ಅರ್ಜಿದಾರರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಅರ್ಜಿದಾರರ ಸಂಖ್ಯೆ ಎರಡು ಅಂದರೆ ಅವರ ಹೆಂಡತಿಯನ್ನು ಅವರ ಕುಟುಂಬ ಸದಸ್ಯರಿಂದ ಮುಕ್ತಗೊಳಿಸಬೇಕು ಮತ್ತು ಅವಳನ್ನು ಮರಳಿ ನನ್ನ ಜೊತೆ ಇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಕರಣದಲ್ಲಿ, ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅವರ ಉತ್ತರವನ್ನು ಕೇಳಿದೆ, 

ಅಲಹಾಬಾದ್‌ (ಅ.20): ಇಬ್ಬರು ವಯಸ್ಕರ ನಡುವೆ ಸಂಬಂಧದಲ್ಲಿ ಹೊರಗಿನವರ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಇದು ಅವರ ವೈಯಕ್ತಿಕ ವಿಚಾರ. ನ್ಯಾಯಾಲಯವು ಭಾಗ್‌ಪತ್‌ನ ಅರ್ಜಿದಾರರಿಗೆ ಈ ವಿಷಯದಲ್ಲಿ ಅರ್ಜಿದಾರರ ಪರ ಆದೇಶ ನೀಡಿದ್ದು ಇಬ್ಬರೂ ಜೊತೆಯಲ್ಲಿ ವಾಸ ಮಾಡಲು ಆದೇಶ ನೀಡಿತು. ಇದಲ್ಲದೆ ಅರ್ಜಿದಾರರು ಕೋರ್ಟ್‌ನಲ್ಲಿ ಠೇವಣಿ ಇರಿಸಿರುವ 40 ಸಾವಿರ ರೂಪಾಯಿ ಮೊತ್ತವನ್ನು ಅವರಿಗೆ ನೀಡುವಂತೆ ಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದೆ. ಸಂದೀಪ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಈ ಆದೇಶ ನೀಡಿದ್ದಾರೆ. ತನ್ನ ಪತ್ನಿಯಾಗಿರುವ (ಅರ್ಜಿದಾರ ನಂ.2) ಮಹಿಳೆಯು ನ್ನ ಜೊತೆ ವಾಸಿಸಲು ಇಷ್ಟಪಟ್ಟಿದ್ದಾಳೆ. ಆದರೆ, ಆಕೆಯ ಕುಟುಂಬದವರು, ಆಕೆಯನ್ನು ಕೂಡಿಹಾಕಿದ್ದು ಇಬ್ಬರು ಜೊತೆಯಾಗ ಬಾಳಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರ ನಂ.1 ಆಗಿರುವ ಪತಿ ಕೋರ್ಟ್‌ಗೆ ಹೆಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ.

ಇದರ ಸಂಪೂರ್ಣ ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕೋರ್ಟ್‌, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಉತ್ತರಿಸುವಂತೆ ಹೇಳಿತ್ತು. ಅಲ್ಲದೆ, ತಕ್ಷಣವೇ ನೋಟಿಸ್‌ಅನ್ನೂ ಜಾರಿ ಮಾಡಿತ್ತು. ಇದರ ನಂತರ, ಆರೋಪಿಗಳ ಪರವಾಗಿ, ದೆಹಲಿಯ ಗೋಕುಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಸೇರಿದಂತೆ ಪೋಕ್ಸೊದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಪತ್ನಿ ನ್ಯಾಯಾಲಯದ ಹೇಳಿಕೆಯಲ್ಲಿ ಪತಿಯೊಂದಿಗೆ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ನ್ಯಾಯಾಲಯವು ಇಬ್ಬರು ವಯಸ್ಕರ ವೈಯಕ್ತಿಕ ಜೀವನದಲ್ಲಿ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ ಎಂದು ಹೇಳಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ, ಪತಿ ಒಪ್ಪಿಗೆಯ ನಂತರ ಪತ್ನಿಯೊಂದಿಗೆ ವಾಸಿಸಲು ಆದೇಶ ನೀಡಿತು.

ಅರ್ಜಿದಾರ (ಸಂದೀಪ್ ಕುಮಾರ್) ತನ್ನ ಹೆಂಡತಿಯನ್ನು ನ್ಯಾಯಾಲಯದ (Allahabad High Court) ಮುಂದೆ ಹಾಜರಾಗುವಂತೆ ಕೋರಿ ತ್ವರಿತ ಮನವಿಯನ್ನು ಸಲ್ಲಿಸಿದ್ದರು, ಅವರು ತಮ್ಮ ಕುಟುಂಬದ ಸದಸ್ಯರ ಅಕ್ರಮ ಸೆರೆಯಲ್ಲಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಸಂಬಂಧ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ, ಬಾಲಕಿಯರ ಕುಟುಂಬದ ಸದಸ್ಯರಿಗೆ ಆಕೆಯನ್ನು ನ್ಯಾಯಾಲಯದ (Court) ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು.

ವಿವಾಹಿತೆಯ ಲಿವ್‌ಇನ್‌ ಸಂಬಂಧಕ್ಕೆ ಕಾನೂನು ರಕ್ಷಣೆ ನೀಡಲು ನಿರಾಕರಿಸಿದ ಕೋರ್ಟ್‌

ಇದಾದ ಕೆಲವೇ ದಿನಗಳಲ್ಲಿ, 2022 ಜುಲೈ 22 ರಂದು ಅರ್ಜಿದಾರ/ಪತಿಯ ವಿರುದ್ಧ ಸೆಕ್ಷನ್ 376/3/354(C) IPC ಮತ್ತು ಪೋಕ್ಸೋ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಸೆಪ್ಟೆಂಬರ್ 13 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು 2022ರ ಜುಲೈ 18 ರಂದು ನ್ಯಾಯಾಲಯವು ಆದೇಶವನ್ನು ಅಂಗೀಕರಿಸಿದ ನಂತರ ಎಫ್‌ಐಆರ್ (FIR) ಅನ್ನು ದಾಖಲಿಸಲಾಗಿದೆ ಎನ್ನುವುದು ಸ್ಪಷ್ಟವಾಗಿತ್ತು ಎಂದು ಗಮನಿಸಿದೆ. ಪ್ರತಿವಾದಿಗಳಿಗೆ ಕಾರ್ಪಸ್ (HABEAS CORPUS) ಅನ್ನು ಹಾಜರುಪಡಿಸುವಂತೆ ನಿರ್ದೇಶನ ನೀಡಿತ್ತು.

ಪ್ರಧಾನಿಯನ್ನು ಅವಹೇಳನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ: ಅಲಹಾಬಾದ್‌ ಹೈಕೋರ್ಟ್‌

"ಜೀವನ ಸಂಗಾತಿಯ ಆಯ್ಕೆ, ವೈಯಕ್ತಿಕ ಅನ್ಯೋನ್ಯತೆಯ ಬಯಕೆ ಮತ್ತು ಇಬ್ಬರು ಒಪ್ಪಿಗೆಯ ವಯಸ್ಕರ ನಡುವಿನ ಪ್ರೀತಿ ಮತ್ತು ಮಾನವ ಸಂಬಂಧದ ನೆರವೇರಿಕೆಯನ್ನು ಕಂಡುಕೊಳ್ಳುವ ಹಂಬಲವನ್ನು ಬೇರೆ ಯಾವುದೇ ವ್ಯಕ್ತಿಗಳು ಹಸ್ತಕ್ಷೇಪ ಮಾಡಲಾಗುವುದಿಲ್ಲ." ಕೋರ್ಟ್‌ ಬುಧವಾರದ ವಿಚಾರಣೆಯ ವೇಳೆ ಹೇಳಿದೆ.