ನಾನು ಆರೋಗ್ಯವಾಗಿದ್ದೇನೆ, ಆಸ್ಪತ್ರೆ ದಾಖಲು ಆತಂಕಕ್ಕೆ ಸ್ಪಷ್ಟನೆ ನೀಡಿದ ಉದ್ಯಮಿ
ಟಾಟಾ ಗ್ರೂಪ್ ಮಾಜಿ ಚೇರ್ಮೆನ್ ರತನ್ ಟಾಟಾ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ ಅನ್ನೋ ಆತಂಕಕ್ಕೆ ಖುದ್ದು ರತನ್ ಟಾಟಾ ಸ್ಪಷ್ಟನೆ ನೀಡಿದ್ದಾರೆ.
ಮುಂಬೈ(ಅ.07) ಭಾರತದ ಶ್ರೀಮಂತ ಉದ್ಯಮಿ, ಸಾಮಾಜಿಕ ಕಾರ್ಯ, ದಾನ, ದೇಣಿಗೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಶೇಷ ವ್ಯಕ್ತಿತ್ವದ ರತನ್ ಟಾಟಾ ಆರೋಗ್ಯದಲ್ಲಿ ಏರಪೇರಾಗಿದೆ ಅನ್ನೋ ಮಾಹಿತಿ ಎಲ್ಲೆಡೆ ಹರಿದಾಡಿತ್ತು. ಆದರೆ ಆತಂಕದ ಕುರಿತು ಖುದ್ದು ರತನ್ ಟಾಟಾ ಸ್ಪಷ್ಟನೆ ನೀಡಿದ್ದಾರೆ. ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಸಾಮಾನ್ಯ ಮೆಡಿಕಲ್ ಚೆಕ್ಅಪ್‌ಗೆ ಒಳಗಾಗಿದ್ದೇನೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ನಾನು ಆರೋಗ್ಯವಾಗಿದ್ದೇನೆ. ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ರತನ್ ಟಾಟಾ ಸ್ಪಷ್ಟನೆ ನೀಡಿದ್ದಾರೆ.
ಆರೋಗ್ಯ ಕ್ಷೀಣಿಸಿರುವ ವದಂತಿಗಳಿಗೆ ರತನ್ ಟಾಟಾ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನನ್ನ ಆರೋಗ್ಯ ಸಂಬಂಧಿಸಿದ ಕೆಲ ವದಂತಿಗಳು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಮೂಲಕ ನಾನು ಸ್ಪಷ್ಟಪಡಿಸಲು ಬಯಸುತ್ತಿದ್ದೇನೆ, ಈ ಆರೋಗ್ಯ ವದಂತಿಗಳು ಸಂಪೂರ್ಣ ಸುಳ್ಳು. ನನ್ನ ವಯಸ್ಸು ಹಾಗೂ ಆರೋಗ್ಯ ಕಾರಣದಿಂದ ಮೆಡಿಕಲ್ ತಪಾಸಣೆಗೆ ಒಳಗಾಗಿದ್ದೇನೆ. ಯಾರು ಆತಂಕಪಡುವ ಅಗತ್ಯವಿಲ್ಲ, ನಾನು ಆರೋಗ್ಯವಾಗಿದ್ದೇನೆ. ಮಾಧ್ಯಮ ಹಾಗೂ ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಹಾಗೂ ಹರಡಬೇಡಿ ಎಂದು ರತನ್ ಟಾಟಾ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!
ಅ.6ರ ಮಧ್ಯರಾತ್ರಿ ರತನ್ ಟಾಟಾ ಬಿಪಿ ದಿಢೀರ್ ಕುಸಿತ. ಮಧ್ಯರಾತ್ರಿ 12.30 - 1 ಗಂಟೆ ಸುಮಾರಿಗೆ ರತನ್ ಟಾಟಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ಪಗೆ ದಾಖಲಿಸಲಾಗಿದೆ ಅನ್ನೋ ಮಾಹಿತಿ ಎಲ್ಲೆಡೆ ಹರಿದಾಡಿತ್ತು. ಐಸಿಯುನಲ್ಲಿ ರತನ್ ಟಾಟಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಅನ್ನೋ ಮಾಹಿತಿಗಳು ಹರಿದಾಡಿತ್ತು. ರತನ್ ಟಾಟಾ ಆಸ್ಪತ್ರೆ ದಾಖಲಾಗಿರುವುದು ನಿಜ. ಆದರೆ ವಯೋ ಸಹಜ ಸಮಸ್ಯೆಗಳ ಚೆಕ್ ಅಪ್ ಸಲುವಾಗಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಬಿಪಿಯಲ್ಲಿ ಸ್ವಲ್ಪ ಏರಿಳಿತವಾಗಿದೆ. ಹೀಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ.
86 ವರ್ಷದ ಉದ್ಯಮಿ ರತನ್ ಟಾಟಾ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಶಾರುಖ್ ಅಸ್ಪಿ ಗೋಲ್‌ವಾಲ್ಲಾ ಆರೋಗ್ಯ ತಪಾಸಣೆ ಮಾಡಿದ್ದರೆ.. ಗೋಲ್‌ವಾಲ್ಲಾ ನೇತೃತ್ವದ ತಂಡ ರತನ್ ಟಾಟಾ ಆರೋಗ್ಯದ ಮೇಲೆ ನಿಗಾ ವಹಿಸಿದೆ.
ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಟಾಟಾ ಗ್ರೂಪ್ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ರತನ್ ಟಾಟಾ, ಟಾಟಾ ಚಾರೀಟೇಬಲ್ ಟ್ರಸ್ಟ್ ಮುಖ್ಯಸ್ಥರಾಗಿದ್ದಾರೆ. ರತನ್ ಟಾಟಾ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ದೇಶದ ವಿಪತ್ತು, ತುರ್ತು ಸಂದರ್ಭದಲ್ಲಿ ರತನ್ ಟಾಟಾ ಅತೀ ಹೆಚ್ಚು ದೇಣಿಗೆ ನೀಡಿದ್ದಾರೆ. ಕೋರನಾ ಸಮಯದಲ್ಲಿ ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ ಬರೋಬ್ಬರಿ 1,500 ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿತ್ತು.
ಟಾಟಾ ನಡೆಗೆ ಬೆಚ್ಚಿದ ಇವಿ ಕಂಪನಿ, 270 ಕಿ.ಮೀ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್‌ಗೆ ತಯಾರಿ!