Year Ender 2024: ಒಟ್ಟಾರೆ ಶೇ.51ರಷ್ಟು ರಿಟರ್ನ್‌ ನೀಡಿದ 300ಕ್ಕೂ ಅಧಿಕ ಮ್ಯೂಚುವಲ್‌ ಫಂಡ್ಸ್‌!

2024ರಲ್ಲಿ 300ಕ್ಕೂ ಅಧಿಕ ಪ್ಯಾಸಿವ್‌ ಮ್ಯೂಚುವಲ್‌ ಫಂಡ್‌ಗಳು ಒಟ್ಟಾರೆಯಾಗಿ ಶೇ. 51ಕ್ಕೂ ಅಧಿಕ ರಿಟರ್ನ್ಸ್‌ಗಳನ್ನು ಗ್ರಾಹಕರಿಗೆ ನೀಡಿವೆ. ಇದರಲ್ಲಿ ಮೀರೇ ಅಸೆಟ್‌ NYSE FANG+ ETF ಭರ್ಜರಿ 50.90% ರಿಟರ್ನ್ಸ್‌ಅನ್ನು ಹೂಡಿಕೆದಾರರಿಗೆ ನೀಡಿದೆ.

In 2024 Over 300 passive mutual funds offer up to 51 PC return san

ಬೆಂಗಳೂರು (ಡಿ.4): ವರ್ಷದ ಕೊನೆಯ ತಿಂಗಳಲ್ಲಿ ಈಗಾಗಲೇ 6 ದಿನಗಳು ಕಳೆದಿವೆ. ಇದರ ನಡುವೆ ಈ ವರ್ಷವೀಡಿ ಆಗಿರುವ ಸಂಗತಿಗಳ ಫ್ಲ್ಯಾಶ್‌ಬ್ಯಾಕ್‌ ಬರಲು ಆರಂಭವಾಗಿದೆ. ಮ್ಯೂಚುವಲ್‌ ಫಂಡ್‌ಗಳ ಲೆಕ್ಕಾಚಾರ ಮಾಡಿದರೆ, 2024ರ ಜನವರಿ 1 ರಿಂದ ಇಲ್ಲಿಯವರೆಗೂ ಒಟ್ಟು 328 ಪ್ಯಾಸಿವ್‌ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರಿಗೆ ಒಟ್ಟಾರೆಯಾಗಿ ಶೇ. 51ರಷ್ಟು ರಿಟರ್ನ್‌ಗಳನ್ನು ನೀಡಿದೆ. ಮೀರೇ ಅಸೆಟ್‌ NYSE FANG+ ETF (Mirae Asset NYSE FANG+ ETF) ಇದರಲ್ಲಿ ಅಗ್ರಸ್ಥಾನದಲ್ಲಿದ್ದು 2024ರಲ್ಲಿ ಇದು ಹೂಡಿಕೆದಾರರಿಗೆ ಶೇ. 50.90ರಷ್ಟು ರಿಟರ್ನ್ಸ್‌ ನೀಡಿದೆ. ನಂತರದ ಸ್ಥಾನದಲ್ಲಿ ಮೋತಿಲಾಲ್‌ ಓಸ್ವಾಲ್‌ ಬಿಎಸ್‌ಇ ಹೆಲ್ತ್‌ಕೇರ್‌ ಇಟಿಎಫ್‌ (Motilal Oswal BSE Healthcare ETF) ಇದ್ದು, ಇದೇ ಅವಧಿಯಲ್ಲಿ ಹೂಡಿಕೆ ಮಾಡಿದವರಿಗೆ ಶೇ. 40.61ರಷ್ಟು ರಿಟರ್ನ್ಸ್‌ ನೀಡಿದೆ. ಪ್ಯಾಸಿವ್‌ ಫಂಡ್‌ ಆಧಾರಿತ ಮ್ಯೂಚುಯಲ್ ಫಂಡ್ ಅಥವಾ ಎಕ್ಸ್ಚೇಂಜ್-ಟ್ರೇಡೆಡ್ ಫಂಡ್ (ಇಟಿಎಫ್) ಎಂದರೆ, ಒಂದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕದ ಕಾರ್ಯಕ್ಷಮತೆಯ ಆಧಾರದಲ್ಲಿಯೇ ಮಾರುಕಟ್ಟೆಯಲ್ಲಿ ಏರಿಳಿತ ಕಾಣುವಂಥ ಫಂಡ್‌ಗಳಾಗಿರುತ್ತವೆ.

ಪ್ಯಾಸಿವ್‌ ಮ್ಯೂಚುಯಲ್ ಫಂಡ್ಸ್‌: 2024ರ ಟಾಪ್‌ 20 ಫಂಡ್ಸ್‌

Mirae Asset NYSE FANG+ ETF 50.90%
Motilal Oswal BSE Healthcare ETF 40.61%
CPSE ETF 37.80%
Mirae Asset S&P 500 Top 50 ETF 37.01%
Aditya Birla SL Nifty Next 50 ETF 36.01%
ICICI Pru Nifty Next 50 ETF 35.94%
UTI-Nifty Next 50 ETF 35.93%
Mirae Asset Nifty Next 50 ETF 35.91%
Aditya Birla SL Nifty Healthcare ETF 35.91%
SBI Nifty Next 50 ETF 35.88%
HDFC NIFTY Next 50 ETF 35.80%
Nippon India ETF Nifty Next 50 Junior BeES 35.78%
Kotak Nifty Alpha 50 ETF 35.68%
Nippon India Nifty Next 50 Junior BeES FoF 35.37%
ICICI Pru Nifty Healthcare ETF 35.28%
ICICI Pru Nifty Next 50 Index Fund 35.22%
Motilal Oswal Nifty Microcap 250 Index Fund 35.10%
Axis NIFTY Healthcare ETF 35.03%
DSP NIFTY Next 50 Index Fund 35.02%
UTI Nifty Next 50 Index Fund 35.02%

 (2024ರ ಜನವರಿ 1 ರಿಂದ 2024ರ ಡಿಸೆಂಬರ್‌ 4ರವರೆಗಿನ ನಿರ್ವಹಣೆ ಆಧಾರಿತ)

CPSE ETF ಮತ್ತು Mirae Asset S&P 500 ಟಾಪ್ 50 ETF ಈ ಅವಧಿಯಲ್ಲಿ ಕ್ರಮವಾಗಿ 37.80% ಮತ್ತು 37.01% ಆದಾಯವನ್ನು ನೀಡಿವೆ. ಎಸ್‌ಬಿಐ ನಿಫ್ಟಿ ನೆಕ್ಸ್ಟ್ 50 ಇಟಿಎಫ್ ಮತ್ತು ಎಚ್‌ಡಿಎಫ್‌ಸಿ ನಿಫ್ಟಿ ನೆಕ್ಸ್ಟ್ 50 ಇಟಿಎಫ್ ಮೇಲೆ ತಿಳಿಸಿದ ಅವಧಿಯಲ್ಲಿ ಕ್ರಮವಾಗಿ 35.88% ಮತ್ತು 35.80% ನಷ್ಟು ಲಾಭವನ್ನು ನೀಡಿವೆ.

ICICI ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್‌ನಿಂದ ಎರಡು ಸ್ಕೀಮ್‌ಗಳಾದ ICICI Pru Nifty Healthcare ETF ಮತ್ತು ICICI Pru Nifty Next 50 ಇಂಡೆಕ್ಸ್ ಫಂಡ್ 2024 ರಲ್ಲಿ ಕ್ರಮವಾಗಿ 35.28% ಮತ್ತು 35.22% ಆದಾಯವನ್ನು ನೀಡಿದೆ.

Breaking: ಕರ್ನಾಟಕಕ್ಕೆ ಮೋದಿ ಸರ್ಕಾರ ಗುಡ್‌ ನ್ಯೂಸ್‌, ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಒಪ್ಪಿಗೆ

ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವನ್ನು ಆಧರಿಸಿದ 12 ಸ್ಕೀಮ್‌ಗಳು 2024 ರಲ್ಲಿ 34.55% ಮತ್ತು 35.02% ನಡುವಿನ ಆದಾಯನ್ನು ಹೂಡಿಕೆದಾರರಿಗೆ ನೀಡಿದೆ. ಎಡೆಲ್‌ವೀಸ್ ನಿಫ್ಟಿ ಮಿಡ್‌ಕ್ಯಾಪ್150 ಮೊಮೆಂಟಮ್ 50 ಇಂಡೆಕ್ಸ್ ಫಂಡ್ ಮತ್ತು ಟಾಟಾ ನಿಫ್ಟಿ ಮಿಡ್‌ಕ್ಯಾಪ್ 150 ಮೊಮೆಂಟಮ್ 50 ಇಂಡೆಕ್ಸ್ ಫಂಡ್, 150 ಮೊಮೆಂಟಮ್ 50 ಇಂಡೆಕ್ಸ್ ಫಂಡ್ ಇದೇ ಅವಧಿಯಲ್ಲಿ ಅನುಕ್ರಮವಾಗಿ 1% ಮತ್ತು 3.453 ಆದಾಯವನ್ನು ನೀಡಿತು. 

Mangaluru: ಕೆಟ್ಟಿದ್ದ ಫ್ರಿಜ್‌ ಸರಿ ಮಾಡಲು ಬಂದು ಶೀಲ ಹಾಳು ಮಾಡಿದ ಶಫೀನ್‌

UTI BSE ಸೆನ್ಸೆಕ್ಸ್ ನೆಕ್ಸ್ಟ್‌ 50 ETF ಮತ್ತು SBI BSE ಸೆನ್ಸೆಕ್ಸ್ ನೆಕ್ಸ್ಟ್‌ 50 ETF ಸೂಚಿಸಿದ ಅವಧಿಯಲ್ಲಿ ಕ್ರಮವಾಗಿ 30.71% ಮತ್ತು 30.66% ಆದಾಯ ತಂದಿತ್ತಿದೆ. ಮಿರೇ ಅಸೆಟ್ ನಿಫ್ಟಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಇಟಿಎಫ್ ಎಫ್‌ಒಎಫ್ ಮತ್ತು ನವಿ ನಿಫ್ಟಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಇಂಡೆಕ್ಸ್ ಫಂಡ್ ಇದೇ ಅವಧಿಯಲ್ಲಿ ಕ್ರಮವಾಗಿ 29.03% ಮತ್ತು 28.70% ಆದಾಯವನ್ನು ನೀಡಿವೆ.

ನಾವು 2024 ರಲ್ಲಿ ಡೆಟ್‌ ಮತ್ತು ಈಕ್ವಿಟಿ ಸೇರಿದಂತೆ ಎಲ್ಲಾ ಪ್ಯಾಸಿವ್‌ ಫಂಡ್‌ಗಳನ್ನು ಪರಿಗಣಿಸಿದ್ದೇವೆ. ನಾವು ನಿಯಮಿತ ಮತ್ತು ಬೆಳವಣಿಗೆಯ ಆಯ್ಕೆಗಳನ್ನು ಪರಿಗಣಿಸಿದ್ದೇವೆ. ನಾವು ಜನವರಿ 1, 2024 ರಿಂದ ಡಿಸೆಂಬರ್ 4, 2024 ರವರೆಗಿನ ಕಾರ್ಯಕ್ಷಮತೆಯನ್ನು ಲೆಕ್ಕ ಹಾಕಿದ್ದೇವೆ.

ಗಮನಿಸಿ, ಮೇಲಿನ ಲೇಖನವು ಯಾವುದೇ ಶಿಫಾರಸು ಅಲ್ಲ. 2024 ರಲ್ಲಿ ಪ್ಯಾಸಿವ್‌ ಫಂಡ್‌ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಲೇಖನವಷ್ಟೇ.
 

Latest Videos
Follow Us:
Download App:
  • android
  • ios