ನವದೆಹಲಿ(ನ.26):  ಕೊರೋನಾ ವೈರಸ್ ಕಾರಣ ದೇಶದಲ್ಲಿ ಹೇರಿದ್ದ ಲಾಕ್‌ಡೌನ್ ಹಂತ ಹಂತವಾಗಿ ಅನ್‌ಲಾಕ್ ಮಾಡಲಾಗಿದೆ. ಇದೀಗ ಕೇಂದ್ರ ಗೃಹ ಇಲಾಖೆ ಅನ್‌ಲಾಕಕ್ 6.0 ಮಾರ್ಗಸೂಚಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಇಲಾಖೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ಹೇರಿದೆ. ಕೆಲ ಆಯ್ದ ವಿಮಾನ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ಹೈಪರ್ ಲೂಪ್ ನಲ್ಲಿ ಮೊದಲ ಸುರಕ್ಷಿತ ಪ್ರಯಾಣ ಯಶಸ್ವಿ!

ಅನ್‌ಲಾಕ್ 6.0 ಮಾರ್ಗಸೂಚಿ ಬಿಡುಗಡೆಯಾದ ಬೆನ್ನಲ್ಲೇ ಕೇಂದ್ರ ವಿಮಾನ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಿದೆ.  ಈ ಪ್ರಕಾರ ಡಿಸೆಂಬರ್ 31ರ ವರೆಗೆ ವಿಮಾನ ಹಾರಾಟ ನಿರ್ಬಂಧ ಹೇರಲಾಗಿದೆ.  ಆದರೆ ತುರ್ತ ಕಾರ್ಗೋ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ.

ಕೇವಲ 3 ನಿಮಿಷದಲ್ಲಿ ಕಾರು ವಿಮಾನವಾಗಿ ಬದಲಾಗುತ್ತೆ; ಕ್ಲೈನ್ ವಿಷನ್ ಆವಿಷ್ಕಾರ !.

ಕೊರೋನಾ ವೈರಸ್ ಕಾರಣ ಪ್ರಯಾಣ ಮತ್ತು ವೀಸಾ ನಿರ್ಬಂಧ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಈಗಾಗಲೇ ಅಂತಾರಾಷ್ಟ್ರೀಯ ಶೆಡ್ಯೂಲ್ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. 

ನವೆಂಬರ್ ತಿಂಗಳ ಆರಂಭದಲ್ಲಿ ಕೇಂದ್ರ ವಿಮಾನಯಾನ ಇಲಾಖೆ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟ ನಿಷೇಧವನ್ನು ನವೆಂಬರ್ 30ರ ವರೆಗೆ ವಿಸ್ತರಿಸಿತ್ತು. ಇದೀಗ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ.