ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಮಾತು ಆರಂಭಿಸುತ್ತಿದ್ದಂತೆ ಸದನದಿಂದ ಹೊರನಡೆದ ವಿಪಕ್ಷ!
ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಣಿಪುರ ಕುರಿತು ಮಾತು ಆರಂಭಿಸುತ್ತಿದ್ದಂತೆ ವಿಪಕ್ಷಗಳು ಸದನದಿಂದ ಹೊರನಡೆದಿದೆ. ಮಣಿಪುರ ಹಿಂಸಾಚಾರದಲ್ಲಿ ಹಲವರು ಬಲಿಯಾಗಿದ್ದಾರೆ. ಮಹಿಳೆಯರ ಮೇಲೆ ಅಕ್ಷ್ಯಮ ಅಪರಾಧ ನಡೆದಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ವಿಪಕ್ಷಗಳು ಮೋದಿ ಮಾತು ಕೇಳಿಸದೆ ಹೊರನಡೆದಿದೆ.
ನವದೆಹಲಿ(ಆ.10) ಮಣಿಪುರ ಹಿಂಸಾಚರ ಘಟನೆ ಕುರಿತು ಮೌನ ಮುರಿಯುವಂತೆ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳು, ಪ್ರಧಾನಿ ಮೋದಿ ಮಾತು ಆರಂಭಿಸುತ್ತಿದ್ದಂತೆ ಭಾರಿ ಗದ್ದಲ ಆರಂಭಿಸಿತು. ಪ್ರತಿ ಮಾತಿಗೂ ಮಣಿಪುರ ವಿಚಾರ ಪ್ರಸ್ತಾಪಿಸಿದ ವಿಪಕ್ಷಗಳು ಗಲಾಟೆ ಮಾಡಿತ್ತು. ಇತ್ತ ಮೋದಿ ಮಣಿಪುರ ಹಿಂಸಾಚಾರ ಕುರಿತು ಮಾತು ಆರಂಭಿಸುತ್ತಿದ್ದಂತೆ ವಿಪಕ್ಷಗಳು ಮೋದಿ ಭಾಷಣ ವಿರೋಧಿಸಿ ಸದನದಿಂದ ಹೊರನಡೆದಿದೆ. ಇದೇ ವೇಳೆ ಮೋದಿ ಚರ್ಚೆಗೆ ವಿಪಕ್ಷಗಳಿಗೆ ಧೈರ್ಯವಿಲ್ಲ. ಹೀಗಾಗಿ ಸದನದಿಂದ ಹೊರನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಹಲವು ಕುಟುಂಬಗಳು ಬಲಿಯಾಗಿದೆ. ಮಹಿಳೆಯರ ಮೇಲೆ ಗಂಭೀರ ಅಪರಾಧ ನಡೆದಿದೆ. ಇದು ಅಕ್ಷ್ಯಮ್ಯ ಅಪರಾಧವಾಗಿದೆ. ಈ ಆರೋಪಿಗಳಿಗೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ಸದನದ ಮೂಲಕ ಭಾರತಕ್ಕೆ ವಿಶ್ವಾಸ ನೀಡುತ್ತೇನೆ. ಮಣಿಪುರದಲ್ಲಿ ಶೀಘ್ರದಲ್ಲೇ ಶಾಂತಿ ನೆಲೆಸಲಿದೆ. ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಮಣಿಪುರದ ಮಹಿಳೆಯರು ಹಾಗೂ ನಾಗರೀಕರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇನೆ. ಈ ದೇಶ ನಿಮ್ಮ ಜೊತೆಗಿದೆ. ಈ ಸದನ ನಿಮ್ಮ ಜೊತೆಗಿದೆ. ಮಣಿಪುರದ ಅಭಿವೃದ್ಧಿ ಅದೇ ವೇಗದಲ್ಲಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಮಾತು ಆರಂಭಿಸುತ್ತಿದ್ದಂತೆ ಸದನದಿಂದ ಹೊರನಡೆದ ವಿಪಕ್ಷ!
ಈ ಸದನದಲ್ಲಿ ಭಾರತ ಮಾತಾ ಕುರಿತು ಮಾತುಗಳನ್ನಾಡಿದ್ದಾರೆ. ಬಳಸಿರುವ ಭಾಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೋದಿ, ಕೆಲವರಿಗೆ ಭಾರತ ಮಾತೆಯನ್ನು ಮೃತ್ಯ ರೂಪದಲ್ಲಿ ನೋಡಲು ಬಯಸುತ್ತಿರುವುದು ಯಾಕೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
ನಿನ್ನೆ ಸದನದಲ್ಲಿ ಅಮಿತ್ ಶಾ ಸತತ 2 ಗಂಟೆಗಳ ಕಾಲ ಮಾತನಾಡಿದ್ದಾರೆ. ಮಣಿಪುರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೂ ಮೊದಲು ಮಣಿಪುರ ವಿಚಾರ ಚರ್ಚೆಗೆ ಗೃಹ ಸಚಿವರು ಪತ್ರ ಬರೆದಿದ್ದಾರೆ. ಆದರೆ ವಿಪಕ್ಷಗಳಿಗೆ ಚರ್ಚೆ ಮಾಡುವ ಧೈರ್ಯವಿಲ್ಲ. ಹೊರಗಡೆ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಮಣಿಪುರದಲ್ಲಿನ ಹಿಂಸಾಚಾರ ನಿಯಂತ್ರಿಸಿ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿನ ಹಿಂಸಾಚಾರದ ಹಿಂದೆ ಕಾಂಗ್ರೆಸ್ ಇತಿಹಾಸದಲ್ಲಿ ಮಾಡಿದ ಹಲವು ತಪ್ಪುಗಳಿವೆ. ಈಶಾನ್ಯ ರಾಜ್ಯಗಳಲ್ಲಿನ ಗಲಭೆಯಲ್ಲಿ ನಾಗರೀಕ ಪಾತ್ರವಿಲ್ಲ, ಇದರಲ್ಲಿ ಕಾಂಗ್ರೆಸ್ ರಾಜಕೀಯ ಅಡಗಿದೆ ಎಂದು ಮೋದಿ ಹೇಳಿದ್ದಾರೆ.
ವಿಪಕ್ಷಗಳ ಅವಿಶ್ವಾಸ ಬಿಜೆಪಿಗೆ ಶುಭ ಸಂಕೇತ, 2019ರ ಘಟನೆ ನೆನೆಪಿಸಿದ ಪ್ರಧಾನಿ ಮೋದಿ!
ಮಣಿಪುರದಲ್ಲಿ ಗ್ರಂಥಾಲಯನ್ನು ಭಸ್ಮ ಮಾಡುವ ಅಭಿಯಾನ, ಮಣಿಪುರದಲ್ಲಿ ದೇವಸ್ಥಾನಗಳ ಗಂಟೆ ಸಂಜೆ ಬಳಿಕ ಸ್ಥಗಿತವಾಗಿರುವ ಕಾಲವಿತ್ತು, ಆಗ ಕಾಂಗ್ರೆಸ್ ಸರ್ಕಾರವಿತ್ತು. ಮಣಿಪುರದದ ಆತಂಕವಾದಿ ಜೊತೆ ಕೈಜೋಡಿಸಿ ಸರ್ಕಾರ ಆಡಳಿತ ನಡೆಸುತ್ತಿ ಕಾಂಗ್ರೆಸ್, ಇದೀಗ ಸುಳ್ಳು ಹೇಳುತ್ತಾ ರಾಜಕೀಯ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.