Asianet Suvarna News Asianet Suvarna News

ಹೈಪರ್ ಲೂಪ್ ನಲ್ಲಿ ಮೊದಲ ಸುರಕ್ಷಿತ ಪ್ರಯಾಣ ಯಶಸ್ವಿ!

ಹೊಸದಾಗಿ ಅನಾವರಣಗೊಂಡಿರುವ ಎಕ್ಸ್ ಪಿ -2 ವಾಹನದಲ್ಲಿ  ಮೊದಲ ಮಾನವ ಪ್ರಯಾಣ  ಯಶಸ್ವಿಯಾಗಿದೆ. ನಿವಾಸಿಗಳ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕಸ್ಟಮ್-ನಿರ್ಮಿತವಾಗಿದೆ. ಉತ್ಪಾದನಾ ವಾಹನವು ದೊಡ್ಡದಾಗಿದೆ ಮತ್ತು 28 ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

First Passengers Travel Safely on a Hyperloop with Pune Local to Ride Next ckm
Author
Bengaluru, First Published Nov 9, 2020, 3:50 PM IST

ಬೆಂಗಳೂರು(ನ.09) : ಯುನೈಟೆಡ್ ಸ್ಟೇಟ್ಸ್ ನಲ್ಲಿನ ಡೆವ್ ಲೂಪ್ ಪರೀಕ್ಷಾ ಕೇಂದ್ರದ ಹೈಪರ್ ಲೂಪ್ ಪಾಡ್ ನಲ್ಲಿ ಮೊದಲ ಪ್ರಯಾಣಿಕ ಯಶಸ್ವಿಯಾಗಿ ಪ್ರಯಾಣ ಮಾಡುವ ಮೂಲಕ ವರ್ಜಿನ್ ಹೈಪರ್ ಲೂಪ್ ಇತಿಹಾಸ ಸೃಷ್ಟಿಸಿದೆ. ಹೊಸದಾಗಿ ಅನಾವರಣಗೊಂಡಿರುವ ಎಕ್ಸ್ ಪಿ -2 ವಾಹನದಲ್ಲಿ  ಮೊದಲ ಮಾನವ ಪ್ರಯಾಣ  ಯಶಸ್ವಿಯಾಗಿದೆ. ಇದನ್ನು ಜಾರ್ಕೆ ಇಂಗಲ್ಸ್ ಗ್ರೂಪ್ ವಿನ್ಯಾಸಗೊಳಿಸಿದೆ.

ಕೇವಲ 10 ನಿಮಿಷದಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ!

ಇದು ನಿವಾಸಿಗಳ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕಸ್ಟಮ್-ನಿರ್ಮಿತವಾಗಿದೆ. ಉತ್ಪಾದನಾ ವಾಹನವು ದೊಡ್ಡದಾಗಿದೆ ಮತ್ತು 28 ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶವಿದೆ. ಈ 2 ಸೀಟರ್ ಗಳ ಎಕ್ಸ್ ಪಿ-2 ವಾಹನವನ್ನು ಪ್ರಯಾಣಿಕರು ಸುರಕ್ಷಿತವಾಗಿ ಹೈಪರ್ ಲೂಪ್ ವಾಹನದಲ್ಲಿ ಪ್ರಯಾಣಿಸಬಹುದು ಎಂಬುದನ್ನು ನಿರೂಪಿಸಲು ತಯಾರಿಸಲಾಗಿದೆ.

First Passengers Travel Safely on a Hyperloop with Pune Local to Ride Next ckm

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತೀ ವೇಗದ ಸಾರಿಗೆ; ಹೈಪರ್‌ಲೂಪ್ ಜೊತೆ BIAL ಒಪ್ಪಂದ!.

ಕಳೆದ ಕೆಲವ ವರ್ಷಗಳಿಂದ ವರ್ಜಿನ್ ಹೈಪರ್ ಲೂಪ್ ತಂಡವು ಈ ಐತಿಹಾಸಿಕ ತಂತ್ರಜ್ಞಾನವನ್ನು ಸಾಕಾರಗೊಳಿಸುವಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿತ್ತು. ನಾವು ಇಂದು ಅದರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಇದರೊಂದಿಗೆ ಈ ನಾವೀನ್ಯತೆಯ ಮನೋಭಾವವು ಮುಂದಿನ ವರ್ಷಗಳಲ್ಲಿ ಜನರು ವಾಸಿಸುವ, ಕೆಲ ಮಾಡುವ ಮತ್ತು ಪ್ರಯಾಣಿಸುವ ವಿಧಾನವನ್ನು ಬದಲಿಸುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ ಎಂದು ವರ್ಜಿನ್ ಗ್ರೂಪ್ ನ ಸಂಸ್ಥಾಪಕ ಸರ್ ರಿಚರ್ಡ್ ಬ್ರ್ಯಾನ್ಸನ್ ಹೇಳಿದರು.

ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಜೋಶ್ ಜಿಯಾಗೆಲ್ ಮತ್ತು ಪ್ಯಾಸೆಂಜರ್ ಎಕ್ಸ್ ಪೀರಿಯನ್ಸ್ ನಿರ್ದೇಶಕರಾದ ಸಾರಾ ಲುಚಿಯಾನ್ ಈ ಹೊಸ ಮಾದರಿಯ ರೂಪಾಂತರದಲ್ಲಿ ರೈಡ್ ಮಾಡಿದ ವಿಶ್ವದ ಮೊಟ್ಟ ಮೊದಲ ಪ್ರಯಾಣಿಕರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪರೀಕ್ಷಾ ಅಭಿಯಾನವು ವರ್ಜಿನ್ ಹೈಪರ್ ಲೂಪ್ ನ ಪವರ್ ಎಲೆಕ್ಟ್ರಾನಿಕ್ಸ್ ವಿಶೇಷತಜ್ಞ ಹಾಗೂ ಪುಣೆ ಮೂಲದ ತನಯ್ ಮಂಜ್ರೇಕರ್ ಅವರೊಂದಿಗೆ ಮುಂದಿನ ಪ್ರಯಾಣ ಮುಂದುವರಿಯಲಿದೆ.

First Passengers Travel Safely on a Hyperloop with Pune Local to Ride Next ckm

ವರ್ಜಿನ್ ಹೈಪರ್ ಲೂಪ್ ನಲ್ಲಿ ಪವರ್ ಎಲೆಕ್ಟ್ರಾನಿಕ್ಸ್ ಸ್ಪೆಷಲಿಸ್ಟ್ ತನಯ್ ಮಂಜ್ರೇಕರ್ ಅವರು ಮಾತನಾಡಿ, ``ಹೈಪರ್ ಲೂಪ್ ನಲ್ಲಿ ಕೆಲಸ ಮಾಡುವುದು- ಅದನ್ನು ಸವಾತಿ ಮಾಡಿದವರಲ್ಲಿ ಮೊದಲಿಗರಾಗಿರಲಿ-ಇದು ನಿಜಕ್ಕೂ ಒಂದು ಕನಸು ನನಸಾಗಿದೆ. ಇನ್ನು ಮುಂದೆ ಭಾರತವು ತನ್ನ ಮುಂದಿರುವ ಅದ್ಭುತ ಅವಕಾಶವನ್ನು ನೋಡುತ್ತದೆ. ಸವಾಲನ್ನು ಸ್ವೀಕರಿಸುವುದು ಮತ್ತು ಪ್ರಪಂಚದ ಉಳಿದ ಭಾಗಗಳನ್ನು ಮತ್ತೆ ಚಿಮ್ಮಲು ಹಾಗೂ ಪುಣೆ-ಮುಂಬೈ ಹೈಪರ್ ಲೂಪ್ ಯೋಜನೆಯ ಪ್ರಗತಿಯನ್ನು ಮುಂದುವರಿಸಲಿದೆ ಎಂಬುದು ನನ್ನ ಆಶಯವಾಗಿದೆ’’ ಎಂದು ತಿಳಿಸಿದರು.

ಮಾನವ ಪರೀಕ್ಷೆಯನ್ನು ಆರಂಭಿಕ ಹಂತಗಳಿಂದ ಇಂದಿನ ಯಶಸ್ವಿ ಪ್ರದರ್ಶನದವರೆಗೆ ಉದ್ಯಮ-ಮಾನ್ಯತೆ ಪಡೆದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ (ಐಎಸ್ಎ) ಪ್ರಮಾಣಪತ್ರವನ್ನು ನೀಡುತ್ತದೆ. ಕಠಿಣ ರೀತಿಯ ಮತ್ತು ಸಮಗ್ರ ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರ ಹೊಸದಾಗಿ ಅನಾವರಣಗೊಂಡಿರುವ ಎಕ್ಸ್ ಪಿ-2 ವಾಹನವು ವಾಣಿಜ್ಯ ಹೈಪರ್ ಲೂಪ್ ವ್ಯವಸ್ಥೆಯಲ್ಲಿ ಕಂಡು ಬರುವ ಅನೇಕ ಸುರಕ್ಷತೆ-ನಿರ್ಣಾಯಕ ವ್ಯವಸ್ಥೆಗಳನ್ನು ಪ್ರದರ್ಶಿಸುತ್ತದೆ. ಇದಲ್ಲದೇ, ಅತ್ಯಾಧುನಿಕವಾದ ನಿಯಂತ್ರಣ ವ್ಯವಸ್ಥೆಗಳನ್ನು ಒಳಗೊಂಡಿದೆ. ಅಸಹಜವಾದ ಪರಿಸ್ಥಿತಿಗಳನ್ನು ಪತ್ತೆ ಮಾಡಿ ಮತ್ತು ಸೂಕ್ತವಾದ ತುರ್ತು ಪ್ರತಿಕ್ರಿಯೆಗಳನ್ನು ಕ್ಷಿಪ್ರವಾಗಿ ಪ್ರಚೋದಿಸುತ್ತದೆ.

ಹೈಪರ್ ಲೂಪ್ ಸುರಕ್ಷಿತವೇ ಎಂಬುದನ್ನು ನಾನು ಎಷ್ಟು ಬಾರಿ ಕೇಳುತ್ತೇನೆ ಎಂಬುದನ್ನು ನಾನು ನಿಮಗೆ ಹೇಳುವುದಿಲ್ಲ. ಇಂದಿನ ಪ್ರಯಾಣಿಕ ಪರೀಕ್ಷೆಯೊಂದಿಗೆ ನಾವು ಈ ಪ್ರಶ್ನೆಗೆ ಯಶಸ್ವಿಯಾಗಿ ಉತ್ತರ ನೀಡಿದ್ದೇವೆ. ವರ್ಜಿನ್ ಹೈಪರ್ ಲೂಪ್ ಒಬ್ಬ ವ್ಯಕ್ತಿಯನ್ನು ನಿರ್ವಾತ ಪರಿಸರದಲ್ಲಿ ಸುರಕ್ಷಿತವಾಗಿ ಪಾಡ್ ನಲ್ಲಿ ಇರಿಸಲು ಸಾಧ್ಯವಿಲ್ಲ, ಆದರೆ ಕಂಪನಿಯು ಸುರಕ್ಷತೆಯ ಬಗ್ಗೆ ಚಿಂತನಾಶೀಲವಾದ ವಿಧಾನವನ್ನು ಹೊಂದಿದೆ ಮತ್ತು ಅದನ್ನು ಸ್ವತಂತ್ರ ಮೂರನೇ ವ್ಯಕ್ತಿಯಿಂದ ಮೌಲ್ಯೀಕರಿಸಲಾಗಿದೆ ಎಂದು ವರ್ಜಿನ್ ಹೈಪರ್ ಲೂಪ್ ನ ಸಿಇಒ ಜೇಯ್ ವಾಲ್ಡರ್ ಹೇಳಿದರು.

ವಿಶ್ವದೆಲ್ಲೆಡೆ ಗಮನಾರ್ಹವಾದ ಪ್ರಗತಿಯನ್ನು ನಿರ್ಮಾಣ ಮಾಡುತ್ತದೆ. ಭಾರತದಲ್ಲಿ ಮಹಾರಾಷ್ಟ್ರ ಸರ್ಕಾರವು ಹೈಪರ್ ಲೂಪ್ ಅನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಯೆಂದು ಪರಿಗಣಿಸಿದೆ ಮತ್ತು ವರ್ಜಿನ್ ಹೈಪರ್ ಲೂಪ್ –ಡಿಪಿ ವರ್ಲ್ಡ್ ಕನ್ಸೋರ್ಷಿಯಂ ಅನ್ನು ಮುಂಬೈ-ಪುಣೆ ಹೈಪರ್ ಲೂಪ್ ಯೋಜನೆಗೆ ಮೂಲ ಯೋಜನಾ ಪ್ರತಿಪಾದಕ ಸಂಸ್ಥೆಯಾಗಿ ಅನುಮೋದಿಸಿದೆ. ಪುಣೆ-ಮುಂಬೈ ನಡುವೆ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಇದೊಂದು ಐತಿಹಾಸಿಕವಾದ ಮೈಲಿಗಲ್ಲಾಗಿದೆ. ಸಮೂಹ ಸಾರಿಗೆಯ ಇತರೆ ಸಾಂಪ್ರದಾಯಿಕ ಪ್ರಕಾರಗಳ ಜೊತೆಯಲ್ಲಿ ಹೈಪರ್ ಲೂಪ್ ಅನ್ನು ಗುರುತಿಸಿರುವುದು ಅಷ್ಟೇ ಪ್ರಮುಖವಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಟ್ರಾನ್ಸ್ ಪೋರ್ಟೇಶನ್ ನ ಸಾಂಪ್ರದಾಯಿಕವಲ್ಲದ ಮತ್ತು ಉದಯೋನ್ಮುಖ ಸಾರಿಗೆ ತಂತ್ರಜ್ಞಾನ(ಎನ್ಇಟಿಟಿ) ಮಂಡಳಿ ಹೊರಡಿಸಿರುವ ನಿಯಂತ್ರಕ ಮಾರ್ಗದರ್ಶನ ದಾಖಲೆಯ ಜೊತೆಗೆ ವರ್ಜಿನ್ ಹೈಪರ್ ಲೂಪ್ ಗೆ ನಿಯಂತ್ರಕ ಮಾರ್ಗವನ್ನು ಅನ್ವೇಷಣೆ ಮಾಡಲು ಭಾರತ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ.

ಹೈಪರ್ ಲೂಪ್ ನ ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿನ ವ್ಯವಸ್ಥಾಪಕ ನಿರ್ದೇಶಕ ಹರ್ಜ್ ಧಾಲಿವಾಲ ಅವರು ಮಾತನಾಡಿ, ``ಭಾರತದಲ್ಲಿ ಹೈಪರ್ ಲೂಪ್ ವಾಣಿಜ್ಯೀಕರಣ ಮಾಡುವ ನಿಟ್ಟಿನಲ್ಲಿ ಇಂದಿನ ಪರೀಕ್ಷೆ ಗಮನಾರ್ಹವಾದ ಹೆಜ್ಜೆಯಾಗಿದೆ. ಇದು ಅಸ್ತಿತ್ವದಲ್ಲಿರುವ ಎಕ್ಸ್ ಪ್ರೆಸ್ ವೇನಲ್ಲಿ ವಿಶ್ವದ ಮೊದಲ ಪುಣೆ-ಮುಂಬೈನೊಂದಿಗೆ ಸಂಪರ್ಕ ಹೊಂದಿರಬಹುದು’’ ಎಂದು ತಿಳಿಸಿದರು.

ಈ ಹೊಸ ಮಾದರಿಯ ಸಾರಿಗೆಯಲ್ಲಿ ಭಾರತ ಜಗತ್ತನ್ನು ಮುನ್ನಡೆಸುವ ಅವಕಾಶ ಅಭೂತಪೂರ್ವವಾಗಿದೆ. ಈ ಯೋಜನೆಯು ಮಹಾರಾಷ್ಟ್ರದ ಅತಿ ದೊಡ್ಡ ಖಾಸಗಿ ಮೂಲಸೌಕರ್ಯದ ಹೂಡಿಕೆಯಾಗಿದ್ದು, ಇದರಲ್ಲಿ 1.8 ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಅಲ್ಲದೇ 36 ಬಿಲಿಯನ್ ಯುಎಸ್ ಡಿಯಷ್ಟು ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಸೃಷ್ಟಿಸುತ್ತದೆ’’ ಎಂದು ಹೇಳಿದರು.

ಈ ಆವೇಗವು, ಹೈಪರ್ ಲೂಪ್ ಪ್ರಮಾಣೀಕರಣ ಕೇಂದ್ರದಲ್ಲಿನ ಪ್ರಗತಿಗಳು ಮತ್ತು ಇಂದು ಸಾಧಿಸಿರುವ ಐತಿಹಾಸಿಕ ಸುರಕ್ಷತಾ ಪ್ರದರ್ಶನದೊಂದಿಗೆ ಸೇರಿ ವಿಶ್ವದಾದ್ಯಂತ ಹೈಪರ್ ಲೂಪ್ ವ್ಯವಸ್ಥೆಗಳ ಪ್ರಮಾಣೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಅದೇ ರೀತಿ ಭಾರತವನ್ನು ಒಳಗೊಂಡಂತೆ ವಾಣಿಜ್ಯ ಯೋಜನೆಗಳತ್ತ ಒಂದು ಪ್ರಮುಖ ಹೆಜ್ಜೆ ಇದಾಗಿದ್ದು, ತಂತ್ರಜ್ಞಾನದ ಮೊದಲ ಮಾನವ ಪರೀಕ್ಷೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ನಡೆದಿದೆ.

ಸಿಸ್ಕೋ ಸಿಸ್ಟಮ್ಸ್ ನ ಮಾಜಿ ಕಾರ್ಯಕಾರಿ ಅಧ್ಯಕ್ಷ ಮತ್ತು ಸಿಇಒ ಹಾಗೂ ಹಾಲಿ ಜೆಸಿ2 ವೆಂಚರ್ಸ್ ನ ಸಂಸ್ಥಾಪಕರಾದ ಜಾನ್ ಚೇಂಬರ್ಸ್ ಅವರು ಮಾತನಾಡಿ, ``ನನಗೆ ಮಾರುಕಟ್ಟೆ ಪರಿವರ್ತನೆಗಳ ವಿರುದ್ಧ ಸ್ಪರ್ಧೆ ಮಾಡುವುದೆಂದರೆ ಇಷ್ಟ, ಆದರೆ ಸ್ಪರ್ಧಿಗಳ ಜೊತೆಗಲ್ಲ ಹಾಗೂ ವರ್ಜಿನ್ ಹೈಪರ್ ಲೂಪ್ ಸಾರಿಗೆಯು ಭವಿಷ್ಯದ ಮುನ್ನಡೆಯಲ್ಲಿ ಸಾಗುವ ಸಾರಿಗೆಯಾಗಲಿದೆ’’ ಎಂದರು.

ನನ್ನ ತವರು ಸ್ಥಳವಾಗಿರುವ ವೆಸ್ಟ್ ವರ್ಜೀನಿಯಾದಲ್ಲಿ ಹೈಪರ್ ಲೂಪ್ ಪ್ರಮಾಣೀಕರಣ ಕೇಂದ್ರದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಯೊಂದಿಗೆ ಹಲವಾರು ಜಾಗತಿಕ ಯೋಜನೆಗಳು ಸೇರ್ಪಡೆಯಾಗುವಂತಾಗಿದೆ.

ಭಾರತ ಮತ್ತು ಅದರ ಹೊರತಾದ ದೇಶಗಳಿಗೆ ಈ ಆವಿಷ್ಕಾರಕವಾದ ತಂತ್ರಜ್ಞಾನವನ್ನು ಸಾಗರೋತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಸರಿಯಾದ ಹೆಜ್ಜೆ ಇಟ್ಟಿದ್ದೇವೆ. ನಾನು ಯಾವಾಗಲೂ ಭಾರತದ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೇನೆ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಫೋರಂನ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ನಾನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ಪ್ರಕಟಣೆ ಅರ್ಥವೇನೆಂಬುದನ್ನು ತಿಳಿಸಲು ನಾನು ಉತ್ಸುಕನಾಗಿದ್ದೇನೆ. ಈ ಪ್ರಯಾಣದಲ್ಲಿ ವರ್ಜಿನ್ ಹೈಪರ್ ಲೂಪ್ ಅನ್ನು ಬೆಂಬಲಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಏಕೆಂದರೆ, ಮುಂದಿನ ಪೀಳಿಗೆಯ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸೇರ್ಪಡೆಗೆ ಸಾಧ್ಯವಾದುದರ ಬಗ್ಗೆ ಕನಸು ಕಾಣಲು ಮತ್ತು ಸಾಕಾರಗೊಳಿಸಲು ಸಹಾಯ ಮಾಡುತ್ತದೆ’’ ಎಂದು ತಿಳಿಸಿದರು.

ಮಹಾರಾಷ್ಟ್ರವಲ್ಲದೇ ಉಪಖಂಡದಲ್ಲಿ ಹೈಪರ್ ಲೂಪ್ ಸಂಪರ್ಕ ಕಲ್ಪಿಸಲು ಸಾಕಷ್ಟು ಅವಕಾಶಗಳಿವೆ. ಕಳೆದ ತಿಂಗಳು ವರ್ಜಿನ್ ಹೈಪರ್ ಲೂಪ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಲಿಮಿಟೆಡ್ (ಬಿಐಎಎಲ್) ನೊಂದಿಗೆ ಒಪ್ಪಂದವನ್ನು ಘೋಷಿಸಿದೆ. ಈ ಒಪ್ಪಂದದ ಪ್ರಕಾರ ಬಿಎಲ್ಆರ್ ವಿಮಾನನಿಲ್ದಾಣದಿಂದ ಹೈಪರ್ ಲೂಪ್ ಕಾರಿಡಾರ್ ಅನ್ನು ನಿರ್ಮಾಣ ಮಾಡಬಹುದಾದ ಸಾಧಕ ಭಾದಕಗಳ ಅಧ್ಯಯನ ನಡೆಸಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ತಾಂತ್ರಿಕ, ಆರ್ಥಿಕ ಮತ್ತು ಮಾರ್ಗದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ತಲಾ 6 ತಿಂಗಳವರೆಗಿನ ಅಧ್ಯಯನವು ಎರಡು ಹಂತಗಳಲ್ಲಿ ನಡೆಯಲಿದೆ. ಪ್ರತಿ ಗಂಟೆಗೆ 1,080 ಕಿಲೋಮೀಟರ್ ವರೆಗಿನ ವೇಗದಲ್ಲಿ ಕೇವಲ 10 ನಿಮಿಷದಲ್ಲಿ ಬಿಎಲ್ಆರ್ ವಿಮಾನನಿಲ್ದಾಣದಿಂದ ನಗರಕ್ಕೆ ಸಾವಿರಾರು ಪ್ರಯಾಣಿಕರನ್ನು ಕರೆತರಲಿದೆ ಎಂಬುದನ್ನು ಪ್ರಾಥಮಿಕ ಅಧ್ಯಯನ ಹೇಳಿದೆ.

ಇದಲ್ಲದೇ, ವರ್ಜಿನ್ ಹೈಪರ್ ಲೂಪ್ ಪಂಜಾಬ್ ಸಾರಿಗೆ ಇಲಾಖೆಯೊಂದಿಗೆ ಡಿಸೆಂಬರ್ 2019 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಪಂಜಾಬ್ ನೊಂದಿಗಿನ ಪಾಲುದಾರಿಕೆಯನ್ನು ವಿಸ್ತರಣೆ ಮಾಡಲಿದ್ದು, ದಕ್ಷಿಣ ಭಾರತದಲ್ಲಿ ಮತ್ತಷ್ಟು ಅವಕಾಶಗಳನ್ನು ಅನ್ವೇಷಣೆ ಮಾಡಲಿದೆ. ಅದೇ ರೀತಿ ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿಯೂ ಅವಕಾಶಗಳನ್ನು ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಿದೆ.

Follow Us:
Download App:
  • android
  • ios