಗೆ ನಂಟು ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸ್ವಾತಂತ್ರ್ಯ ದಿನಾಚರಣೆಯಂದು ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ತಪ್ಪಿಸಿದ್ದರು. ಬಂಧಿತರಿಂದ ಭಾರೀ ಪ್ರಮಾಣದ ಸ್ಫೋಟಕ ಪದಾರ್ಥ, ಪಿಸ್ತೂಲ್, ಮೊಬೈಲ್ ಫೋನ್, ಚಾಕು, ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
26/11 ಮಾದರಿಯಲ್ಲಿ ಮತ್ತೊಮ್ಮೆ ದಾಳಿ, ಪಾಕ್ ನಂಬರ್‌ನಿಂದ ಬೆದರಿಕೆ
ಇದೀಗ ಮೋದಿ ಭೇಟಿಯಲ್ಲಿ ಭಾರಿ ಉಗ್ರರ ಸಂಚು ಬಯಲಾಗಿದೆ. ಇದರಿಂದ ಪಂಜಾಬ್ ಪೊಲೀಸರು ಭದ್ರತೆ ಹೆಚ್ಚಿಸಿದ್ದರೆ , ಇತ್ತ ಭಾರತೀಯ ಸೇನೆ ಕೂಡ ಹದ್ದಿನ ಕಣ್ಣಿಟ್ಟಿದೆ.