Asianet Suvarna News Asianet Suvarna News

ರಾಮ್‌ದೇವ್ ಮಾತಿಗೆ ನಿರ್ಬಂಧವಿಲ್ಲ ಎಂದ ಹೈಕೋರ್ಟ್

  • ರಾಮ್‌ದೇವ್ ಕೊರೋನಿಲ್ ಕಿಟ್ ಪರವಾಗಿ ಮಾತನಾಡುವುದನ್ನು ನಿರ್ಬಂಧಿಸಲಾಗುವುದಿಲ್ಲ ಎಂದ ದೆಹಲಿ ಹೈಕೋರ್ಟ್
  • ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕಾನೂನಿನಡಿಯಲ್ಲಿ ಅವರು ಅಭಿಪ್ರಾಯ ತಿಳಿಸಲು ಅವರು ಅರ್ಹ ಎಂದ ನ್ಯಾಯಾಲಯ
No curbs on Ramdev he is entitled to his opinion says HC dpl
Author
Bangalore, First Published Jun 4, 2021, 11:59 AM IST

ದೆಹಲಿ(ಜೂ.04): ಯೋಗ ಇನ್‌ಸ್ಟ್ರಕ್ಟರ್ ಹಾಗೂ ಉದ್ಯಮಿ ರಾಮ್‌ದೇವ್ ಅವರು ಅಲೋಪತಿ ವಿರುದ್ಧ ಅಥವಾ ಪತಂಜಲಿ ಕೊರೋನಿಲ್ ಕಿಟ್ ಪರವಾಗಿ ಮಾತನಾಡುವುದನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕಾನೂನಿನಡಿಯಲ್ಲಿ ಅವರು ಅಭಿಪ್ರಾಯ ತಿಳಿಸಲು ಅವರು ಅರ್ಹರಾಗಿದ್ದಾರೆ ಎಂದಿದ್ದಾರೆ.

ದೆಹಲಿ ಮೆಡಿಕಲ್ ಅಸೋಸಿಯೇಶನ್ (ಡಿಎಂಎ) ಸಲ್ಲಿಸಿದ್ದ ಮೊಕದ್ದಮೆಯನ್ನು ನ್ಯಾ. ಸಿ. ಹರಿ ಶಂಕರ್ ಅವರ ಏಕ-ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿದ್ದು, ಕೊರೋನಾಗೆ ಪರಿಹಾರವಾಗಿ ಕೊರೊನಿಲ್ ಔಷಧವನ್ನು ರಾಮ್‌ದೇವ್ ತಪ್ಪಾಗಿ ಪ್ರತಿನಿಧಿಸಿದ್ದಾರೆ. ಆಧುನಿಕ ಔಷಧ ಅಥವಾ ಅಲೋಪತಿಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿದ್ದಾರೆ.

1,000 ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಪರಿವರ್ತನೆ; ಹೊಸ ಬಾಂಬ್ ಸಿಡಿಸಿದ ಬಾಬಾ!

ಇದಕ್ಕೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು. ಮುಂದಿನ ವಿಚಾರಣೆಯವರೆಗೂ ಆಧುನಿಕ ಔಷಧದ ಪರಿಣಾಮಗಳ ಬಗ್ಗೆ ಮಾತನಾಡಬಾರದೆಂದು ರಾಮದೇವ್ ಅವರಿಗೆ ಸಲಹೆ ನೀಡಲಾಗಿದೆ. ಆದರೆ ಅವರ ಔಪಚಾರಿಕ ಉತ್ತರವನ್ನು ಪಡೆಯದೆ ನಿರ್ಬಂಧ ವಿಧಿಸಿ ಆದೇಶ ನೀಡಲು ನಿರಾಕರಿಸಿದ್ದಾರೆ.

ಮೇ 22 ರಂದು ತಮ್ಮ ಕ್ಲೈಂಟ್ ವೈದ್ಯರ ವಿರುದ್ಧದ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ರಾಮದೇವ್ ಅವರ ವಕೀಲ ರಾಜೀವ್ ನಯ್ಯರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಮ್‌ದೇವ್ ತಮ್ಮ ಉತ್ತರವನ್ನು ಸಲ್ಲಿಸಲು ಮೂರು ವಾರಗಳ ಕಾಲಾವಕಾಶವಿದೆ.

Follow Us:
Download App:
  • android
  • ios