Asianet Suvarna News Asianet Suvarna News

Voter data theft: ಗಂಗಾವತಿ ಯಲ್ಲಿ 29 ಸಾವಿರ ಮತದಾರ ಹೆಸರು ಡಿಲಿಟ್‌!

ಬಿಜೆಪಿಯವರ ಕುತಂತ್ರದಿಂದಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 29 ಸಾವಿರ ಮತದಾರರ ಹೆಸರು ಯಾದಿಯಿಂದ ಡಿಲಿಟ್‌ ಮಾಡಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಆರೋಪಿಸಿದರು.

29 thousends voters delete at gangavathi constituency rav
Author
First Published Dec 9, 2022, 9:37 AM IST

ಗಂಗಾವತಿ (ಡಿ.9) : ಬಿಜೆಪಿಯವರ ಕುತಂತ್ರದಿಂದಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 29 ಸಾವಿರ ಮತದಾರರ ಹೆಸರು ಯಾದಿಯಿಂದ ಡಿಲಿಟ್‌ ಮಾಡಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಆರೋಪಿಸಿದರು.

ನಗರದ ತಮ್ಮ ನಿವಾಸದ ಕಾಂಗ್ರೆಸ್‌ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸ್ವಾಗತ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಂಗಾವತಿ ಕ್ಷೇತ್ರದಲ್ಲಿ 2.20 ಲಕ್ಷ ಮತದಾರರಿದ್ದು, ಅದರಲ್ಲಿ 1.92 ಲಕ್ಷ ಮತದಾರರು ಉಳಿದಿದ್ದಾರೆ. ಬಿಜೆಪಿಯವರು ಅನ್ಸಾರಿ ಬೆಂಬಲಿಗರೆಂದು ಗುರುತಿಸಿ 29 ಸಾವಿರ ಮತದಾರರ ಹೆಸರು ರದ್ದುಮಾಡಿದ್ದಾರೆ. ಕೇವಲ ಗಂಗಾವತಿ ಕ್ಷೇತ್ರ ಅಲ್ಲದೆ 224 ಕ್ಷೇತ್ರಗಳಲ್ಲಿ ಬಿಜೆಪಿಯವರು ಈ ಕುತಂತ್ರಕ್ಕೆ ಕೈಹಾಕಿದ್ದಾರೆಂದು ದೂರಿದರು.

ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಡಿಲೀಟ್‌: ದೀಪಕ್ ಚಿಂಚೋರೆ ಆರೋಪ

ಇದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಿಂದ ಬಿಜೆಪಿಯವರ ಕುತಂತ್ರ ಬಹಿರಂಗಗೊಂಡಿದೆ. ಕಾರಣ ಗಂಗಾವತಿ ಕ್ಷೇತ್ರದಲ್ಲಿರುವ ಮತದಾರರು ಚುನಾವಣಾ ವಿಭಾಗಕ್ಕೆ ಹೋಗಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಲಂಚರಹಿತ ಅನ್ಸಾರಿ:

ನಾನು ಲಂಚರಹಿತವಾಗಿ ಕೆಲಸ ಮಾಡಿದ್ದೇನೆ. ಆದರೆ ಬಿಜೆಪಿಯವರು ಲಂಚ ಸಹಿತ ಅಧಿಕಾರ ನಡೆಸುತ್ತಿದ್ದಾರೆಂದು ಇಕ್ಬಾಲ್‌ ಅನ್ಸಾರಿ ಅರೋಪಿಸಿದರು. ತಾವು ಈ ಹಿಂದೆ ಕ್ಷೇತ್ರಕ್ಕೆ ಸಾಕಷ್ಟುಅನುದಾನ ತಂದಿದ್ದೇವೆ. ಅಧಿಕಾರಿಗಳನ್ನು ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಒಂದು ನೈಯಾ ಪೈಸೆ ಪಡೆಯದೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿರುವುದಾಗಿ ತಿಳಿಸಿದರು. ಆದರೆ ಬಿಜೆಪಿಯವರು ಶೇ. 50ರಷ್ಟುಕಮಿಷನ್‌ಗೆ ನಿಂತಿದ್ದಾರೆ. ಇದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬೇಸತ್ತು ಹೋಗಿದ್ದಾರೆ ಎಂದರು.

ಹುಡುಕಾಟ ಖಚಿತ:

ಗಂಗಾವತಿ ಕ್ಷೇತ್ರದಲ್ಲಿ ಹೊರಗಿನವರನ್ನು ಆಯ್ಕೆ ಮಾಡಿದರೆ ಹುಡುಕಾಟ ಖಚಿತ ಎಂದು ಅನ್ಸಾರಿ ಹೇಳಿದರು. ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ಮನೆ ಖರೀದಿ ಮತ್ತು ಪ್ರಚಾರ ಕೈಗೊಂಡಿರುವುದರ ಬಗ್ಗೆ ಅವರ ಹೆಸರು ಪ್ರಸ್ತಾಪ ಮಾಡದೆ ಮಾತನಾಡಿದರು. ಕಾರಣ ಸ್ಥಳೀಯರು ಅದರಲ್ಲೂ ಕೆಲಸ ಮಾಡುವರನ್ನು ಆಯ್ಕೆ ಮಾಡಿ. ಒಂದು ವೇಳೆ ನಿಮ್ಮ ಮತ ಮಾರಿಕೊಂಡರೆ ಐದು ವರ್ಷಗಳ ಕಾಲ ನೀವು ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂದರು.

ಖರ್ಗೆಯವರ ಕಾರ್ಯಕ್ರಮಕ್ಕೆ ಬನ್ನಿ:

ಡಿ. 10ರಂದು ಕಲಬುರಗಿಯಲ್ಲಿ ನಡೆಯುವ ಮಲ್ಲಿಕಾರ್ಜುನ ಖರ್ಗೆಯವರ ಸ್ವಾಗತ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಬರುವ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಾರ್ಯಕರ್ತರು ಯಾವುದೇ ರೀತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗದೆ ಕಾಂಗ್ರೆಸ್‌ಅನ್ನು ಬಲಪಡಿಸಬೇಕು. ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವುದಾಗಿ ತಿಳಿಸಿದರು.

ಹುಬ್ಬಳ್ಳಿಯಲ್ಲೂ ವೋಟರ್‌ಗೇಟ್‌ ಹಗರಣ; 1.40 ಲಕ್ಷ ಮತದಾರರು ಡಿಲೀಟ್‌!

ನಗರ ಕಾಂಗ್ರೆಸ್‌ ಅಧ್ಯಕ್ಷ ಶ್ಯಾಮೀದ್‌ ಮನಿಯಾರ, ಎಸ್‌.ಬಿ. ಖಾದ್ರಿ, ನಗರಸಭಾ ಸದಸ್ಯ ಮನೋಹರಸ್ವಾಮಿ, ರಾಜುನಾಯಕ, ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಎಂ.ಎ. ಫಕೀರಪ್ಪ, ಜಿಪಂ ಮಾಜಿ ಸದಸ್ಯ ಚಿಲಕಮುಕ್ಕಿ ಮಲ್ಲೇಶಪ್ಪ, ತಾಪಂ ಮಾಜಿ ಸದಸ್ಯ ಶರಣೇಗೌಡ, ಅಮರೇಶಪ್ಪ ವಿಠಾಪುರ ಹಾಗೂ ನಗರಸಭೆಯ ಕಾಂಗ್ರೆಸ್‌ ಸದಸ್ಯರು ಭಾಗವಹಿಸಿದ್ದರು.

Follow Us:
Download App:
  • android
  • ios