Asianet Suvarna News Asianet Suvarna News

ಕೆಲಸದ ಒತ್ತಡದಿಂದ ಯುವತಿ ಸಾವಿನ ಬಗ್ಗೆ ನಿರ್ಮಲಾ ಸೀತಾರಾಮನ್ ವಿವಾದಾತ್ಮಕ ಹೇಳಿಕೆ

ಕೆಲಸದ ಒತ್ತಡದಿಂದ ಯುವತಿಯ ಸಾವಿನ ಕುರಿತು ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Nirmala Sitharaman s controversial statement on the death of a EY employee mrq
Author
First Published Sep 24, 2024, 3:18 PM IST | Last Updated Sep 24, 2024, 3:18 PM IST

ನವದೆಹಲಿ: ಕೆಲಸದ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಕೆಲಸದ ಒತ್ತಡದಿಂದ ಸಿ.ಎ. ಆಗಿದ್ದ ಕೇರಳ ಮೂಲದ ಯುವತಿ ಪುಣೆಯಲ್ಲಿ ಸಾವನ್ನಪ್ಪಿದ ಕುರಿತು ಅವರು ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ, ‘ನೀವು ಏನೇ ಓದಿ, ಉದ್ಯೋಗ ಮಾಡಿ. ಆದರೆ ಒತ್ತಡ ನಿಭಾಯಿಸಲು ಅಂತಶಕ್ತಿ ಅಗತ್ಯ. ಅದನ್ನು ಆಧ್ಯಾತ್ಮದ ಮೂಲಕ ಸಾಧಿಸಬಹುದು. ದೇವರನ್ನು ನಂಬಿದಾಗ ಅಂತಶಕ್ತಿ ಹೆಚ್ಚುತ್ತದೆ. ಶಿಕ್ಷಣ ಸಂಸ್ಥೆಗಳು ದೈವಿಕತೆ ಮತ್ತು ಆಧ್ಯಾತ್ಮಿಕತೆ ಕಲಿಸಬೇಕು’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ‘ಅನ್ನಾಗೆ ಅಂತಃಶಕ್ತಿ ಶಕ್ತಿ ಇದ್ದುದರಿಂದಲೇ ಸಿಎ ಪದವಿ ಪಡೆಯಲು ಸಾಧ್ಯವಾಯಿತು. ದೀರ್ಘ ಕೆಲಸದ ಅವಧಿ, ಕಿರುಕುಳ ಮತ್ತು ಒತ್ತಡದಿಂದ ಅವರ ಸಾವಾಗಿದೆ’ ಎಂದಿದ್ದಾರೆ. ಅಂತೆಯೇ ‘ಸಚಿವೆ, ದುಡಿಯುವ ಜನರ ದೈನಂದಿನ ಹೋರಾಟಗಳನ್ನು ಅವಮಾನಿಸಿದ್ದಾರೆ’ ಎಂದು ಸಿಪಿಐ ಸಂಸದ ಸಂತೋಷ್‌ ಕುಮಾರ್‌ ಆರೊಪಿಸಿದ್ದಾರೆ.

Latest Videos
Follow Us:
Download App:
  • android
  • ios