* ಲಕ್ಷದ್ವೀಪ ಉಳಿಸಿ ಅಭಿಯಾನಕ್ಕೆ ನಟ ಪೃಥ್ವಿರಾಜ್ ಸಾಥ್* ಅಲ್ಲಿಯ ಜನರ ಅಸ್ಮಿತೆಯನ್ನು ಕಸಿದುಕೊಳ್ಳುವ ಕೆಲಸವಾಗುತ್ತಿದೆ* ಲಕ್ಷದ್ವೀಪದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗುತ್ತಿದೆ

ಲಕ್ಷದ್ವೀಪ (ಮೇ 24) ಶಾಂತಿಯುತವಾಗಿ ಬದುಕುತ್ತಿರುವ ಜನರ ಜೀವನವನ್ನು ಕೆಡಿಸುವುದು ಅಭಿವೃದ್ಧಿ ಹೇಗಾಗುತ್ತದೆ ಎಂದು ಮಲಯಾಳಂ ನಟ ಪೃಥ್ವಿರಾಜ್ ಪ್ರಶ್ನೆ ಮಾಡಿದ್ದಾರೆ. ಲಕ್ಷದ್ವೀಪದ ಹೊಸ ಆಡಳಿತಾಧಿಕಾರಿ ತೆಗೆದುಕೊಳ್ಳುತ್ತಿರುವ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಅನಾರ್ಕಲಿ ಶೂಟಿಂಗ್ ವೇಳೆ ಲಕ್ಷದ್ವೀಪದಲ್ಲಿ ದಿನ ಕಳೆದಿದ್ದದೇನೆ. ಅಲ್ಲಿಯ ಜನರು ಮತ್ತು ಪ್ರದೇಶ ಆಪ್ತವಾಗಿತ್ತು. ಕಳೆದ ಕೆಲ ದಿನಗಳಿಂದ ಅರಾಜಕತೆ ವಾತಾವರಣ ನಿರ್ಮಾಣವಾಗಿತ್ತಿದೆ ಎಂದು ಅಲ್ಲಿಯ ನಾಗರಿಕರು ನನಗೆ ಸಂದೇಶ ಕಳಿಸಿದ್ದಾರೆ. ಅಲ್ಲಿ ಶುರುವಾಗಿರಿಉವ ಸೇವ್ ಲಕ್ಷದ್ವೀಪ ಅಭಿಯಾನಕ್ಕೆ ಕೈಜೋಡಿಸುತ್ತೇನೆ ಎಂದಿದ್ದಾರೆ.

ಮಂಗಳೂರು-ಲಕ್ಷದ್ವೀಪ ನಡುವೆ ಪ್ಯಾಸೆಂಜರ್ ಹಡಗು

ಲಕ್ಷದ್ವೀಪದ ಆಡಳಿತದ ಹೊಣೆಗಾರಿಕೆ ಹೊತ್ತಿರುವ ಪ್ರಫುಲ್ ಪಟೇಲ್ ಹೊಸ ಕಾನೂನು ಜಾರಿ ಮಾಡಿದ್ದಾರೆ. ಬೀಫ್ ಗೆ ನಿರ್ಬಂಧ ಹೇರಲಾಗುತ್ತಿದೆ. ಎನ್‌ಆರ್ ಸಿ ಮತ್ತು ಸಿಎಎ ವಿರೋಧಿ ಬ್ಯಾನರ್ ಗಳನ್ನು ಕಿತ್ತೆಸೆಯಲಾಗಿದೆ. ಸುಧಾರಣೆ ಹೆಸರಿನಲ್ಲಿ ಲಕ್ಷದ್ವೀಪದ ಜನರ ಅಸ್ಮಿತೆಯನ್ನು ಕೊಲೆ ಮಾಡಲಾಗುತ್ತಿದೆ ಎಂದು ನಟ ಆರೋಪಿಸಿದ್ದಾರೆ.

ನಾನು 6 ನೇ ತರಗತಿಯಲ್ಲಿದ್ದಾಗ ಪ್ರವಾಸಕ್ಕೆಂದು ಲಕ್ಷದ್ವೀಪಕ್ಕೆ ಹೋಗಿದ್ದೆ. ಅಲ್ಲಿಂದ ಆ ಪ್ರದೇಶದ ಮೇಲೆ ವಿಶೇಷ ಬಾಂಧವ್ಯ. ವರ್ಷಗಳ ನಂತರ ಅನಾರ್ಕಲಿಯೊಂದಿಗೆ ಚಲನಚಿತ್ರ ನಿರ್ಮಾಣ ಅಲ್ಲೇ ಆಯಿತು. ನಾನು ಕವರತಿಯಲ್ಲಿ ಎರಡು ತಿಂಗಳ ಕಾಲ ಕಳೆದಿದ್ದೇನೆ ಮತ್ತು ಜೀವಮಾನವಿಡೀ ಸಾಕಾಗುವಷ್ಟು ನೆನಪು ಇದೆ. ದ್ವೀಪದ ಜನರೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ. 

Scroll to load tweet…