Asianet Suvarna News Asianet Suvarna News

PM Modi NCC Rally: ರಾಷ್ಟ್ರ ಮೊದಲೆಂದು ದುಡಿವ ಯುವಕರು ಇಲ್ಲಿದ್ದಾರೆ: ದೇಶವನ್ನು ಯಾರೂ ತಡೆಯಲಾರರು!

*ದೇಶ ಮೊದಲೆಂದು ದುಡಿವ ಯುವಕರು ಇಲ್ಲಿದ್ದಾರೆ
*ನಾನೂ ಕೂಡ ಎನ್‌ಸಿಸಿ ಕೆಡೆಟ್‌ ಆಗಿದ್ದೆ
*ಎನ್‌ಸಿಸಿ ಕೆಡೆಟ್‌ ಉದ್ದೇಶಿಸಿ ಪ್ರಧಾನಿ ಭಾಷಣ

No one can stop nation whose youth works with spirit of nation first says PM Narendra Modi mnj
Author
Bengaluru, First Published Jan 29, 2022, 9:02 AM IST

ನವದೆಹಲಿ (ಜ. 29): ಭಾರತದ ಯುವ ಜನತೆಯ ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ‘ದೇಶವೇ ಮೊದಲು’ ಎಂಬ ಮನೋಭಾವದಿಂದ ಕೆಲಸ ಮಾಡುವ ಯುವಜನತೆಯಿರುವ ರಾಷ್ಟ್ರವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ನಾನೂ ಕೂಡ ಚಿಕ್ಕವನಿದ್ದಾಗ ಎನ್‌ಸಿಸಿ ಕೆಡೆಟ್‌ (NCC Cadet) ಆಗಿದ್ದೆ. ಇದು ಹೆಮ್ಮೆಯ ವಿಚಾರ ಎಂದು ಮೆಲುಕು ಹಾಕಿದ್ದಾರೆ.

ದೆಹಲಿಯ (Delhi) ಕಾರಿಯಪ್ಪ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್‌ ಕೋರ್‌ನ ಪಿಎಂ ರಾರ‍ಯಲಿಯಲ್ಲಿ ಶುಕ್ರವಾರ ಮಾತನಾಡಿದ ಮೋದಿ, ಎನ್‌ಸಿಸಿಯನ್ನು ಬಲಪಡಿಸಲು ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗುವುದು ಎಂದರು. ಕಳೆದ ಎರಡು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯುವಕರು ಗಡಿ ಪ್ರದೇಶದಲ್ಲಿ ಎನ್‌ಸಿಸಿಗೆ ಸೇರಿದ್ದಾರೆ. ಸೇನೆಯಲ್ಲೂ ಮಹಿಳೆಯರಿಗೆ ಉನ್ನತ ಅವಕಾಶಗಳನ್ನು ನೀಡಲಾಗುತ್ತಿರುವುದರಿಂದ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ಯುವತಿಯರೂ ಸೇರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: PM Modi interaction with DMs ಯಾದಗಿರಿ, ರಾಯಚೂರು ಬಗ್ಗೆ ಪ್ರಧಾನಿ ಮೋದಿ ಅತೀವ ಮೆಚ್ಚುಗೆ!

ಇತ್ತೀಚೆಗೆ ಯುವಜನತೆ ಮಾದಕದ್ರವ್ಯಗಳ ಚಟಕ್ಕೆ ಬೀಳುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ ಮೋದಿ ಎನ್‌ಸಿಸಿ ಸೇರಿದ ವಿದ್ಯಾರ್ಥಿಗಳು ಚಟದಿಂದ ದೂರವಿರಬೇಕು. ಅಲ್ಲದೇ ಇನ್ನಿತರರಿಗೂ ಚಟದಿಂದ ಹೊರಬರಲು ಸಹಾಯ ಮಾಡಬೇಕು ಎಂದರು. ಭಾರತವನ್ನು ಸ್ವಾವಲಂಬಿಯಾಗಿ ಮಾಡುವಲ್ಲಿ ಯುವಜನತೆಯ ಪಾತ್ರ ದೊಡ್ಡದು. ಹೀಗಾಗಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉತ್ಪಾದನೆ, ಉದ್ಯೋಗ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಮೋದಿ ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕ: ಕಳೆದ ಏಳೂವರೆ ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ (Narendra Modi) ಅವರು ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಸಮೀಕ್ಷೆಯೊಂದು (Survey) ಹೇಳಿದೆ. ಕೊರೋನಾ ಲಾಕ್‌ಡೌನ್‌ (Corona Lockdown) ವೇಳೆ ಪ್ರಧಾನಿ ನಿವಾಸದಲ್ಲಿ ಗುಂಡಿನ ಪಾರ್ಟಿ ನಡೆಸಿ ವಿವಾದಕ್ಕೆ ಸಿಲುಕಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಅವರು ಜನಪ್ರಿಯತೆ ಕುಸಿತದಲ್ಲಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಅದೇ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿOne Nation One Election: ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆದರೆ ಅಭಿವೃದ್ಧಿಗೆ ಅಡ್ಡಿ: ಮೋದಿ!

ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಆಗ 70% ಅಂಕ ಗಳಿಸಿದ್ದ ಅವರು ಈ ಬಾರಿ 71% ಅಂಕ ಪಡೆದಿದ್ದಾರೆ. 2020ರ ಮೇ ತಿಂಗಳಿನಲ್ಲಿ ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಮೋದಿ ಅವರು 84% ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರು. ಕೊರೋನಾ (Coronavirus) ಎರಡನೇ ಅಲೆ ಕಂಡುಬಂದ 2021ರ ಮೇ ತಿಂಗಳಿನಲ್ಲಿ ಅವರ ಜನಪ್ರಿಯತೆ ಶೇ.63 ಅಂಕಗಳಿಗೆ ಕುಸಿದಿತ್ತಾದರೂ ನಂ.1 ಪಟ್ಟಕ್ಕೆ ಭಂಗವಾಗಿರಲಿಲ್ಲ. ಇದೀಗ ಅಂಕ ಮತ್ತೆ ಏರಿಕೆಯಾಗಿದೆ.

ನಂ.2 ಯಾರು?: ಶೇ.66 ಅಂಕಗಳೊಂದಿಗೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನುಯೆಲ್‌ ಲೊಪೆಜ್‌ ಒಬ್ರಡಾರ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಇಟಲಿಯ ಮಾರಿಯಾ ಡ್ರಾಘಿ (60%), ಜಪಾನ್‌ ಪ್ರಧಾನಿ ಫುಮಿಯೋ ಕಿಶಿಡಾ (48%), ಜರ್ಮನಿ ಪ್ರಧಾನಿ ಒಲಾಫ್‌ ಸ್ಕೋಲ್‌ (44%) ಅವರು ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios