2 ವರ್ಷದ ಪ್ರೀತಿ, 3 ತಿಂಗಳ ಹಿಂದೆ ಓಡಿಹೋಗಿ ಮದುವೆ; ಗಂಡನ ಮನೆಯಲ್ಲಿ ಬದುಕಲಾಗದೆ ಸಾವು ಕಂಡ ಯುವತಿ!
ಮೂರು ತಿಂಗಳ ಹಿಂದೆ ಅಭಿಜಿತ್, ಇಂದುಜಾಳನ್ನು ಓಡಿಸಿಕೊಂಡು ಹೋಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದ.
ತಿರುವನಂತಪುರಂ (ಡಿ.6): ಪಾಲೋಡ್‌ನ ಇಳವಟ್ಟಂನಲ್ಲಿ ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಅನುಮಾನ ವ್ಯಕ್ತವಾಗಿದೆ. ಯುವತಿಯ ಮನೆಯವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪಾಲೋಡ್ - ಇಟಿಂಜಾರ್ - ಕೊಳಚಲ್- ಕೊನ್ನಮೂಡ್ ಮೂಲದ ಇಂದುಜಾ (25) ಇಂದು ಮಧ್ಯಾಹ್ನ ಗಂಡನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಗಂಡನ ಮನೆಯಲ್ಲಿ ನಿರಂತರ ಮಾನಸಿಕ ಕಿರುಕುಳ ಮತ್ತು ಬೆದರಿಕೆಗೆ ಒಳಗಾಗಿದ್ದಾಗಿ ಮಗಳು ತಮಗೆ ತಿಳಿಸಿದ್ದಳು. ತವರು ಮನೆಗೆ ಹೋಗಲು ಆಕೆಗೆ ಅನುಮತಿ ಸಿಗುತ್ತಿರಲಿಲ್ಲ ಎಂದು ಇಂದುಜಾಳ ಕುಟುಂಬ ಆರೋಪಿಸಿದೆ. ಮಗಳ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಕುಟುಂಬ ಪೊಲೀಸರಿಗೆ ದೂರು ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಪಾಲೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ 1.30ಕ್ಕೆ ಇಂದುಜಾಳನ್ನು ಗಂಡ ಅಭಿಜಿತ್‌ರ ಮನೆಯ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಯ ಕಿಟಕಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ.. ಅಭಿಜಿತ್ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣವೇ ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮೂರು ತಿಂಗಳ ಹಿಂದೆ ಹುಡುಗಿ ಇಂದುಜಾಳನ್ನು ಅಭಿಜಿತ್ ಮನೆಯಿಂದ ಓಡಿಸಿಕೊಂಡು ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಆ ಬಳಿಕ ಇಂದುಜಾ, ಅಭಿಜಿತ್ ಮನೆಯಲ್ಲಿಯೇ ವಾಸವಿದ್ದಳು. ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಭಿಜಿತ್ ಖಾಸಗಿ ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ನಡೆದಾಗ ಮನೆಯಲ್ಲಿ ಅಭಿಜಿತ್‌ರ ಅಜ್ಜಿ ಮಾತ್ರ ಇದ್ದರು.
Year Ender 2024: ಒಟ್ಟಾರೆ ಶೇ.51ರಷ್ಟು ರಿಟರ್ನ್ ನೀಡಿದ 300ಕ್ಕೂ ಅಧಿಕ ಮ್ಯೂಚುವಲ್ ಫಂಡ್ಸ್!
ಇಂದುಜಾ ತನ್ನ ತಾಯಿ ಮತ್ತು ಸಹೋದರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಗಂಡನ ಮನೆಯವರು ಹೇಳಿದ್ದಾರೆ.. ಅಭಿಜಿತ್‌ರ ಮನೆಯಲ್ಲಿ ಮಾನಸಿಕ ಕಿರುಕುಳ ಅನುಭವಿಸಿದ್ದಾಗಿ ಮಗಳು ಹೇಳಿದ್ದಾಳೆ ಎಂದು ಇಂದುಜಾಳ ಕುಟುಂಬ ಹೇಳುತ್ತಿದೆ. ಮಗಳ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಇಂದುಜಾಳ ತಂದೆ ಪಾಲೋಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದುಜಾಳ ಮೃತದೇಹವನ್ನು ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
Mangaluru: ಕೆಟ್ಟಿದ್ದ ಫ್ರಿಜ್ ಸರಿ ಮಾಡಲು ಬಂದು ಶೀಲ ಹಾಳು ಮಾಡಿದ ಶಫೀನ್
(ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಬದುಕಲು ಪ್ರಯತ್ನಿಸಿ. ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಅಂತಹ ಆಲೋಚನೆಗಳು ಬಂದಾಗ 'Tele-MANAS' ಹೆಲ್ಪ್‌ಲೈನ್‌ಗೆ ಕರೆ ಮಾಡಿ. ಟೋಲ್ ಫ್ರೀ ಸಂಖ್ಯೆ: Toll free helpline number: 14416, 1800-89-14416)