ಮಣಿಶಂಕರ್ ಅಯ್ಯರ್ ಪುತ್ರಿ ಎನ್‌ಜಿಒದ ವಿದೇಶಿ ದೇಣಿಗೆ ಲೈಸೆನ್ಸ್ ಅಮಾನತು
ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಯಾಮಿನಿ ಅಯ್ಯರ್ ಅಧ್ಯಕ್ಷರಾಗಿರುವ ದೆಹಲಿ ಮೂಲದ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಎಂಬ ಸರ್ಕಾರೇತರ ಸಂಘಟನೆಯ ವಿದೇಶಿ ದೇಣಿಗೆ ಲೈಸೆನ್ಸ್ ಅನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದೆ.
ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಯಾಮಿನಿ ಅಯ್ಯರ್ ಅಧ್ಯಕ್ಷರಾಗಿರುವ ದೆಹಲಿ ಮೂಲದ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಎಂಬ ಸರ್ಕಾರೇತರ ಸಂಘಟನೆಯ ವಿದೇಶಿ ದೇಣಿಗೆ ಲೈಸೆನ್ಸ್ ಅನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದೆ.
ಯಾವುದೇ ಎನ್‌ಜಿಒ(, ವಿದೇಶಗಳಿಂದ ದೇಣಿಗೆ ಸಂಗ್ರಹಿಸಬೇಕಾದರೆ ಅದು ದ ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆ್ಯಕ್ಟ್ (FCRA) ಅನ್ವಯ ಲೈಸೆನ್ಸ್ ಹೊಂದಿರುವುದು ಕಡ್ಡಾಯ. ಈ ಲೈಸೆನ್ಸ್ ಅನುಮತಿ ಹೊಂದಿದ್ದ ಸಿಪಿಆರ್ (CPR), ಪೋರ್ಡ್ ಟ್ರಸ್ಟ್, ಬಿಲ್ ಗೇಟ್ಸ್ ಆ್ಯಂಡ್ ಮಿಲಿಂದಾ ಟ್ರಸ್ಟ್, ಪೆನ್ಸಿಲ್ವೇನಿಯಾ ವಿವಿ (Pennsylvania VV), ಡ್ಯೂಕ್ ವಿವಿ ಸೇರಿದಂತೆ ಹಲವು ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುತ್ತಿತ್ತು. ಆದರೆ ಇಂಥ ದೇಣಿಗೆ ಸಂಗ್ರಹದಲ್ಲಿ ಲೋಪ ಎಸಗಿದೆ ಎಂಬ ಕಾರಣಕ್ಕಾಗಿ ಕಳೆದ ವರ್ಷವೇ ಸಿಪಿಆರ್ ಮತ್ತು ಆಕ್ಸ್‌ಫಾಮ್ ಎಂಬ ಎರಡು ಎನ್‌ಜಿಒಗಳ ಮೇಲೆ ಆದಾಯ ತೆರಿಗೆ ಇಲಾಖೆ (Income Ta Department) ಅಧಿಕಾರಿಗಳು ದಾಳಿ ನಡೆಸಿದ್ದರು.
Congress Tweet ಮೋದಿ ಭಾಷಣದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಫೋಟೋ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್!
ದಾಳಿ ವೇಳೆ ಸಿಕ್ಕ ಮಾಹಿತಿಯನ್ನು ಆಧರಿಸಿ ಕಳೆದ ಜನವರಿಯಲ್ಲಿ ಆಕ್ಸ್‌ಫಾಮ್ ಸಂಸ್ಥೆಯ ಎಫ್‌ಸಿಆರ್‌ಎ ಲೈಸೆನ್ಸ್ ಅಮಾನತು ಮಾಡಲಾಗಿತ್ತು. ಇದೀಗ ಅದೇ ರೀತಿಯ ಶಿಸ್ತು ಕ್ರಮವನ್ನು ಸಿಪಿಆರ್ ವಿರುದ್ಧವೂ ಕೈಗೊಳ್ಳಲಾಗಿದೆ. ಹೀಗಾಗಿ ಈ ಸಂಸ್ಥೆ ಇನ್ನು ವಿದೇಶದಿಂದ ದೇಣಿಗೆ ಸ್ವೀಕರಿಸುವುದು ಸಾಧ್ಯವಿಲ್ಲ. ಸಿಪಿಆರ್ 1973ರಿಂದಲೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಘಟನೆಯಾಗಿದ್ದು, ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಸ್ಕಾಲರ್‌ಶಿಪ್, ಉತ್ತಮ ನೀತಿಗಳ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದೆ.
ನೀಚ್ ಆದ್ಮಿ: ಆಡಿದ ಪ್ರತಿ ಶಬ್ಧಕ್ಕೂ ಈಗಲೂ ಬದ್ಧ ಎಂದ ಅಯ್ಯರ್!