Asianet Suvarna News Asianet Suvarna News

ಶಾಲೆ, ಆನ್‌ಲೈನ್‌ ತರಗತಿ ಇಲ್ಲದಿದ್ರೂ ಜಿಲ್ಲೆಗೆ ರ‍್ಯಾಂಕ್!

* 10ನೇ ತರಗತಿಯಲ್ಲಿ ಶೇ.98.06 ಅಂಕ 

* ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಸಾಧನೆ 

* ಶಾಲೆ, ಆನ್‌ಲೈನ್‌ ತರಗತಿ ಇಲ್ಲದಿದ್ರೂ ಜಿಲ್ಲೆಗೆ ರ‍್ಯಾಂಕ್

No Phone For Online Classes Jammu and Kashmir Teen Tops District With 98% In Class 10 pod
Author
Bangalore, First Published Jul 5, 2021, 12:14 PM IST

ಶ್ರೀನಗರ(ಜು.05): ಜಮ್ಮು-ಕಾಶ್ಮೀರದ ಉಧಾಂಪುರದ ವಿದ್ಯಾರ್ಥಿ ಮನ್‌ದೀಪ್‌ ಸಿಂಗ್‌ ಕೊರೋನಾ ಲಾಕ್‌ಡೌನ್‌ ಕಾರಣದಿಂದ ಶಾಲೆಗೂ ತೆರಳದೆ, ಆನ್‌ಲೈನ್‌ ಪಾಠದಲ್ಲಿ ಭಾಗಿಯಾಗಲೂ ಸಾಧ್ಯವಾಗದೆ 10ನೇ ತರಗತಿಯಲ್ಲಿ ಶೇ.98.06 ಅಂಕ ಪಡೆದಿದ್ದಾನೆ. ಈ ಮೂಲಕ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ.

ರಾಜ್ಯ ಶಿಕ್ಷಣ ಮಂಡಳಿ ಭಾನುವಾರ 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್‌ದೀಪ್‌, ‘ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಫೋನ್‌, ಕಂಪ್ಯೂಟರ್‌ ಯಾವುದೂ ಇಲ್ಲದ ಕಾರಣ ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಲ್ಗೊಳ್ಳಲಾಗಲಿಲ್ಲ.

ಆದರೆ ಕುಟುಂಬಸ್ಥರು, ಶಿಕ್ಷಕರ ನೆರವು ಮತ್ತು ಶ್ರದ್ಧೆ ಓದಿನಿಂದಾಗಿ ಈ ಅಂಕ ಲಭಿಸಿದೆ’ ಎಂದಿದ್ದಾನೆ. ಓದಿನ ಜೊತೆಗೆ ಮನೆಗೆಲಸದಲ್ಲೂ ನೆರವಾಗುವ ಮನ್‌ದೀಪ್‌ ಭವಿಷ್ಯದಲ್ಲಿ ವೈದ್ಯರಾಗುವ ಕನಸು ಕಂಡಿದ್ದಾನೆ.

Follow Us:
Download App:
  • android
  • ios