ವುಹಾನ್(ಮೇ.24): ಕೊರೋನಾ ವೈರಸ್ ನೀಡಿದ ಹೊಡೆತದಿದ  ಜಗತ್ತಿನ ಯಾವ ದೇಶಗಳು ಚೇತರಿಕೆ  ಕಂಡಿಲ್ಲ. ನ್ಯೂಜಿಲೆಂಡ್ ಚೇತರಿಸಿಕೊಂಡಿದ್ದರೂ, ಆತಂಕ ಕಡಿಮೆಯಾಗಿಲ್ಲ. ಇತ್ತ ತೀವ್ರ ಹೊಡೆತ ಅನುಭವಿಸಿದ ಅಮೆರಿಕ ಆರಂಭಿಕ ಯಶಸ್ಸು ಸಾಧಿಸಿದ್ದರೂ, ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇನ್ನೂ ಭಾರತದ ಪರಿಸ್ಥಿತಿ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಈ ಮಾರಣಾಂತಿಕ ಕೊರೋನಾ ವೈರಸ್ ಮೂಲ ಚೀನಾ ಅನ್ನೋ ಆರೋಪಗಳನ್ನು ಡ್ರ್ಯಾಗನ್ ರಾಷ್ಟ್ರ ನಿರಾಕರಿಸಿದೆ. ಆದರೆ ಹಲವು ದಾಖಲೆಗಳು ಇದು ಚೀನಾದಿಂದ ಆಗಮಿಸಿದ ವೈರಸ್ ಅನ್ನೋದನ್ನು ಪುಷ್ಠೀಕರಿಸುತ್ತದೆ. ಇದೀಗ ಮತ್ತೊಂದು ದಾಖಲೆ ಲಭ್ಯವಾಗಿದೆ.

ವುಹಾನ್‌ನ ಮತ್ತೊಂದು ಆಸ್ಪತ್ರೆಗೆ WHO ತಂಡ ಭೇಟಿ!

ಚೀನಾದ ವುಹಾನ್‌ನಲ್ಲಿ ವಿರೋಲಜಿ ಸಂಸ್ಥೆಯಲ್ಲಿ ಕೊರೋನ ವೈರಸ್ ಸ್ಫೋಟಗೊಂಡು ಇದೀಗ ವಿಶ್ವಕ್ಕೆ ವ್ಯಾಪಿಸಿದೆ. ಈ ಆರೋಪವನ್ನು ಚೀನಾ ಅದೆಷ್ಟೋ ಅಲ್ಲಗೆಳೆದರೂ ಕೆಲ ದಾಖಲೆಗಳು ಸತ್ಯ ಹೇಳುತ್ತಿದೆ. ಇದೀಗ ವುಹಾನ್ ವಿರೋಲಜಿ ಸಂಸ್ಥೆಯಲ್ಲಿನ ಸಂಶೋಧಕರು ಕೊರೋನಾ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲೆಗಳ ಅಮೆರಿಕ ಗುಪ್ತಚರ ಇಲಾಖೆ ಸಂಗ್ರಹಿಸಿದೆ ಅನ್ನೋ ವರದಿಯನ್ನು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದೆ.

ಈ ಆಸ್ಪತ್ರೆ ದಾಖಲೆಗೂ ಕೊರೋನಾ ಹುಟ್ಟಿಗೂ ಏನ್ ಸಂಬಂಧ ಅನ್ನೋ ಕುತೂಹಲ ಸಹಜ. ಕೊರೋನಾ ವೈರಸ್ 2019ರ ಡಿಸೆಂಬರ್ ತಿಂಗಳಲ್ಲಿ ವುಹಾನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ಅಷ್ಟೇ ವೇಗದಲ್ಲಿ ಸಂಪೂರ್ಣ ವುಹಾನ್ ಆವರಿಸಿಕೊಂಡಿತು. 2020ರ ಆರಂಭದಿಂದ ಚೀನಾ ಸೇರಿದಂತೆ ಇತರ ದೇಶಗಳಿಗೆ ಹಬ್ಬತೊಡಗಿತು. ವುಹಾನ್ ಲ್ಯಾಬ್‌ನಲ್ಲಿನ ಸಂಶೋಧಕರು ನವೆಂಬರ್ ತಿಂಗಳಲ್ಲೇ ಕೊರೋನಾ ರೋಗಲಕ್ಷಣ ಹಾಗೂ ಈ ಸಂಬಂಧಿತ ಕಾಯಿಲೆಯಿಂದ ಆಸ್ಪತ್ರೆ ದಾಖಲಾದ ವರದಿ ಲಭ್ಯವಾಗಿದೆ.

ಚೀನಾ ಕೊರೋನಾ ಕೇಂದ್ರಕ್ಕೆ WHO ತಂಡ, ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ!.

ವುಹಾನ್ ಲ್ಯಾಬ್ ಸೃಷ್ಟಿಸಿದ ಕೊರೋನಾದಿಂದ ಸಂಶೋಧಕರಿರೆಗೆ ಆಪತ್ತು ಎದುರಾಗಿತ್ತು. ಈ ಸಂಶೋಧಕರು ಆಸ್ಪತ್ರೆ ದಾಖಲಾಗೋ ಮೂಲಕ ಕೊರೋನಾವನ್ನು ವುಹಾನ್ ಲ್ಯಾಬ್‌ನಿಂದ ಹೊರಗಡೆ ತಂದಿದ್ದಾರೆ. ಇಲ್ಲಿಂದ ವುಹಾನ್ ಮಾರುಕಟ್ಟೆ, ಚೀನಾ, ಭಾರತ, ಅಮೆರಿಕ, ಇಟಲಿ, ಬ್ರೆಜಿಲ್ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ವ್ಯಾಪಿಸಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಹೇಳಿದೆ.

ಕೊರೋನಾ ವೈರಸ್ ಹುಟ್ಟಿಗೆ ಚೀನಾ ಕಾರಣ ಅನ್ನೋ ವಾದಕ್ಕೆ ಹಲವು ದಾಖಲೆಗಳಿವೆ. ಎಲ್ಲಾ ದಾಖಲೆಗಳು ಒಂದಕ್ಕೊಂದು ಪೂರಕವಾಗಿದೆ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಹುಟ್ಟಿನ ತನಿಖೆಯನ್ನು ಚುರುಕುಗೊಳಿಸಿದೆ ಸದ್ಯ ಲಭ್ಯವಿರುವ ದಾಖಲೆ ಪ್ರಕಾರ ಕೊರೋನಾ ಹುಟ್ಟಿಗೆ ಚೀನಾ ಕಾರಣ ಅನ್ನೋ ಆರೋಪ ಮಾಡಲು ಸಾಧ್ಯವಿಲ್ಲ. ಈ ಹೇಳಿಕೆಗೆ ಮತ್ತಷ್ಟು ಪುರಾವೆಗಳ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಕ್ಕಳ ರಕ್ಷಿಸಲು ಚಿಕ್ಕ ಮಕ್ಕಳಿರುವ ಪೋಷಕರಿಗೆ ಬೇಗ ಲಸಿಕೆ!.

ಜರ್ನಲ್ ವರದಿ ಕುರಿತು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತ, ಕೊರೋನಾ ಹುಟ್ಟಿನ ಕುರಿತು ತನಿಖೆ ಮುಂದುವರಿಸಿದೆ. ಸಾಂಕ್ರಾಮಿಕ ಮೂಲದ ಬಗ್ಗೆ ತಜ್ಞರು ನಡೆಸುವ ಮೌಲ್ಯಮಾಪನವನ್ನು ಬೆಂಬಲಿಸಲು ಯು.ಎಸ್. ಸರ್ಕಾರ ಹಾಗೂ WHO ಮತ್ತು ಇತರ ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು  ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.