ಪಠ್ಯಪುಸ್ತಕಗಳಿಂದ ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್‌ ಮತ್ತು ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ ಹೆಡಗೇವಾರ್‌ ಅವರ ಅಧ್ಯಾಯಗಳನ್ನು ತೆಗೆದು ಹಾಕಿದ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ  ಕೇಂದ್ರ ಸಚಿವ ನಿತಿನ್‌ ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗ್ಪುರ (ಜೂ.18): ಕರ್ನಾ​ಟ​ಕ ಶಾಲಾ ಮಕ್ಕಳ ಪಠ್ಯಪುಸ್ತಕಗಳಿಂದ ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್‌ ಮತ್ತು ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ ಹೆಡಗೇವಾರ್‌ ಅವರ ಅಧ್ಯಾಯಗಳನ್ನು ತೆಗೆದು ಹಾಕುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ‘ಸಾವರ್ಕರ್‌ ಸಾಮಾಜಿಕ ಸುಧಾರಕ. ಅವರ ಪಠ್ಯವನ್ನು ಕೈಬಿಡುವುದು ದುರದೃಷ್ಟಕರ’ಎಂದಿದ್ದಾರೆ.

ಶನಿವಾರ ನಾಗ್ಪುರದಲ್ಲಿ ‘ವೀರ ಸಾವರ್ಕರ್‌’ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ ‘ಸಾವರ್ಕರ್‌ ಸಮಾಜ ಸುಧಾರಕ ಮತ್ತು ದೇಶಭಕ್ತರಾಗಿದ್ದರು. ಅವರು ಮತ್ತು ಹೆಡಗೇವಾರ್‌ ಅವರ ಅಧ್ಯಾಯಗಳನ್ನು ಶಾಲಾ ಪಠ್ಯಕ್ರಮದಿಂದ ತೆಗೆದು ಹಾಕುವುದು ಮತ್ತು ದೇಶಕ್ಕಾಗಿ ಎಲ್ಲವನ್ನೂ ನೀಡಿದ ಸಾವರ್ಕರ್‌ ಮತ್ತು ಅವರ ಕುಟುಂಬ ಇಂತಹ ಅವಮಾನ ಎದುರಿಸಬೇಕಾಗಿರುವುದು ಅತ್ಯಂತ ದುದೃಷ್ಟಕರ ಹಾಗೂ ಇಂತಹ ನೋವಿನ ಸಂಗತಿ ಮತ್ತೊಂದಿಲ್ಲ’ ಎಂದರು.

Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ, 

ಅಲ್ಲದೇ ‘ಸಾವರ್ಕರ್‌ ನಮಗೆಲ್ಲ ಮಾದರಿ. ಸಾವರ್ಕರ್‌ ಬಗ್ಗೆ ತಿಳಿಯದೇ ಅವರನ್ನು ಟೀಕಿಸಬಾರದು. ಸಾವರ್ಕರ್‌ ಮತ್ತು ಸ್ವಾಮಿ ವಿವೇಕಾನಂದರು ಪ್ರಚಾರ ಮಾಡಿದ ಹಿಂದೂ ಭಾರತೀಯ ಮತ್ತು ಹಿಂದೂ ಸಂಸ್ಕೃತಿ ಒಂದೇ ಆಗಿದ್ದು ಅವರ ಸಿದ್ಧಾಂತ ಮತ್ತು ದೇಶಕ್ಕೆ ಸಾವರ್ಕರ್‌ ಮಾಡಿದ ತ್ಯಾಗದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

ಕರ್ನಾಟಕ ಕ್ಯಾಬಿನೆಟ್ ಇತ್ತೀಚೆಗೆ ರಾಜ್ಯದ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಮತ್ತು ಕನ್ನಡ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಪರಿಷ್ಕರಣೆಯ ಭಾಗವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಅಧ್ಯಾಯಗಳನ್ನು ಕೈಬಿಡಲಾಗಿದೆ.

Ballari: ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಕ್ಕಳ ಜೊತೆಗೆ ಅನುಚಿತ ವರ್ತನೆ, ಕಾಮುಕ ಶಿಕ್ಷ

ಸೂಲಿ​ಬೆಲೆ ಪಠ್ಯಕ್ಕೆ ಕೊನೆಗೂ ಕೊಕ್‌: ಬಿಜೆಪಿಯ ತೀವ್ರ ವಿರೋಧದ ನಡುವೆಯೂ 10 ನೇ ತರತಗತಿ ಕನ್ನಡ ಪಠ್ಯವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಕೈಬಿಟ್ಟು ಶಿವಕೋಟ್ಯಾಚಾರ್ಯರ ‘ಸುಕುಮಾರ ಸ್ವಾಮಿಯ ಕಥೆ’ ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತೀಯ ಅಮರ ಪುತ್ರರು’ ಪಠ್ಯವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

ಶತಾವಧಾನಿ ಡಾ.ಆರ್‌.ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಠ್ಯಕ್ಕೆ ಬದಲಿಗೆ ಸಾ.ರಾ.ಅಬಬೂಬಕ್ಕರ್‌ ಅವರ ‘ಯುದ್ಧ’ ಪಠ್ಯ ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ, ಅನುಬಂಧ-1 ರಲ್ಲಿ ಕನ್ನಡದ 9 ಪಠ್ಯ-ಗದ್ಯದಲ್ಲಿ ಹಾಗೂ ಅನುಬಂಧ-2 ರಲ್ಲಿ 9 ಗದ್ಯದಲ್ಲಿ ಬದಲಾವಣೆ ಮಾಡಲಾಗಿದೆ.

ಸಮಾಜ ವಿಜ್ಞಾನದಲ್ಲಿನ ಬದಲಾವಣೆ
6 ನೇ ತರಗತಿ ಸಮಾಜ ವಿಜ್ಞಾನ ಭಾಗ-1 ರಲ್ಲಿ ‘ವೇದಕಾಲದ ಸಂಸ್ಕೃತಿ’, ‘ಹೊಸ ಧರ್ಮಗಳ ಉದಯ’ ಹೊಸ ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ಭಾಗ-2 ರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಅಧ್ಯಾಯದ ಜೊತೆಗೆ ‘ಮಾನವ ಹಕ್ಕುಗಳು’ ಎಂಬ ವಿಷಯ ಸೇರ್ಪಡೆ ಮಾಡಲಾಗಿದೆ. 7 ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿ ‘ಮೈಸೂರು ಮತ್ತು ಇತರ ಸಂಸ್ಥಾನಗಳು’ ಎಂಬ ಅಧ್ಯಾಯದ ಜೊತೆಗೆ ಹಲವು ಅಂಶಗಳನ್ನೂ ಸೇರ್ಪಡೆ ಮಾಡಲಾಗಿದೆ. 

ಕನ್ನಡದಲ್ಲಿ ಏನೇನು ಬದಲಾವಣೆ ?
ತರಗತಿ ಜಾರಿಯಲ್ಲಿದ್ದ ಪಠ್ಯ ಬದಲಾವಣೆ
6 ನಮ್ಮದೇನಿದೆ?-ನಿರ್ಮಲಾ ಸುರತ್ಕಲ್‌ ನೀ ಹೋದ ಮರುದಿನ-ಚೆನ್ನಣ್ಣ ವಾಲೀಕಾರ
7 ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ-ರಮಾನಂದ ಆಚಾರ್ಯ ಸಾವಿತ್ರಿಬಾಯಿ ಫುಲೆ-ಡಾ.ಎಚ್‌.ಎಸ್‌.ಅನುಪಮ
8 ಭೂಕೈಲಾಸ ಪೌರಾಣಿಕ ನಾಟಕ- ನರಸಿಂಹ ಐತಾಳ ಮಗಳಿಗೆ ಬರೆದ ಪತ್ರ- ಜವಾಹರಲಾಲ್‌ ನೆಹರು
10 ನಿಜವಾದ ಆದರ್ಶ ಪುರುಷಯಾರಾಗಬೇಕು?-ಹೆಡಗೇವಾರ್‌ ಸುಕುಮಾರಸ್ವಾಮಿಯ ಕತೆ-ಶಿವಕೋಟ್ಯಾಚಾರ್ಯ
10 ಶ್ರೇಷ್ಠ ಭಾರತೀಯ ಚಿಂತನೆಗಳು-ಆರ್‌.ಗಣೇಶ್‌ ಯುದ್ಧ-ಸಾ.ರಾ.ಅಬೂಬಕ್ಕರ್‌
10 ತಾಯಿ ಭಾರತೀಯ ಅಮರ ಪುತ್ರರು-ಚಕ್ರವರ್ತಿ ಸೂಲಿಬೆಲೆ ಪೂರ್ಣ ಗದ್ಯಕ್ಕೆ ಕೊಕ್‌
10 ವೀರಲವ-ಲಕ್ಷ್ಮೇಶ ಇದೇ ಪಾಠ​ದಲ್ಲಿ ವಾಲ್ಮೀಕಿ ಮಹರ್ಷಿಗಳ ಪರಿಚಯದ ತಿದ್ದುಪಡಿ
8 ಕಾಲವನ್ನು ಗೆದ್ದವರು-ಕೆ.ಟಿ.ಗಟ್ಟಿ ಬ್ಲಡ್‌ ಗ್ರೂಪ್‌-ವಿಜಯಮಾಲಾ ರಂಗನಾಥ್‌
9 ಅಚ್ಚರಿಯ ಜೀವಿ ಇಂಬಳ-ಪಿ.ಸತ್ಯನಾರಾಯಣಭಟ್‌ ಉರುಸುಗಳಲ್ಲಿ ಭಾವೈಕ್ಯತೆ-ದಸ್ತಗೀರ ಅಲ್ಲೀಭಾಯಿ