* ಮಹಿಳಾ ಸಂಸದರೊಂದಿಗೆ ಸೆಲ್ಫೀ ಪೋಸ್ಟ್‌ ಮಾಡಿ ಟ್ರೋಲ್ ಆಗಿದ್ದ ತರೂರ್* ವಿವಾದದ ಬೆನ್ನಲ್ಲೇ ಪುರುಷ ಸಂಸದರೊಂದಿಗೆ ಸೆಲ್ಫೀ* ಮತ್ತೆ ತರೂರ್ ಕಾಲೆಳೆದ ನೆಟ್ಟಿಗರು

ನವದೆಹಲಿ(ಡಿ.02): ಕಾಂಗ್ರೆಸ್ ಸಂಸದ ಶಶಿ ತರೂರ್ (Congress MP Shashi Tharoor) ತಮ್ಮ ಟ್ವೀಟ್‌ಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ತರೂರ್ ಅವರು ಸೋಮವಾರ ಟ್ವಿಟರ್‌ನಲ್ಲಿ ಮಹಿಳಾ ಸಂಸದರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವರು ಮಹಿಳಾ ಸಂಸದರೊಂದಿಗೆ (Womenn MP's) ಪೋಸ್‌ ನೀಡಿದ್ದರು. ಆದರೆ ಈ ಫೋಟೋಗೆ ಅವರು ನೀಡಿರುವ ಶೀರ್ಷಿಕೆ ಭಾರೀ ವಿವಾದಕ್ಕೆ ಸೃಷ್ಟಿಸಿತ್ತು. ಆ ನಂತರ ತರೂರ್ ಈ ವಿಚಾರವಾಗಿ ಕ್ಷಮೆ ಯಾಚಿಸಿದ್ದರು. ಆದರೀಗ ಈ ಬೆಳವಣಿಗೆ ಬೆನ್ನಲ್ಲೇ ತರೂರ್ ಪುರುಷ ಸಂಸದರೊಂದಿಗೆ ತೆಗೆದ ಸೆಲ್ಫಿ ಹಂಚಿಕೊಂಡಿದ್ದಾರೆ.

ಹೌದು ಸೋಮವಾರದಂದು ಶಶಿ ತರೂರ್ ಮಹಿಳಾ ಸಂಸದರೊಂದಿಗಿನ ಫೋಟೋ ಒಂದನ್ನು ಶೇರ್ ಮಾಡಿದ್ದರು. ಈ ಫೋಟೋದಲ್ಲಿ ತರೂರ್ ಅವರು ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ಮತ್ತು ಜೋತಿಮಣಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಫೋಟೋಗೆ "ಲೋಕಸಭೆಯು (Loksabha) ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?" ಎಂಬ ಶೀರ್ಷಿಕೆ ನೀಡಿದ್ದರು. ಈ ಶೀರ್ಷಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಹೀಗಾಗಿ ಅವರು ಈ ಬಗ್ಗೆ ಕ್ಷಮೆ ಯಾಚಿಸಿ ಇದು 'ಕೆಲಸದ ಸೌಹಾರ್ದತೆಯ ಪ್ರದರ್ಶನ' ಎಂದು ಹೇಳಿದ್ದರು. "ಕೆಲಸದಲ್ಲಿ ಸ್ನೇಹವನ್ನು ತೋರಿಸುವ ಈ ಕ್ಷಣಕ್ಕೆ ನಾನು ಸಂತೋಷಪಡುತ್ತೇನೆ. ಕೆಲವು ಜನರು ಮನನೊಂದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ, ಮಹಿಳಾ ಸಂಸದರ ಮನವಿ ಮೇರೆಗೆ ಸೆಲ್ಫಿ ತೆಗೆಸಿಕೊಂಡಿದ್ದು, ಸಂತಸದ ವಾತಾವರಣದಲ್ಲಿ ಫೋಟೋ ತೆಗೆಯಲಾಗಿದೆ. ಅವರ ಅನುಮತಿಯ ನಂತರವೇ ಈ ಫೋಟೋವನ್ನು ಟ್ವೀಟ್ ಮಾಡಿರುವುದಾಗಿಯೂ’ ಎಂದು ತರೂರ್ ಬರೆದಿದ್ದಾರೆ.

Scroll to load tweet…

ನಂತರ ಅವರು ಮಂಗಳವಾರ ಪುರುಷ ಸಂಸದರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಮೂರು ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ. "ಇದು ವೈರಲ್ ಆಗುವ ನಿರೀಕ್ಷೆಯಿಲ್ಲ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಹೀಗಿದ್ದರೂ ನೆಟ್ಟಿಗರು ಈ ಪೋಸ್ಟ್‌ನ್ನು ಟ್ರೋಲ್ ಮಾಡಿದ್ದಾರೆ.

Winter Session: ಲೋಕಸಭೆ ಮನಮೋಹಕ ಜಾಗ; ಯಾಕಂತೆ? ಶಶಿ ತರೂರ್ ಕೇಳಿ, ತಿಳಿಯಿರಿ!

Scroll to load tweet…

ಹೌದು ತರೂರ್ ಹಣಿಯುವ ಅವಕಾಶ ಬಿಡದ ನೆಟ್ಟಿಗರು ಆ ನಿರ್ದಿಷ್ಟ ಫೋಟೋವನ್ನು ಏಕೆ ಆಕರ್ಷಕ ಎಂದು ಕರೆಯುವುದಿಲ್ಲ ಎಂದು ಹಲವರು ಕೇಳಿದ್ದಾರೆ. ಇನ್ನು ಕೆಲವರು ಇದು ಈ ಹಿಂದೆ ಪೋಸ್ಟ್‌ ಮಾಡಿದ ಫೋಟೋದಿಂದಾದ ವಿವಾದ ತಣಿಸಲು ಪೋಸ್ಟ್‌ ಮಾಡಲಾಗಿದೆ ಎಂದೂ ಕಾಲೆಳೆದಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಈ ಫೋಟೋಗಳನ್ನು ಟ್ವೀಟ್ ಮಾಡಲಾಗಿದೆ. ನವೆಂಬರ್ 30 ರಂದು ರೈತರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಹಿಂಜರಿಯುತ್ತಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ವಾಕ್‌ಔಟ್ ನಡೆಸಿದವು. ಸಂಸತ್ತಿನ 25 ದಿನಗಳ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಯಿತು ಮತ್ತು ಕೃಷಿ ಕಾನೂನುಗಳನ್ನು ಚರ್ಚೆಯಿಲ್ಲದೆ ಕಳೆದ ದಿನ ರದ್ದುಗೊಳಿಸಲಾಯಿತು.


ಸೋಮವಾರದ ಫೋಟೋದಲ್ಲಿ ತರೂರ್ ಅವರು ಸುಪ್ರಿಯಾ ಸುಳೆ, ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ಮತ್ತು ಜೋತಿಮಣಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?" ಎಂದು ಬರೆದಿದ್ದಾರೆ. ನಂತರ ಅವರು ಕ್ಷಮೆಯಾಚಿಸಿದರು ಮತ್ತು ಅದನ್ನು 'ಕೆಲಸದ ಸೌಹಾರ್ದತೆಯ ಪ್ರದರ್ಶನ' ಎಂದು ಕರೆದರು. "ಇಡೀ ಸೆಲ್ಫಿ ವಿಷಯವನ್ನು (ಮಹಿಳಾ ಸಂಸದರ ಉಪಕ್ರಮದಲ್ಲಿ) ಉತ್ತಮ ಹಾಸ್ಯದಲ್ಲಿ ಮಾಡಲಾಗಿದೆ ಮತ್ತು ಅದೇ ಉತ್ಸಾಹದಲ್ಲಿ ಟ್ವೀಟ್ ಮಾಡಲು ಅವರು ನನ್ನನ್ನು ಕೇಳಿದರು. ಕೆಲವು ಜನರು ಮನನೊಂದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು. ಇದೆಲ್ಲವೂ ಅಷ್ಟೆ’ ಎಂದು ತರೂರ್ ಬರೆದಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಈ ಫೋಟೋಗಳನ್ನು ಟ್ವೀಟ್ ಮಾಡಲಾಗಿದೆ. ನವೆಂಬರ್ 30 ರಂದು ರೈತರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಹಿಂಜರಿಯುತ್ತಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ವಾಕ್‌ಔಟ್ ನಡೆಸಿದವು. ಸಂಸತ್ತಿನ 25 ದಿನಗಳ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಯಿತು ಮತ್ತು ಕೃಷಿ ಕಾನೂನುಗಳನ್ನು ಚರ್ಚೆಯಿಲ್ಲದೆ ಕಳೆದ ದಿನ ರದ್ದುಗೊಳಿಸಲಾಯಿತು.