‘ಸೇವ್ ಲಕ್ಷದ್ವೀಪ’ ಅಭಿಯಾನ ತೀವ್ರಗೊಳ್ಳುತ್ತಿರುವಾಗ ದ್ವೀಪಸಮೂಹದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಇತ್ತೀಚಿನ ನಿರ್ಧಾರಗಳಿಗೆ ಹೊರತಾಗಿ ಉಳಿದ ಬದಲಾವಣೆಗಳು ನಿಧಾನವಾಗಿ ಅನುಷ್ಠಾನಗೊಳ್ಳಲಿವೆ ಎನ್ನಲಾಗಿದ.

ಬದಲಾವಣೆ ಅನುಷ್ಠಾನವನ್ನು ನಿಧಾನಗೊಳಿಸಿ ಎಂದು ಬಿಜೆಪಿ ನಾಯಕರು ಪಟೇಲರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದ್ವೀಪಗಳಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ: ಸುಪ್ರೀಂ!.

ಪ್ರಸ್ತಾವಿತ ಬದಲಾವಣೆಗಳು ಕೇವಲ ಸಲಹೆಗಳಾಗಿವೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಈ ಬಗ್ಗೆ ಲಕ್ಷದ್ವೀಪದ ನಾಗರಿಕರಿಂದ ಸಾರ್ವಜನಿಕ ಅಭಿಪ್ರಾಯವನ್ನು ಕೋರಿದ್ದಾರೆ. ಜನರು ಭಯಪಡುವಂತದ್ದು ಏನೂ ಇಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಅವರ ಒಪ್ಪಿಗೆಗಾಗಿ ಜನರೊಂದಿಗೆ ಚರ್ಚೆ ನಡೆಯಲಿದೆ ಎಂದು ಲಕ್ಷದ್ವೀಪದಲ್ಲಿ ಬಿಜೆಪಿ ವ್ಯವಹಾರಗಳ ಉಸ್ತುವಾರಿ, ಬಿಜೆಪಿ ಉಪಾಧ್ಯಕ್ಷ ಎ ಪಿ ಅಬ್ದುಲ್ಲಕುಟ್ಟಿ ಅಮಿತ್ ಶಾ ಅವರೊಂದಿಗಿನ ಸಭೆಯ ನಂತರ ತಿಳಿಸಿದ್ದಾರೆ. ಲಕ್ಷದ್ವೀಪದಲ್ಲಿ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿತ್ತು.

ಬಿಜೆಪಿ ನಾಯಕರ ನಿಯೋಗ :

ಲಕ್ಷದ್ವೀಪದ ಎನ್‌ಸಿಪಿ ಎಂಪಿ ಮೊಹಮ್ಮದ್ ಫೈಝಲ್ ಅವರೂ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಸ್ಥಳೀಯ ಜನರು, ಪಂಚಾಯತ್, ಜನಪ್ರತಿನಿಧಿಗಳ ಜೊತೆ ಮಾತನಾಡದೆ ಯಾವುದನ್ನೂ ಅನಷ್ಠಾನಗೊಳಿಸುವುದಿಲ್ಲ ಎಂದು ಕೇಂದ್ರ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಲಕ್ಷದ್ವೀಪದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾದ ರೆಸೊಲ್ಯೂಷನ್‌ಗಳನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇರಳ ವಿಧಾನಸಭೆಯಲ್ಲಿ ಕೇಳಿಬಂದ ಬೆನ್ನಲ್ಲೇ ಕೇಂದ್ರದಿಂದ ಇಂತಹ ನಿರ್ಧಾರ ಹೊರಬಿದ್ದಿದೆ. ಲಕ್ಷದ್ವೀಪದೊಂದಿಗೆ ಬಲವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುವ ಕೇರಳ ವ್ಯಾಪಾರ, ವ್ಯವಹಾರದಲ್ಲಿಯೂ ಸುದೀರ್ಘ ಸಂಪರ್ಕವನ್ನು ಹೊಂದಿದೆ.

ಹೊಸ ನಿಯಮಗಳಿಂದ ಲಕ್ಷದ್ವೀಕ ಮಾತ್ರವಲ್ಲದೆ ಕೇರಳದಲ್ಲೂ ಬಿಜೆಪಿಗೆ ಅನಿಶ್ಚಿತತೆ

‘ಲಕ್ಷದ್ವೀಪ ಉಳಿಸುವ’ ಅಭಿಯಾನ ಮತ್ತು ಕೇರಳದ ರಾಜಕೀಯ ವರ್ಗದ ಒತ್ತಡವು ಬಿಜೆಪಿಯನ್ನು ಕೇರಳ ಮತ್ತು ದ್ವೀಪಗಳಲ್ಲಿ ಅನಿಶ್ಚಿತ ಸ್ಥಾನಕ್ಕೆ ತಂದಿದೆ ಎಂದು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ರಾಷ್ಟ್ರಮಟ್ಟದ ಹಿರಿಯ ಬಿಜೆಪಿ ನಾಯಕರ ಒಂದು ಭಾಗವು ಪಟೇಲ್ ಸಮಸ್ಯೆಗಳನ್ನು ನಿಭಾಯಿಸುತ್ತಿರುವ ವಿಧಾನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಪಟೇಲ್ ಅವರನ್ನು ಸ್ಥಾನದಿಂದ ಹಿಂಪಡೆಯುವ ಯಾವುದೇ ಸೂಚನೆ ಇಲ್ಲವಾದರೂ, ವಿರೋಧ ಪಕ್ಷಗಳ ಪ್ರಸ್ತಾಪಗಳ ಬಗ್ಗೆ ಅನುಷ್ಠಾನ ನಿಧಾನಗೊಳಿಸುವಂತೆ ಹೇಳಿದ್ದಾರೆ. ಈ ರೀತಿಯ ಸೂಕ್ಷ್ಮ ಕ್ಷೇತ್ರಗಳಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾದ ಚರ್ಚೆ ನಡೆಯಬೇಕೆಂದು ನಾಯಕತ್ವ ಒಪ್ಪುತ್ತದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

'ಗೋಮಾಂಸ ನಿಷೇಧ, ಸಿಎಎ ವಿರೋಧಿ ಬ್ಯಾನರ್ ಗೆ ಅವಕಾಶ ಇಲ್ಲ' ಲಕ್ಷದ್ವೀಪ ಉಳಿಸಿ ಎಂದ ನಟ

ಅಬ್ದುಲ್ಲಕುಟ್ಟಿ ಅವರ ಪ್ರಕಾರ, ದ್ವೀಪಗಳ ಬಿಜೆಪಿ ಮುಖಂಡರಿಗೆ ಲಕ್ಷದ್ವೀಪದಲ್ಲಿನ ಜನರ ಕಲ್ಯಾಣವು ಯಾವಾಗಲೂ ಅವರ ಬಗ್ಗೆ ಕಾಳಜಿಯಾಗಿದೆ ಮತ್ತು ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಅವರೇ ವಿಶೇಷ ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಲಕ್ಷದ್ವೀಪದಲ್ಲಿ ಜನರ ಬೇಡಿಕೆ ಮತ್ತು ದೂರುಗಳನ್ನು ನಡ್ಡಾ ಅವರಿಗೆ ತಿಳಿಸಿದ್ದಾರೆ. ಲಕ್ಷದ್ವೀಪದಲ್ಲಿ ಜನರಿಗೆ ತೊಂದರೆಯಾಗುವಂತದ್ದು ಏನೂ ಮಾಡಬಾರದು ಎಂದು ನಡ್ಡಾ-ಜಿ ಹೇಳಿದ್ದಾರೆ. ಅವರ ಕಲ್ಯಾಣ ಮತ್ತು ಅವರ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಲಕ್ಷದ್ವೀಪದಲ್ಲಿ ಬಿಜೆಪಿ ಪ್ರಾಬಲ್ಯ

ಪ್ರಸ್ತಾವಿತ ಕೆಲವು ನಿಯಮಗಳನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕಾಸಿಮ್ ಅವರ ಪ್ರಕಾರ, ಏಕಪಕ್ಷೀಯ ನಿರ್ಧಾರಗಳು ವಿವಾದವನ್ನು ಸೃಷ್ಟಿಸಿವೆ ಎನ್ನಲಾಗಿದೆ. 'ಕಳೆದ 22 ವರ್ಷಗಳಿಂದ ಬಿಜೆಪಿ ಲಕ್ಷದ್ವೀಪದಲ್ಲಿ ಸಕ್ರಿಯವಾಗಿದೆ. ಬಿಜೆಪಿ ಸರ್ಕಾರ - ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಇಲ್ಲಿನ ಜನರಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗ ಬಳಕೆಯಲ್ಲಿರುವ 22 ಹಡಗುಗಳನ್ನು ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಕೇಂದ್ರವು ಒದಗಿಸಿದೆ. ಈ ಸರ್ಕಾರ ಹೆಲಿಕಾಪ್ಟರ್‌ಗಳ ಸಂಖ್ಯೆಯನ್ನು ಒಂದರಿಂದ ಮೂರಕ್ಕೆ ಹೆಚ್ಚಿಸಿದೆ. ಅಗಟ್ಟಿ ಆಸ್ಪತ್ರೆಯಲ್ಲಿ ಸೇವೆಗಳನ್ನು ಸುಧಾರಿಸಿದರೆ, ಹೊಸ ಶಿಕ್ಷಣ ಸಂಸ್ಥೆಗಳನ್ನು ಈ ಸರ್ಕಾರವು ನಿರ್ಮಿಸಿದೆ. ಬಿಜೆಪಿ ಸರ್ಕಾರ ಯಾವಾಗಲೂ ನಮ್ಮ ಪರವಾಗಿ ನಿಂತಿದೆ ಎಂದಿದ್ದಾರೆ.

ವಿವಾದಕ್ಕೆ ಸಿಲುಕಿರುವ ಕ್ರಮಗಳಲ್ಲಿ ಮುಸ್ಲಿಂ ಪ್ರಾಬಲ್ಯದ ಲಕ್ಷದ್ವೀಪದಲ್ಲಿ ಗೋಮಾಂಸ ನಿಷೇಧ, ಅಪರಾಧ ಪ್ರಮಾಣ ತೀರಾ ಕಡಿಮೆ ಇದ್ದರೂ ಗೂಂಡಾ ಕಾಯ್ದೆ ಅನುಷ್ಠಾನ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಹೊಂದಿರುವ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸುವುದು ಸೇರಿದೆ.