ಅವಿಶ್ವಾಸ ನಿರ್ಣಯ, ಮಣಿಪುರ ಹಿಂಸಾಚಾರ ಕುರಿತು ಮೌನ ಮುರಿಯುವಂತೆ ವಿಪಕ್ಷಗಳ ಪ್ರತಿಭಟನೆ ನಡುವೆ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಒಂದೊಂದೆ ವಿಚಾರ ಹಿಡಿದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ ವಿಪಕ್ಷಗಳ ಹೊಸ ಮೈತ್ರಿಒಕ್ಕೂಟವನ್ನು ತಿವಿದ ಮೋದಿ, ಯುಪಿಎ ಒಕ್ಕೂಟದ ಅಂತ್ಯಕ್ರಿಯೆ ಮಾಡಿದ ಕುತೂಹಲಕರ ವಿಚಾರವನ್ನು ಮೋದಿ ಹೇಳಿದ್ದಾರೆ.

ನವದೆಹಲಿ(ಆ.10) ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳಿಗೆ ಪ್ರಧಾನಿ ಮೋದಿ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ. ಮಣಿಪುರ ಹಿಂಸಾಚಾರ ಸೇರಿದಂತೆ ವಿಪಕ್ಷಗಳ ಪ್ರತಿ ಆರೋಪಕ್ಕೆ ಉತ್ತರಿಸಿದ ಮೋದಿ, ವಿಪಕ್ಷಗಳ ಒಕ್ಕೂಟವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿ ನೋವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ವಿಪಕ್ಷಗಳು ಒಗ್ಗಟ್ಟಾಗಿ ಬೆಂಗಳೂರಿನಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಎಲ್ಲಾ ವಿಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದ ಅಂತ್ಯಸಂಸ್ಕಾರ ಮಾಡಿದ್ದಾರೆ. ಎಲ್ಲಾ ಪಕ್ಷಗಳು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇಂತಹ ದೌರ್ಭಾಗ್ಯ ಕಾಂಗ್ರೆಸ್‌ಗೆ ಬಂದಿದೆ ಎಂದು ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೈತ್ರಿ ಒಕ್ಕೂಟ ಮಾಡಿದೆ. ಈ ಮೂಲಕ ಬಿಜೆಪಿ ಮಣಿಸಲು ಸಜ್ಜಾಗಿದೆ. ವಿಪಕ್ಷಗಳ ಹೊಸ ಒಕ್ಕೂಟವನ್ನು ತಿವಿದ ಮೋದಿ, ಕಾಂಗ್ರೆಸ್ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ. ಪಾಟ್ನಾ ಬಳಿಕ ವಿಪಕ್ಷಗಳ ಒಕ್ಕೂಟ ಬೆಂಗಳೂರಿನಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಂತ್ಯಕ್ರಿಯೆ ನಡೆಸಿದೆ. 

ಕಾಂಗ್ರೆಸ್ ಅತೀವ ಉತ್ಸಾಹದಲ್ಲಿ ಈ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದೆ. ಜೊತೆಗೆ ಕಾಂಗ್ರೆಸ್ ಉತ್ಸವದ ರೂಪದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಕಾರಣ ಯುಪಿಎ ಒಕ್ಕೂಟದ ಅಂತ್ಯಸಂಸ್ಕಾರ ನಡೆಸಿದ ವಿಪಕ್ಷಗಳು, ಹೊಸ ಪೈಂಟ್ ಬಳಿದಿದೆ. ಇದನ್ನು ಕಾಂಗ್ರೆಸ್ ಉತ್ಸವನ್ನಾಗಿ ಕೊಂಡಾಡಿದೆ. ಜೊತೆಗೆ ಈ ವಿಪಕ್ಷಗಳ ಒಕ್ಕೂಟದಲ್ಲೂ ಭಾರತವನ್ನು ವಿಭಜಿಸಿದೆ ಎಂದು ಮೋದಿ ಹೇಳಿದ್ದಾರೆ.

ತುಕಡೆ, ತುಕಡೆ ಗ್ಯಾಂಗ್ ಜೊತೆ ಸೇರಿ ಭಾರತವನ್ನು ತುಕಡೆ ಮಾಡಲು ಹೊರಟ ಕಾಂಗ್ರೆಸ್ ಹಾಗೂ ವಿಪಕ್ಷ ಇದೀಗ ಒಕ್ಕೂಟದಲ್ಲೂ ಭಾರತವನ್ನು ಒಗ್ಗೂಡಿಸು ಕೆಲಸ ಮಾಡಲಿಲ್ಲ. ವಿಪಕ್ಷಗಳು ಒಕ್ಕೂಟದ ಹೆಸರನ್ನು I.N.D.I.A ಎಂದಿಟ್ಟಿದ್ದಾರೆ. ಇಲ್ಲೂ ಕೂಡ ಇಂಡಿಯಾ ಒಗ್ಗೂಡಲಿಲ್ಲ. ಡಾಟ್ ಮೂಲಕ ಬೇರ್ಪಡಿಸುವ ಕೆಲಸ ಮಾಡಿದ್ದಾರೆ ಎಂದು ಮೋದಿ ತಿರುಗೇಟು ನೀಡಿದ್ದಾರೆ.