Asianet Suvarna News Asianet Suvarna News

ಉಗ್ರರ ಹೆಡೆಮುರಿ ಕಟ್ಟಲು ಎಲ್ಲ ರಾಜ್ಯಗಳಲ್ಲಿ ಎನ್‌ಐಎ ಕಚೇರಿ: ಅಮಿತ್‌ ಶಾ

ಉಗ್ರರ ವಿರುದ್ಧ ಬಲಿಷ್ಠ ಜಾಲ ರೂಪಿಸುವ ತಂತ್ರ, ಇದಕ್ಕೆಂದೇ ಎನ್‌ಐಎಗೆ ಎಲ್ಲ ರೀತಿಯ ಅಧಿಕಾರ, ಅಪರಾಧ ತಡೆ ಕೇಂದ್ರ, ರಾಜ್ಯಗಳ ಸಾಮೂಹಿಕ ಜವಾಬ್ದಾರಿ, ರಾಜ್ಯ ಗೃಹ ಸಚಿವರ ‘ಚಿಂತನಾ ಶಿಬಿರ’ದಲ್ಲಿ ಗೃಹ ಸಚಿವ ಅಮಿತ್‌ ಶಾ ಘೋಷಣೆ

NIA Office will be Start in All States Says Union Home Minister Amit Shah grg
Author
First Published Oct 28, 2022, 7:16 AM IST

ಸೂರಜ್‌ಕುಂಡ್‌(ಅ.28):  ‘ಉಗ್ರರ ಹೆಡೆಮುರಿ ಕಟ್ಟಲು ಎಲ್ಲ ರಾಜ್ಯಗಳಲ್ಲೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಚೇರಿಗಳನ್ನು ಆರಂಭಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯದಿನದ ಭಾಷಣದಲ್ಲಿ ಘೋಷಿಸಲಾದ ‘ವಿಷನ್‌ 2047’ ಮತ್ತು ‘ಪಂಚಪ್ರಾಣ’ದ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆ ತಯಾರಿಸಲು ವಿವಿಧ ರಾಜ್ಯಗಳ ಗೃಹ ಸಚಿವರ 2 ದಿನಗಳ ಚಿಂತನಾ ಶಿಬಿರವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಗುರುವಾರ ಶಾ ಮಾತನಾಡಿದರು.

‘ಎನ್‌ಐಎ ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಎನ್‌ಐಎಗೆ ಸಾಕಷ್ಟುಬಲ ನೀಡಿದ್ದೇವೆ. ಪೊಲೀಸ್‌ ಅಧಿಕಾರವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೂ ಎನ್‌ಐಎಗೆ ನಾವು ಯಾವುದೇ ಗಡಿಯ ಮಿತಿ ಇಲ್ಲದ ಅಧಿಕಾರ ನೀಡಿದ್ದೇವೆ. ಉಗ್ರರ ಆಸ್ತಿ ಜಪ್ತಿ ಮಾಡುವ ಅಧಿಕಾರವೂ ಎನ್‌ಐಎಗೆ ಇದೆ. ಉಗ್ರರ ವಿರುದ್ಧ ಬಲಿಷ್ಠ ಜಾಲ ರೂಪಿಸುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಎನ್‌ಐಎ ಕಚೇರಿ ತೆರರಯುವ ನಿರ್ಧಾರ ಮಾಡಿದ್ದೇವೆ’ ಎಂದು ಶಾ ಹೇಳಿದರು.

Coimbatore car blast: ಸಾವೀಗೀಡಾದ ಜಮೇಜಾ ಮುಬಿನ್ ಮನೆಯಲ್ಲಿ ಸ್ಪೋಟಕಗಳು ಪತ್ತೆ!

ಅಪರಾಧ ತಡೆಗೆ ಸಮನ್ವಯ ಬೇಕು:

‘ಅಂತರ್‌ ಗಡಿಯ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಕೇಂದ್ರ ಮತ್ತು ರಾಜ್ಯಗಳ ಸಾಮೂಹಿಕ ಜವಾಬ್ದಾರಿ. ನಮ್ಮ ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಪಟ್ಟಿಯಲ್ಲಿದೆ. ಆದರೆ ಅಂತಾರಾಜ್ಯ ಅಪರಾಧಗಳನ್ನು ತಡೆಗಟ್ಟಲು ನಾವು ಒಂದಾಗಬೇಕು. ಯಾವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದಾಗಿ ಕುಳಿತು, ಅಪರಾಧಗಳ ವಿರುದ್ಧ ಸಾಮಾನ್ಯ ಕಾರ‍್ಯತಂತ್ರವನ್ನು ರೂಪಿಸಿ ಅವುಗಳನ್ನು ನಿಗ್ರಹಿಸಲು ಪ್ರಯತ್ನಿಸಿದರೆ ಮಾತ್ರ ಇವುಗಳನ್ನು ನಿಭಾಯಿಸುವುದು ಸಾಧ್ಯವಾಗುತ್ತದೆ’ ಎಂದರು.

‘ಅಂತಾರಾಜ್ಯ ಅಪರಾಧಗಳು, ಮಾದಕವಸ್ತುಗಳ ನಿರ್ವಹಣೆ, ಸೈಬರ್‌ ಅಪರಾಧಗಳನ್ನು ತಪ್ಪಿಸಲು ಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಈ ಚಿಂತನಾ ಶಿಬಿರ ನೆರವಾಗಲಿದೆ. ಅಲ್ಲದೇ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವುದರ ಕುರಿತಾಗಿಯೂ ಚರ್ಚೆ ನಡೆಸಬಹುದು’ ಎಂದು ಅವರು ಹೇಳಿದರು.

ಭಯೋತ್ಪಾದನೆ ವಿರುದ್ಧ ಮತ್ತೆ ಸಮರ ಸಾರಿದ ಕೇಂದ್ರ ಸರ್ಕಾರ; ಜಮ್ಮು ಕಾಶ್ಮೀರದಲ್ಲಿ NIA Raid

ಎನ್‌ಜಿಒಗಳಿಗೆ ಎಚ್ಚರಿಕೆ:

ಕೆಲವು ಎನ್‌ಜಿಒಗಳು ವಿದೇಶದಿಂದ ದೇಣಿಗೆ ಪಡೆದ ಮತಾಂತರ, ದೇಶವಿರೋಧಿ ಚಟುವಟಿಕೆ ನಡೆಸುತ್ತಿವೆ. ಅಂಥವುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಸ್ತ್ರ ಬಳಸಲಾಗುವುದು ಎಂದರು.

ಇಂದು ಮೋದಿ ಭಾಷಣ:

‘ಚಿಂತನ ಶಿಬಿರ’ದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಲಿಂಕ್‌ ಮೂಲಕ ಮಾತನಾಡಲಿದ್ದಾರೆ.

ಹಲವು ವಿಪಕ್ಷ ಮುಖ್ಯಮಂತ್ರಿಗಳು ಗೈರು:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆದ ಚಿಂತನಾ ಶಿಬಿರಕ್ಕೆ, ಗೃಹ ಮಂತ್ರಿಗಳೂ ಆಗಿರುವ ಬಿಜೆಪಿಯೇತರ ರಾಜ್ಯಗಳ ಬಹುತೇಕ ಮುಖ್ಯಮಂತ್ರಿಗಳು ಗೈರಾಗಿದ್ದರು. ಮಮತಾ ಬ್ಯಾನರ್ಜಿ, ನಿತೀಶ್‌ ಕುಮಾರ್‌, ನವೀನ್‌ ಪಟ್ನಾಯಕ್‌ ಮತ್ತು ಎಂ.ಕೆ.ಸ್ಟಾಲಿನ್‌ ಸಭೆಗೆ ಹಾಜರಾಗಿರಲಿಲ್ಲ. ಬಿಜೆಪಿಯವರಲ್ಲದ ಪಿಣರಾಯ್‌ ವಿಜಯನ್‌ ಮತ್ತು ಭಗವಂತ ಸಿಂಗ್‌ ಮಾನ್‌ ಮಾತ್ರ ಸಭೆಗೆ ಹಾಜರಾಗಿದ್ದರು.
 

Follow Us:
Download App:
  • android
  • ios