ಮೋದಿ ರ‍್ಯಾಲಿ ಟಾರ್ಗೆಟ್ ಮಾಡಿ ಭೋಪಾಲ್ ರೈಲು ಸ್ಫೋಟಿಸಿದ 7 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟ!
2017ರಲ್ಲಿ ಭೋಪಾಲ್ ಹಾಗೂ ಉಜ್ಜೈನಿ ನಡುವಿನ ಪ್ರಯಾಣಿಕ ರೈಲು ಸ್ಫೋಟ ಪ್ರಕರಣದ ಕುರಿತು ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 8 ಅಪರಾಧಿಗಳ ಪೈಕಿ 7 ಮಂದಿಗೆ ಮರಣದಂಡನೆ ಶಿಕ್ಷೆ ಘೋಷಿಸಿದರೆ, ಒರ್ವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ನವದೆಹಲಿ(ಫೆ.28): ಭೋಪಾಲ್ ಉಜ್ಜೈನಿ ಪ್ರಯಾಣಿಕ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿತ 8 ಅಪರಾಧಿಗಳ ಪೈಕಿ 7 ಮಂದಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ. ಮತ್ತೋರ್ವನಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. 2017ರಲ್ಲಿ ಪ್ರಯಾಣಿಕರ ರೈಲಿನ ಮೇಲೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಈ ಘಟನಯಲ್ಲಿ 10 ಅಮಾಯಕ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಪುಷ್ಪಕ ರೈಲು ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಿಸಲು ನಿರ್ಧರಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಭೋಪಾಲ್ ಉಜ್ಜೈನಿ ರೈಲಿನಲ್ಲಿ ಬಾಂಬ್ ಇಡಲಾಗಿತ್ತು. ಈ ಘಟನೆ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಹಲವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಇದೀಗ ಎನ್ಐಎ ವಿಶೇಷ ಕೋರ್ಟ್, ಆರೋಪಿಗಳ ಶಿಕ್ಷೆ ಪ್ರಕಟಿಸಿದೆ. 8 ಆರೋಪಿಗಳ ಪೈಕಿ 7 ಮಂದಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ.ಇದೇ ಉಗ್ರರು ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲೂ ಬಾಂಬ್ ಸ್ಫೋಟಿಸಲು ಮಾಸ್ಟರ್ ಪ್ಲಾನ್ ರೆಡಿಮಾಡಲಾಗಿತ್ತು
ಎನ್ಐಎ ವಿಶೇಷ ನ್ಯಾಯಾಲಯ ಅಪರಾಧಿಗಳಾದ ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೈನ್ ಹಾಗೂ ಆಸಿಫ್ ಇಕ್ಬಾಲ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಇನ್ನು ಆತಿಫ್ ಇರಾಕ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಮಂಗ್ಳೂರು, ಶಿವಮೊಗ್ಗ ಸ್ಫೋಟ: ಮತ್ತೊಬ್ಬ ಸೆರೆ
2017ರ ಮಾರ್ಚ್ 7 ರಂದು ಭಾರತದಲ್ಲಿ ಇಸ್ಲಾಮಿಟ್ ಸ್ಟೇಟ್ಸ್ ಭಯೋತ್ಪಾದನೆ ಹೆಸರಲ್ಲಿ ಮೊಟ್ಟ ಮೊದಲ ದಾಳಿ ನಡೆದಿತ್ತು. ಭೋಪಾಲ್ ಜಂಕ್ಷನ್‌ನಿಂದ ಉಜ್ಜೈನಿಗೆ ಸಂಚರಿಸುವ ರೈಲಿನಲ್ಲಿ ಉಗ್ರರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ರೈಲು ಜಬ್ರಿ ರೈಲು ನಿಲ್ದಾಣ ತಲುಪುತ್ತಿದ್ದಂತೆ ಬಾಂಬ್ ಸ್ಪೋಟಿಸಲಾಗಿತ್ತು. ಈ ಘಟನೆ ಬಳಿಕ ಲಖನೌದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು.
ಎನ್ಐಎ ತಂಡ ಈ ಪ್ರಕರಣ ಸಂಬಂಧ 6 ಆರೋಪಿಗಳನ್ನು ಬಂಧಿಸಿತ್ತು. ಬಳಿಕ ಈ ಪ್ರಕರಣ ಸಂಬಂದ ಹಲವರನ್ನುವಿಚಾರಣೆ ನಡೆಸಿ ಕೆಲವರನ್ನು ಬಂಧಿಸಿತ್ತು. ಐಸಿಸ್ ಮಾದರಿಯಲ್ಲಿ ಭಾರತದಲ್ಲಿ ಮಾಡಿದ ದಾಳಿ ಇದಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಪ್ರಧಾನಿ ಮೋದಿ ರ್ಯಾಲಿಯಲ್ಲೂ ಬಾಂಬ್ ಸ್ಫೋಟಿಸಲು ಪ್ಲಾನ್ ರೆಡಿ ಮಾಡಲಾಗಿತ್ತು ಅನ್ನೋ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದರು.
ಕುಕ್ಕರ್ ಬಾಂಬ್ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ರೈಲು ಸ್ಪೋಟದ ಬಳಿಕ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಆರೋಪಿಗಳು ಸಿರಿಯಾ ಅಥವಾ ಇರಾಕ್‌ಗೆ ಪರಾರಿಯಾಗಲು ಸಜ್ಜಾಗಿದ್ದರು. ಐಸಿಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಈ ಆರೋಪಿಗಳನ್ನು ಎನಐಎ ಹೆಡೆಮುರಿ ಕಟ್ಟಿತ್ತು. ಇದೀಗ ಭೋಪಾಲ್ ಉಜ್ಜೈನಿ ರೈಲು ಸ್ಫೋಟದಲ್ಲಿ ಬಂಧಿತರ ಪಾತ್ರ ಸಾಬೀತಾಗಿದೆ. ಭಾರತದಲ್ಲಿ ಐಸಿಸ್ ರೀತಿಯಲ್ಲಿ ದಾಳಿ ಮಾಡಿ ಇಸ್ಲಾಮಿಕ್ ಸ್ಟೇಟ್ಸ್ ಮಾಡಲು ಹೊರಟ್ಟಿದ್ದ ಭಯೋತ್ಪಾದಕರಿಗೆ ಇದೀಗ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.