ವಧುವರರು ಓಡಿ ಹೋಗುತ್ತಿರುವ ವಿಡಿಯೋ ವೈರಲ್‌ ಸೂಟು ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಓಡಿದ ವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮದುವೆಯ ಮೊದಲು ತಮ್ಮ ಪ್ರೇಮವನ್ನು ಉಳಿಸಿಕೊಳ್ಳಲು ಹುಡುಗ ಹುಡುಗಿ ಓಡಿ ಹೋಗುವುದು ಊರು ಬಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಮದುವೆಯಾದ ನಂತರ ವಧು ಹಾಗೂ ವರ ಓಡಿ ಹೋಗಿದ್ದಾರೆ. ಹಾಗಂತ ಇವರೇನು ಪ್ರೀತಿ ಉಳಿಸಿಕೊಳ್ಳುವ ಸಲುವಾಗಿಯೋ, ಪೋಷಕರಿಗೆ ಹೆದರಿಯೋ ಓಡಿ ಹೋದಂತೆ ಕಾಣುತ್ತಿಲ್ಲ. ಇವರೇನು ಸಂಪ್ರದಾಯವನ್ನು ಪಾಲಿಸುವಂತೆ ಕಾಣಿಸುತ್ತಿದೆ. ಆದರೆ ಇವರು ಏಕೆ ಓಡಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಎಲ್ಲೋ ಉಲ್ಲೇಖವಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಈ ವಿಡಿಯೋವನ್ನು ಎಲ್ಲಿ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ ವಿಡಿಯೋದಲ್ಲಿ ಕಾಣಿಸುವಂತೆ ಆಗ ತಾನೇ ಮದುವೆಯಾದಂತೆ ಕಾಣಿಸುವ ಜೋಡಿಯೊಂದು ಮಣ್ಣಿನ ರಸ್ತೆಯಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ಓಡುತ್ತಿದ್ದಾರೆ. ವರ ಪೇಟ ತೊಟ್ಟು ಸೂಟು ಧರಿಸಿ ಕೈಯಲ್ಲೊಂದು ಖಡ್ಗ ಹಿಡಿದು ಓಡುತ್ತಿದ್ದರೆ ವಧು ಆತನಿಗೆ ಪೈಪೋಟಿ ನೀಡುತ್ತಿದ್ದಾಳೆ. ಇವರಿಬ್ಬರು ಒಟ್ಟಿಗೆ ಓಡಬೇಕೆಂಬ ನಿಯಮವಿದೆಯೇನೋ ಗೊತ್ತಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಪಿಂಕ್ ಬಣ್ಣದ ಶಾಲನ್ನು ಇಬ್ಬರಿಗೂ ಕಟ್ಟಲಾಗಿದೆ. ಇನ್ನು ಇವರಿಬ್ಬರ ಮುಂದೆ ವಾಹನವೊಂದು ಹೋಗುತ್ತಿದ್ದು, ಅದನ್ನು ಹತ್ತಲು ಓಡಿ ಹೋಗುವಂತೆ ಕಾಣಿಸುತ್ತಿದೆ. ಜೊತೆಗೆ ಮಣ್ಣಿನ ರಸ್ತೆಯಲ್ಲಿ ವಾಹನ ಮುಂದೆ ಸಾಗಿದ್ದರಿಂದ ಧೂಳು ಹಾರುತ್ತಿದ್ದು ಧೂಳಿನ ಮಧ್ಯೆ ಈ ಜೋಡಿ ಓಡುತ್ತಿರುವುದು ನೋಡಿದರೆ ಅಯ್ಯೋ ಅನಿಸುತ್ತಿದೆ. 

View post on Instagram

ಆರ್‌ಕೆ ಖಾನ್ ಎಂಬ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 12.4 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜನರಿಗೂ ಈ ನೂತನ ವಧುವರರ ಓಟ ಕುತೂಹಲ ಕೆರಳಿಸಿದ್ದು, ಏಕೆ ಓಡಿ ಹೋಗುತ್ತಿದ್ದೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

ಮದುವೆ ಉಡುಗೆಯೇ ಕಳ್ಳತನ: ತಮ್ಮದೇ ಮದುವೆ ದಿನ ಅಂದರ್‌ ಆದ ಜೋಡಿ

ಮದುವೆಯ ಇಂತಹ ನೂರಾರು ತಮಾಷೆಯ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಕೆಲ ದಿನಗಳ ಹಿಂದೆ ಮದುವೆ ದಿನವೇ ಮದುವೆ ಹೆಣ್ಣು ಫುಶ್ ಅಪ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ ಎಂದರೆ ಅದು ಜೀವನವನ್ನೇ ಬದಲಾಯಿಸುವ ದಿನ. ಆ ದಿನ ವಧು ವರರು ಸಂಭ್ರಮದ ಜೊತೆ ಸೌಂದರ್ಯವೂ ಮುಖದಲ್ಲಿ ಕಳೆಕಟ್ಟಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. ಆದರೆ ಇಲ್ಲೊಬ್ಬರು ವಧು ಮದುವೆ ದಿನ ಸಖತ್ ಆಗಿ ರೆಡಿ ಆಗುವುದರ ಜೊತೆ ಮದುವೆ ದಿನವೇ ಫುಶ್‌ಅಪ್ಸ್‌ ಮಾಡುವ ಮೂಲಕ ತಾನು ಯಾವ ಪುರುಷರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮದುವೆ ಹೆಣ್ಣು ಫುಶ್‌ಅಪ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

12 ಸೆಕೆಂಡುಗಳ ಈ ವಿಡಿಯೋದಲ್ಲಿ ಮದುವೆ ಹೆಣ್ಣು ಭಾರಿ ಗಾತ್ರದ ಲೆಹೆಂಗಾ ಧರಿಸಿ ಮಿನುಗುವ ಆಭರಣಗಳನ್ನು ತೊಟ್ಟು ಫುಶ್‌ಅಪ್ಸ್‌ ಮಾಡುವ ಮೂಲಕ ಎಲ್ಲರನ್ನು ದಂಗು ಬಡಿಸಿದ್ದಾರೆ. ಭಾರಿ ಆಭರಣ ಹಾಗೂ ಭಾರವಾದ ಲೆಹೆಂಗಾ ತಲೆ ಮೇಲೆ ಶಾಲು ಹಾಕಿಕೊಂಡು ಆಕೆ ಫುಶ್‌ ಅಪ್‌ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಆಕೆ ತನ್ನ ಅತ್ತೆ ಮಾವ ಸೇರಿದಂತೆ ಪತಿಯ ಕುಟುಂಬದವರಿಗೆ ಎಚ್ಚರಿಕೆ ನೀಡುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಮದುವೆಗಳಲ್ಲಿ ಮೋಜು ಮಸ್ತಿ ಸಾಮಾನ್ಯ. ಮದುವೆ (Marriage) ಮನೆಯಲ್ಲಿ ಡ್ಯಾನ್ಸ್ (Dance0 ಮಾಡೋದು ಇತ್ತೀಚಿನ ಟ್ರೆಂಡ್‌. ಮದುಮಕ್ಕಳ ಕಸಿನ್ಸ್‌, ಫ್ರೆಂಡ್ಸ್‌ ಡ್ಯಾನ್ಸ್‌ ಫ್ಲೋರ್ ಚಿಂದಿ ಮಾಡ್ತಾರೆ. ಕೆಲವು ಮದುವೆಗಳಲ್ಲಿ ಮದುಮಕ್ಕಳೇ ಭರ್ಜರಿಯಾಗಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ಈ ಮದುವೆಯಲ್ಲಿ ವಧುವಿನ ತಂದೆ (Father0ಯ ಮಾದಕ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾ (Social Media)ದಲ್ಲಿ ವೈರಲ್ (Viral) ಆಗಿದೆ.