Asianet Suvarna News Asianet Suvarna News

Russia Ukraine Crisis: ಗಡಿ​ಯಲ್ಲೀಗ ನೈಜೀ​ರಿಯಾ ವಿದ್ಯಾ​ರ್ಥಿ​ಗಳ ಕಾಟ​!

- ಕಷ್ಟಪಟ್ಟು ಉಕ್ರೇನ್‌ ಗಡಿ ತಲುಪಿದರೆ ಅಲ್ಲಿ ನೈಜೀರಿಯನ್‌ ವಿದ್ಯಾರ್ಥಿಗಳ ಕಾಟ

- ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಹೊಸ ಗೋಳು

- ಅಲ್ಲಿ ನಮ್ಮ ನೆರವಿಗೆ ಯಾರೂ ಬರುತ್ತಿಲ್ಲ
 

Nigerian students Hurdle for Indian Students in Ukraine Border san
Author
Bengaluru, First Published Mar 3, 2022, 4:45 AM IST

ಬೆಂಗಳೂರು (ಮಾ.3): ಉಕ್ರೇನ್‌ನಿಂದ (Ukraine) ಹೇಗಾದರೂ ಜೀವ ಉಳಿಸಿಕೊಂಡು ವಾಪಸಾಗಬೇಕು ಎಂದು ಗಡಿ ಪ್ರದೇಶಕ್ಕೆ ಕಷ್ಟಪಟ್ಟು ತೆರಳಿದರೆ ಅಲ್ಲಿ ನೈಜೀ​ರಿ​ಯನ್‌ ವಿದ್ಯಾರ್ಥಿಗಳು (Nigerian students ) ಕಿರುಕುಳ ನೀಡುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಬುಡಾ​ಪೆ​ಸ್ಟ್‌​ನಿಂದ ವಿಶೇಷ ವಿಮಾ​ನದ ಮೂಲಕ ದೆಹ​ಲಿಗೆ ಆಗ​ಮಿ​ಸಿದ ವಿದ್ಯಾ​ರ್ಥಿ​ಗಳು ಬದುಕಿ ಬಂದದ್ದೇ ಪವಾಡ ಎನ್ನು​ವ ಭಾವ​ನೆ​ಯ​ಲ್ಲಿ​ದ್ದಾರೆ. ಹಲವು ದಿನ​ಗ​ಳಿಂದ ಸರಿ​ಯಾದ ಊಟ, ನಿದ್ದೆ ಇಲ್ಲದೆ ಸಾವಿ​ರಾರು ನೂರಾರು ಕಿ.ಮೀ. ಪ್ರಯಾಣ ಮಾಡಿ​ದ್ದೇ​ವೆ. 750ರಿಂದ 800 ಕಿ.ಮೀ. ಪ್ರಯಾಣ ಮಾಡಿ ಗಡಿ ತಲು​ಪಿ​ದರೂ ನೈಜೀ​ರಿ​ಯನ್‌ ಪ್ರಜೆ​ಗಳಿಂದ ಕಿರು​ಕುಳ ಎದು​ರಿ​ಸ​ಬೇ​ಕಾ​ಯಿತು. ನಮ್ಮಂಥ ವಿದ್ಯಾ​ರ್ಥಿ​ಗ​ಳಿಗೆ ಅವರು ತೀವ್ರ ಕಿರು​ಕುಳ ನೀಡು​ತ್ತಿ​ದ್ದಾರೆ. ಅಲ್ಲಿ ಯಾರೂ ನಮ್ಮ ನೆರ​ವಿಗೆ ಬರು​ತ್ತಿಲ್ಲ ಎಂದು ಆಕ್ರೋಶ, ನೋವು ಹೊರ​ಹಾ​ಕಿ​ದ​ರು.

ದೇವರೇ ನಮ್ಮನ್ನು ಕಾಪಾ​ಡಿ​ದ: ಉಕ್ರೇ​ನ್‌​ನಿಂದ ಸುರಕ್ಷಿತವಾಗಿ ವಾಪಸಾದ ಝಪೋರಿಝಿಯಾ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯ​ ವಿದ್ಯಾ​ರ್ಥಿ, ದಕ್ಷಿಣ ಕನ್ನಡ ಜಿಲ್ಲೆಯ ಬಿಕ​ರ್ನ​ಕ​ಟ್ಟೆಯ ಪೃಥ್ವಿ​ರಾಜ್‌ ‘ದೇವರೇ ನಮ್ಮನ್ನು ಕಾಪಾ​ಡಿದ’ ಎಂದು ಹೇಳಿ​ಕೊಂಡಿ​ದ್ದಾ​ರೆ. ‘ನಾವು ಉಕ್ರೇ​ನ್‌​ನಿಂದ ಹೊರ​ಟಾಗ ಪರಿ​ಸ್ಥಿತಿ ಗಂಭೀ​ರ​ವಾ​ಗಿತ್ತು. ಝಪೋ​ರಿ​ಝಿಯಾ ಮೇಲೆ ರಷ್ಯಾ ಹಿಡಿತ ಸಾಧಿ​ಸುವ ಮೊದಲೇ ನಾವು ಅಲ್ಲಿಂದ ಹೊರ​ಟೆ​ವು. ಝಪೋ​ರಿ​ಝಿ​ಯಾದ ವಿದ್ಯುತ್‌ ಸ್ಥಾವ​ರದ ಮೇಲೆ ರಷ್ಯಾ ಸೇನೆ ಭಾರೀ ಕಾದಾ​ಟದ ನಂತರ ವಶಕ್ಕೆ ಪಡಿ​ಸಿ​ಕೊಂಡಿದೆ. ನಾವು ಅದಕ್ಕೂ ಮೊದಲೇ ಅಲ್ಲಿಂದ ರೈಲು ಹತ್ತಿ​ದ್ದ​ರಿಂದ ಸ್ವಲ್ಪ​ದ​ರಲ್ಲೇ ಪಾರಾ​ದೆವು’ ಎಂದು ಪೃಥ್ವಿ​ರಾಜ್‌ ಹೇಳಿ​ದ್ದಾರೆ.

ಕೀವ್‌, ಖಾರ್ಕೀ​ವ್‌ ದಾಟಿ​ದರೆ ಸೇಫ್‌: ಖಾರ್ಕೀ​ವ್‌​ನ​ಲ್ಲಿ​ರುವ ತುಮ​ಕೂರು ಜಿಲ್ಲೆಯ ವಿದ್ಯಾರ್ಥಿ ಪ್ರತಿಭಾ, ‘ಕರ್ಫ್ಯೂ ಇರು​ವು​ದ​ರಿಂದ ಎಲ್ಲರೂ ನಡೆ​ದು​ಕೊಂಡೇ ಬರು​ತ್ತಿ​ದ್ದಾರೆ. ಇಲ್ಲೇ ಇದ್ದರೆ ಏನಾ​ಗ್ತೀವೋ ಅನ್ನೋ ಪರಿ​ಸ್ಥಿತಿ ಇದೆ. ನಾನಂತು ಹೊರ​ಡು​ತ್ತಿ​ದ್ದೇ​ನೆ’ ಎಂದು ಪೋಷ​ಕ​ರಿಗೆ ಕರೆ ಮಾಡಿ ತಿಳಿ​ಸಿ​ದ್ದಾ​ಳೆ. ‘ರೈಲ್ವೆ ಸ್ಟೇಶನ್‌ನಲ್ಲಿ ಏನಾದರೂ ವ್ಯವಸ್ಥೆ ಮಾಡಿರಬಹುದು. ಇಲ್ಲದಿದ್ದರೆ ನಾವು ದುಡ್ಡು ಕೊಟ್ಟು ಹೋಗಬೇಕು. ಖಾರ್ಕೀವ್‌, ಕೀವ್‌ ಇವೆರಡೂ ದಾಟಿಬಿಟ್ಟರೆ ನಾವು ಸೇಫ್‌. ಈ ಎರಡು ನಗ​ರ​ಗ​ಳನ್ನು ದಾಟು​ವುದೇ ದೊಡ್ಡ ಕಷ್ಟ’ ಎಂದು ಹೇಳಿ​ಕೊಂಡಿ​ದ್ದಾ​ಳೆ. "ದೂರ ದೂರ ನಡೆದುಕೊಂಡು ಹೋಗ್ತಿದ್ದೇವೆ. ದಾರಿ ಕಾಣದಾಗಿದೆ. ಎಲ್ಲೆಡೆ ಗುಂಡಿನ ಸದ್ದು. ಏನಾಗ್ತಿದೆಯೋ ಗೊತ್ತಾಗ್ತಿಲ್ಲ. ಏನು ಮಾಡಬೇಕೋ ಗೊತ್ತಾಗ್ತಿಲ್ಲ. ಮೊಬೈಲ್‌ ಬ್ಯಾಟರಿ ಲೋ ಇದೆ. ಮಾತನಾಡಲೂ ಆಗುತ್ತಿಲ್ಲ." ಎಂದು ಉಕ್ರೇ​ನ್‌​ನ​ಲ್ಲಿ​ರುವ ವಿಜ​ಯ​ನ​ಗ​ರದ ವಿದ್ಯಾ​ರ್ಥಿ ಸಂಜಯ್ ಹೇಳಿದ್ದಾರೆ.

ಸ್ಲೊವಾಕಿಯಾ, ರೊಮೇನಿಯಾದಲ್ಲಿ ಸಚಿವರಿಂದ ರಕ್ಷಣಾ ಕಾರ್ಯ
ನವದೆಹಲಿ:
ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೇಮಕ ಮಾಡಿರುವ ನಾಲ್ವರು ಕೇಂದ್ರ ಸಚಿವರಲ್ಲಿ ಕಿರಣ್‌ ರಿಜಿಜು (kiren rijiju) ಬುಧವಾರ ಸ್ಲೋವಾಕಿಯಾದ ನಗರ ಕೋಶಿಟ್ಸಗೆ ತಲುಪಿದ್ದಾರೆ. ರೋಮೆನಿಯಾ ತಲುಪಿರುವ ಜ್ಯೋತಿರಾಧಿತ್ಯ ಸಿಂಧಿಯಾ (jyotiraditya scindia) ರೊಮೆನಿಯಾ (romania) ಮತ್ತು ಮಾಲ್ಡೋವಾದ (Maldova) ಭಾರತದ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ
ಕಿರಣ್‌ರಿಜಿಜು, ಹರ್ದೀಪ್‌ಪುರಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿ.ಕೆ.ಸಿಂಗ್‌ ಅವರನ್ನು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್‌ನ ನೆರೆಯ ದೇಶಗಳಿಗೆ ನೇಮಕ ಮಾಡಲಾಗಿತ್ತು. ಸ್ಪೈಸ್‌ ಜೆಟ್‌ ವಿಮಾನದಲ್ಲಿ ಸ್ಲವೋಕಿಯಾ ತಲುಪಿರುವ ರಿಜಿಜು, ಉಕ್ರೇನ್‌ನಿಂದ ಬಸ್‌ ಮುಖಾಂತರ ಬರುವ 189 ಭಾರತೀಯರನ್ನು ಗುರುವಾರ ಸ್ವದೇಶಕ್ಕೆ ಮರಳಿ ಕರೆತರಲಿದ್ದಾರೆ.

Russia Ukraine Crisis: 498 ಯೋಧರ ಸಾವು, ರಷ್ಯಾದ ಅಧಿಕೃತ ಹೇಳಿಕೆ
ಈ ನಡುವೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ‘ಮಾಲ್ಡೋವಾ ಮತ್ತು ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್‌ ಶ್ರೀವಾಸ್ತವ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಆಪರೇಶನ್‌ ಗಂಗಾ ಈಗ ಮತ್ತಷ್ಟುವೇಗ ಪಡೆದುಕೊಂಡಿದೆ. ಮಾಲ್ಡೋವಾದ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬುಕಾರೆಸ್ಟ್‌ಗೆ ಅವರನ್ನು ಕರೆದೊಯ್ಯುವ ಸಾರಿಗೆಯ ಕುರಿತು ಮಾತುಕತೆ ನಡೆಸಲಾಗಿದೆ. ಅಲ್ಲಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಆರಂಭವಾಗಲಿದೆ’ ಎಂದಿದ್ದಾರೆ.

Follow Us:
Download App:
  • android
  • ios