Asianet Suvarna News Asianet Suvarna News

ಭಾರತಕ್ಕೆ ವಿಶ್ವದ 2ನೇ ಅತಿದೊಡ್ಡ ರಸ್ತೆ ಜಾಲದ ಹೆಗ್ಗಳಿಕೆ, 9 ವರ್ಷದಲ್ಲಿ ಶೇ. 59ರಷ್ಟು ಏರಿಕೆ!

ಕಳೆದ 9 ವರ್ಷಗಳಲ್ಲಿ ದೇಶದ ರಸ್ತೆಜಾಲ ಶೇ. 59ರಷ್ಟು ಏರಿಕೆಯಾಗಿದೆ. ಆ ಮೂಲಕ ಇಂದು ವಿಶ್ವದಲ್ಲಿಯೇ 2ನೇ ಅತಿದೊಡ್ಡ ರಸ್ತೆ ಜಾಲ ಹೊಂದಿರುವ ದೇಶವಾಗಿ ಭಾರತ ಗುರುತಿಸಿಕೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
 

Nitin Gadkari says India Road Network Second Largest In World Grew In 9 Years san
Author
First Published Jun 27, 2023, 9:44 PM IST

ನವದೆಹಲಿ (ಜೂ.27): ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಭಾಗವಾಗಿ ಇಂದು ಭಾರತದ ರಸ್ತೆ ಜಾಲ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ, ಇಂದು ವಿಶ್ವದ 2ನೇ ಅತಿದೊಡ್ಡ ರಸ್ತೆಜಾಲವಾಗಿ ಭಾರತ ಗುರುತಿಸಿಕೊಂಡಿದೆ. ಕಳೆದ 9 ವರ್ಷಗಳಲ್ಲಿ ದೇಶದ ರಸ್ತೆ ಜಾಲ ಶೇ. 59ರಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಸಚಿವರು ನೀಡಿರುವ ಮಾಹಿತಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಒಟ್ಟು 91,287 ಕಿಲೋಮೀಟರ್‌ ರಸ್ತೆ ಜಾಲಗಳಿತ್ತು. ಇಂದು ಭಾರತದ ರಸ್ತೆ ಜಾಲ 1, 45, 240 ಕಿಲೋಮೀಟರ್‌ ಎಂದು ಮಾಹಿತಿ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ  ‘ಸರ್ಕಾರದ 9 ವರ್ಷಗಳ ಸಾಧನೆ’ ಕುರಿತ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತವು ಸುಮಾರು 64 ಲಕ್ಷ ಕಿಮೀ ಒಟ್ಟು ರಸ್ತೆ ಜಾಲವನ್ನು ಹೊಂದಿದೆ, ಇದು ವಿಶ್ವದಲ್ಲೇ ಎರಡನೇ ಅತಿ ದೊಡ್ಡದಾಗಿದೆ. 2013-14ರಲ್ಲಿ 91,287 ಕಿಲೋಮೀಟರ್‌ಗಳಿಗೆ ಹೋಲಿಸಿದರೆ ಭಾರತದ ರಾಷ್ಟ್ರೀಯ ಹೆದ್ದಾರಿಗಳ ಜಾಲವು ಇಂದು 1,45,240 ಕಿಮೀಗಳಷ್ಟಿದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರು ತಿಳಿಸಿದ್ದಾರೆ.

"ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಈ ವಲಯದಲ್ಲಿ ಏಳು ವಿಶ್ವ ದಾಖಲೆಗಳನ್ನು ಮಾಡಿದೆ. ಭಾರತದ ರಸ್ತೆ ಜಾಲವು ಯುಎಸ್ ನಂತರ ವಿಶ್ವದ ಎರಡನೇ ಅತಿ ದೊಡ್ಡದಾಗಿದೆ" ಎಂದು ಅವರು ಹೇಳಿದರು. 2013-14ರಲ್ಲಿ 4,770 ಕೋಟಿ ರೂಪಾಯಿಗಳಿಂದ ಟೋಲ್‌ ಆದಾಯ ಈಗ 41,342 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 2020 ರ ವೇಳೆಗೆ ಟೋಲ್ ಆದಾಯವನ್ನು 1,30,000 ಕೋಟಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗಡ್ಕರಿ ಹೇಳಿದರು.

Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ

ಫಾಸ್ಟ್‌ಟ್ಯಾಗ್‌ಗಳ ಬಳಕೆಯು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು 47 ಸೆಕೆಂಡುಗಳಿಗೆ ಕಡಿಮೆ ಮಾಡಲು ಸಹಾಯ ಮಾಡಿದೆ. ಇದನ್ನು 30 ಸೆಕೆಂಡುಗಳಿಗಿಂತ ಕಡಿಮೆ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರುಮ ಮಾಹಿತಿ ನೀಡಿದ್ದಾರೆ.

Karnataka Textbook Row: ಸಾವ​ರ್ಕರ್‌, ಹೆಡ​ಗೇ​ವಾರ್‌ ಪಠ್ಯ ಕೈಬಿ​ಟ್ಟಿ​ದ್ದಕ್ಕೆ ಕೇಂದ್ರ ಸಚಿವ ಗಡ್ಕರಿ ಕಿಡಿ

Follow Us:
Download App:
  • android
  • ios