ಬೆಂಗಳೂರು (ಡಿ. 21):  ಇಂಗ್ಲೆಂಡ್​ನಲ್ಲಿ ಕಂಡು ಬರುತ್ತಿರುವ ಹೊಸ ಸ್ವರೂಪದ ವೈರಸ್​ ಆತಂಕಕ್ಕೆ ಕಾರಣವಾಗಿದ್ದು ಕೇಂದ್ರ ಸರ್ಕಾರ  ಡಿಸೆಂಬರ್ 23 ರಿಂದ 31 ರವರೆಗಿನ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರವೂ ಹೆಜ್ಜೆ ಇಟ್ಟಿದ್ದು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ಸಂದೇಶ ಕಳಿಸಿದೆ. 

ಡಿಸೆಂಬರ್ 7  ರ ನಂತರ ಯುಕೆಯಿಂದ ಆಗಮಿಸಿದ ಪ್ರಯಾಣಿಕರ ಪಟ್ಟಿ ನೀಡಲು ವಿಮಾನ ನಿಲ್ದಾಣಗಳಿಗೆ ಸೂಚವನೆ ನೀಡಲಾಗಿದೆ. ಈಗಾಗಲೇ ಭಾರತ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳು ಇಂಗ್ಲೆಡ್​ ವಿಮಾನಯಾನವನ್ನು ರದ್ದು ಪಡಿಸಿದೆ.  ಅಲ್ಲದೇ ಇಂಗ್ಲೆಂಡ್​ನಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಹೊಸ ವೈರಸ್ ನಿಯಂತ್ರಣಕ್ಕೆ ಸುಧಾಕರ್ ಸೂತ್ರ

ಯುಕೆ ಯಿಂದ ಇಳಿಯುವವರಿಗೆ, ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು ಎಂದು ತಿಳಿಸಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಕೊರೋನಾ ವೈರಸ್ ಇಳಿಕೆ ಹಾದಿಯಲ್ಲಿ ಇದ್ದರೂ ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ವೈರಸ್ ಆತಂಕ ಹೆಚ್ಚಿಸಿದ್ದು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ  ಜತೆಗೆ ಭದ್ರತೆ ಹೆಚ್ಚಳ ಮಾಡಿಕೊಳ್ಳಲಾಗಿದೆ.