ಮಾದರಿ ಗ್ರಾಮ;  ಇಲ್ಲಿವರೆಗೆ ಒಂದೇ ಒಂದು ಕೊರೋನಾ ಕೇಸ್ ಇಲ್ಲ

* ಕೊರೋನಾ ಮೆಟ್ಟಿ ನಿಂತ ಮಾದರಿ ಗ್ರಾಮ
* ಇಲ್ಲಿಯವರೆಗೆ ಒಂದೇ ಒಂದು ಪ್ರಕರಣ ಇಲ್ಲ
* ಆರಂಭದಿಂದಲೂ ಜಾಗೃತೆ ಮತ್ತು ಮುನ್ನೆಚ್ಚರಿಕೆಗೆ ಆದ್ಯತೆ

No COVID Case Reported From This Odisha Village Since Pandemic Began mah

ಓರಿಸ್ಸಾ(ಮೇ 24)  ಕೊರೋನಾ ಸೋಂಕಿನ ವಿರುದ್ಧ ಇಡೀ ದೇಶವೇ  ಹೋರಾಟ ಮಾಡಲು ಆರಂಭಿಸಿ ವರ್ಷವೇ ಕಳೆದಿದೆ. ಆದರೆ ಓರಿಸ್ಸಾದ ಹಳ್ಳಿಯೊಂದು ಎಲ್ಲ ಸೋಂಕನ್ನು ಮೀರಿ ನಿಂತಿದೆ. 

COVID ಸಾಂಕ್ರಾಮಿಕದ ಮಧ್ಯೆ, ಒರಿಸ್ಸಾದ ಹಳ್ಳಿಯೊಂದು ರಾಜ್ಯಕ್ಕೆ ಮಾದರಿಯಾಗಿದೆ. ಗಂಜಾಂ ಜಿಲ್ಲೆಯ ಖಾಲಿಕೋಟೆ ಬ್ಲಾಕ್‌ನ ದಾನಪುರ ಪಂಚಾಯತ್‌ನ ಕಾರಂಜರ ಗ್ರಾಮದಲ್ಲಿ ಇಲ್ಲಿವರೆಗೆ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗಿಲ್ಲ.  2020 ರಲ್ಲಿ ಸೋಂಕು ಕಾಣಿಸಿಕೊಂಡು ದೇಶವನ್ನು ಆವರಿಸುತ್ತಿದ್ದರೂ ಈ  ಗ್ರಾಮಕ್ಕೆ ಕಾಲಿಟ್ಟಿಲ್ಲ.

ಚೀನಾ ಲ್ಯಾಬ್ ನಿಂದಲೇ ಕೊರೋನಾ ಸ್ಫೋಟ

ಗ್ರಾಮದಲ್ಲಿ 261 ಮನೆಗಳು  ಇದ್ದು ಅಂದಾಜು 1234 ಜನ ವಾಸಮಾಡುತ್ತಿದ್ದಾರೆ.  ರೋಗ ಲಕ್ಷಣದ ಬಗ್ಗೆ ಇಲ್ಲಿವರೆಗೆ ಒಂದೇ ಒಂದು ಕೇಸ್ ಬಂದಿಲ್ಲ. ಜನವರಿಯಲ್ಲಿ  32 ಜನರಿಗೆ ರಾಂಡಮ್ ಟೆಸ್ಟ್ ನಡೆಸಿದಾಗ ಎಲ್ಲರಿಗೂ ನೆಗೆಟಿವ್ ಬಂದಿತ್ತು.

ಕೊರೋನಾ ದೇಶದಲ್ಲಿ ಕಾಣಿಸಿಕೊಂಡಾಗಿನಿಂದಲೂ ನಾವು ಜಾಗೃತಿ ಮೂಡಿಸಿಕೊಂಡೇ ಬಂದಿದ್ದೆವೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಎಲ್ಲರೂ ಪಾಲನೆ ಮಾಡುತ್ತಿದ್ದಾರೆ.  ಇದೆಲ್ಲದರ ಪರಿಣಾಮ ನಮ್ಮ ಗ್ರಾಮ ಸೋಂಕು ಮುಕ್ತವಾಗಿದೆ ಎಂದು  ಕಾರಂಜರಾ ಗ್ರಾಮ ಸಮುದಾಯದ ಅಧ್ಯಕ್ಷ ತ್ರಿನಾಥ್ ಬೆಹೆರಾ ಹೇಳಿದ್ದಾರೆ. 

ಒಟ್ಟಿನಲ್ಲಿ ನಾಗರಿಕರು ಒಟ್ಟಾಗಿ ಹೋರಾಟ  ಮಾಡಿದರೆ, ಜಾಗೃತಿ ಕ್ರಮ ಅನುಸರಿಸಿದರೆ ಕೊರೋನಾದಿಂದ ದೂರವಿರಬಹುದು ಎಂಬುದನ್ನು ಈ ಗ್ರಾಮ ಸಾಬೀತು ಮಾಡಿದೆ.

"

 

 

Latest Videos
Follow Us:
Download App:
  • android
  • ios