ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ
ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ 8 ಚೀತಾಗಳ ಪೈಕಿ 2 ಚೀತಾಗಳನ್ನು ಕ್ವಾರಂಟೈನ್ ಕೇಂದ್ರದಿಂದ ಶನಿವಾರ ಬೇಲಿ ಹಾಕಿದ ಕೊಂಚ ವಿಸ್ತಾರ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಶಿಯೋಪುರ (ಮ.ಪ್ರ.): ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ 8 ಚೀತಾಗಳ ಪೈಕಿ 2 ಚೀತಾಗಳನ್ನು ಕ್ವಾರಂಟೈನ್ ಕೇಂದ್ರದಿಂದ ಶನಿವಾರ ಬೇಲಿ ಹಾಕಿದ ಕೊಂಚ ವಿಸ್ತಾರ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ವಾಯುಗುಣಕ್ಕೆ (Indian climate) ಹೊಂದಿಕೊಳ್ಳುವ ಸಲುವಾಗಿ ಈ ಚೀತಾಗಳನ್ನು(cheetahs) ಈವರೆಗೆ ಕ್ವಾರಂಟೈನ್ ಕೇಂದ್ರದಲ್ಲಿ (quarantine center) ಇರಿಸಲಾಗಿತ್ತು. ಚೀತಾಗಳನ್ನು ಆಮದು ಮಾಡಿಕೊಂಡು ಬಹುತೇಕ 2 ತಿಂಗಳು ಕಳೆದಿರುವುದರಿಂದ 2 ಚೀತಾಗಳನ್ನು ಕೊಂಚ ವಿಸ್ತೃತ ಭಾಗಕ್ಕೆ ಬಿಡಲಾಗಿದೆ. ಉಳಿದ 6 ಚೀತಾಗಳನ್ನು ಕ್ವಾರಂಟೈನ್ ಕೇಂದ್ರದಲ್ಲೇ ಉಳಿಸಿಕೊಳ್ಳಲಾಗಿದೆ. ಇವುಗಳನ್ನು ಸಹ ಹಂತಹಂತವಾಗಿ ಅರಣ್ಯಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮೀಬಿಯಾದಿಂದ ಭಾರತಕ್ಕೆ ಬಂದ ಚೀತಾ ‘ಆಶಾ’ ಗರ್ಭಿಣಿ
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಇದೊಂದು ಖುಷಿಯ ವಿಚಾರ, ಕಡ್ಡಾಯ ಕ್ವಾರಂಟೈನ್ ನಂತರ ಕುನೋ ಆವಾಸಸ್ಥಾನಕ್ಕೆ (Kuno habitat) ಮತ್ತಷ್ಟು ಹೊಂದಿಕೊಳ್ಳಲು 2 ಚಿರತೆಗಳನ್ನು ವಿಸ್ತಾರವಾದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇನ್ನುಳಿದವುಗಳನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಎಲ್ಲಾ ಚಿರತೆಗಳು ಆರೋಗ್ಯಕರವಾಗಿವೆ. ಚುರುಕಾಗಿದ್ದು, ಇಲ್ಲಿನ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಎಂಬುದನ್ನು ತಿಳಿದು ಖುಷಿಯಾಗಿದೆ ಎಂದು ಪ್ರಧಾನಿ ಟ್ವಿಟ್ ಮಾಡಿದ್ದಾರೆ.
ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾಗೆ ಯಾಕಿಷ್ಟು ಮಹತ್ವ: ವನ್ಯಜೀವಿ ತಜ್ಞರ ಮಾತು ಕೇಳಿ