Asianet Suvarna News Asianet Suvarna News

ವೋಟರ್‌ ಐಡಿ ಜತೆ ಯಾರ ಆಧಾರನ್ನೂ ಲಿಂಕ್‌ ಮಾಡಿಲ್ಲ

ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ಈವರೆಗೆ ಒಂದೇ ಒಂದು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

No ones Aadhaar is linked with Voter ID Election Commission Reply to RTI Application akb
Author
First Published Dec 20, 2022, 9:25 AM IST

ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ಈವರೆಗೆ ಒಂದೇ ಒಂದು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಆ.1ರಂದು ಸ್ವಯಂಪ್ರೇರಿತ ಆಧಾರ್‌-ವೋಟರ್‌ ಐಡಿ ಜೋಡಣೆ ಆಂದೋಲನ ಆರಂಭಿಸಿದ ನಂತರ ಡಿ.12ರವರೆಗೆ 54.32 ಕೋಟಿ ಮತದಾರರಿಂದ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸಿದ್ದೇವೆ. ಆದರೆ ವೋಟರ್‌ ಐಡಿಗೆ ಆಧಾರ್‌ ಜೋಡಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆಧಾರ್‌ ಜೋಡಣೆ ಪ್ರಕ್ರಿಯೆಯೇ ಆರಂಭವಾಗಿಲ್ಲವಾದ್ದರಿಂದ ಯಾವುದೇ ನಕಲಿ ವೋಟರ್‌ ಐಡಿಯನ್ನು ರದ್ದುಪಡಿಸಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಲ್ಲಿಕೆಯಾದ ಅರ್ಜಿಗೆ ಉತ್ತರಿಸಿದೆ.

ಇತ್ತೀಚೆಗಷ್ಟೇ ದೇಶದ 95 ಕೋಟಿ ಮತದಾರರ ಪೈಕಿ ಅರ್ಧದಷ್ಟುಮತದಾರರ ವೋಟರ್‌ ಐಡಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿತ್ತು. ಈಗ ಆರ್‌ಟಿಐ (RTI application)ಅರ್ಜಿಗೆ ಅದಕ್ಕೆ ವ್ಯತಿರಿಕ್ತವಾದ ಉತ್ತರ ದೊರೆತಿದೆ. ಮತದಾರರ ಗುರುತಿನ ಚೀಟಿಯನ್ನು (voter ID card) ಆಧಾರ್‌ (Aadhaar card) ಜೊತೆ ಜೋಡಣೆ ಮಾಡಲು ಅವಕಾಶ ನೀಡುವ ಚುನಾವಣಾ ಕಾಯ್ದೆಯ ತಿದ್ದುಪಡಿಯನ್ನು ಜೂನ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ನಂತರ ಆ.1ರಿಂದ ಚುನಾವಣಾ ಆಯೋಗವು ಮತದಾರರಿಗೆ ತಮ್ಮ ಆಧಾರ್‌ ಸಂಖ್ಯೆಯನ್ನು ಸ್ವಯಂಪ್ರೇರಿತವಾಗಿ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಜನರು ಆಧಾರ್‌ ಸಂಖ್ಯೆ ಸಲ್ಲಿಸಲು 2023ರ ಏ.1 ಕಡೆಯ ದಿನವಾಗಿದೆ.

Voter ID Scam: ವೋಟರ್‌ ಐಡಿ ಹಗರಣಕ್ಕೆ ಮೇಜರ್ ಟ್ವಿಸ್ಟ್: ಚಿಲುಮೆ ಸಂಸ್ಥೆ ಎನ್‌ಜಿಓ ಅಲ್ಲ


ಮತದಾರರ ಪಟ್ಟಿ ಸಮೀಕ್ಷೆ ಖಾಸಗಿಗೆ ನೀಡಿಲ್ಲ

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗವು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ 2023 ರ ಪರಿಷ್ಕರಣೆಗಾಗಿ ಯಾವುದೇ ಖಾಸಗಿ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ ಮತ್ತು ಕಂಪನಿಗಳು ಅಥವಾ ಯಾವುದೇ ವ್ಯಕ್ತಿಯನ್ನು ಮತ್ತು ಮನೆ ಮನೆಗೆ ಸಮೀಕ್ಷೆ ಕಾರ್ಯಕ್ಕಾಗಿ ಮಾಹಿತಿ ಸಂಗ್ರಹಿಸಲು ನೇಮಿಸಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಸ್ಪಷ್ಟಪಡಿಸಿದ್ದಾರೆ.  ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಅಂತಹ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆಗಳಿದ್ದಲ್ಲಿ, ಈ ಕಚೇರಿಗೆ ಟೋಲ್‌ ಫ್ರೀ ಸಂಖ್ಯೆ 1950 ಮೂಲಕ ಪುರಾವೆಗಳೊಂದಿಗೆ ದೂರು ನೀಡಬಹುದು ಜಿಲ್ಲೆಯ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ವೈಯಕ್ತಿಕ ಅಥವಾ ಮತದಾರರ ಮಾಹಿತಿಯನ್ನು ಹಸ್ತಚಾಲಿತವಾಗಿ ಹಾಗೂ ಇತರೆ ಮಾಧ್ಯಮದ ಮೂಲಕ ಸುರಕ್ಷಿತವಾಗಿರಿಸಲು ಯಾವುದೇ ರೀತಿಯ ನೇರ ಸಮೀಕ್ಷೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ, ಎನ್‌ಜಿಒ ಅಥವಾ ಖಾಸಗಿ ಸಂಸ್ಥೆ, ಕಂಪನಿ, ಟ್ರಸ್ಟ್ ವಿರುದ್ಧ ಸಂಬಂಧಿತ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮವನ್ನು ಪ್ರಾರಂಭಿಸಲಾಗುವುದು ಮತ್ತು ಅಗತ್ಯವಿದ್ದಲ್ಲಿ, ಐ.ಪಿ.ಸಿ ಕಲಂ 188 ರಡಿಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಮತದಾರರ ಪಟ್ಟಿಮತ್ತು ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಉದ್ದೇಶಕ್ಕಾಗಿ ನೇಮಕಗೊಂಡ ಸರ್ಕಾರಿ ಅಧಿಕಾರಿಗಳು ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಅಡಿಯಲ್ಲಿ ಸಂಗ್ರಹಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಏಜೆನ್ಸಿಯನ್ನು ನೇಮಿಸಿಲ್ಲ ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ತಿಳಿಸಿದ್ದಾರೆ.

Voter data theft: ಗಂಗಾವತಿ ಯಲ್ಲಿ 29 ಸಾವಿರ ಮತದಾರ ಹೆಸರು ಡಿಲಿಟ್‌!
 
ಮತದಾರರ ಮಾಹಿತಿ ಸಂಗ್ರಹ
ಬೆಂಗಳೂರು ಹುಬ್ಬಳ್ಳಿ ಬಳಿಕ ಇದೀಗ ದಕ್ಷಿಣ ಕನ್ನಡದಲ್ಲೂ ಅನುಮತಿ ಇಲ್ಲದೆ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ರೀತಿ ಅನುಮತಿ ಇಲ್ಲದೆ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದ ಮೂವರನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ನಡೆದಿದೆ. ಹೊಸಮಜಲು ಬಳಿ ಹೋಟೆಲ್‌ವೊಂದಕ್ಕೆ ಬಂದಿದ್ದ ಕನ್ನಡ ಹಾಗೂ ತಮಿಳು ಮಿಶ್ರಿತ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರು ಚಹಾ ಅಂಗಡಿಯಲ್ಲಿದ್ದ ಕೆ.ಇ.ಅಬೂಬಕ್ಕರ್‌ಗೆ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಜನ ಮತದಾರರಿದ್ದಾರೆ ಎಂದು ಪ್ರಶ್ನಿಸಿ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಬಗ್ಗೆಯೂ ಕೇಳಿದ್ದಾನೆ. ಅನುಮಾನಗೊಂಡ ಅಬೂಬಕ್ಕರ್‌ ಪ್ರಶ್ನಿಸಿದಾಗ, ಕಂಪನಿಯೊಂದರ ಪರವಾಗಿ ಸರ್ವೆ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ ಯಾವುದೇ ಕಂಪನಿಯ ಗುರುತು ಪತ್ರವಾಗಲಿ, ಸರ್ವೆಗೆ ಸಂಬಂಧಿಸಿದ ಪತ್ರಗಳಾಗಲಿ ಆತನಲ್ಲಿ ಇಲ್ಲದಿರುವುದನ್ನು ಕಂಡು ಸಂಶಯದಿಂದ ಸ್ಥಳೀಯ ಪಿಡಿಒ ಹಾಗೂ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios