ಸ್ಲೋವಾಕಿಯಾ(ಅ.30): ವಿಶ್ವದ ಹಲವು ಕಂಪನಿಗಳು ಹಾರುವ ಕಾರು ಅಭಿವೃದ್ಧಿ ಪಡಿಸಿದೆ. ಇನ್ನು ಕೆಲ ಕಂಪನಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಆದರೆ ಸ್ಲೋವಾಕಿಯಾದ ಕ್ಲೈನ್ ವಿಶನ್ ಕಾರು ಅತ್ಯಾಧುನಿಕ ಹಾಗೂ ಕ್ಷಣಾರ್ಧದಲ್ಲಿ ರಸ್ತೆಯಲ್ಲಿ ಸಂಚರಿಸುವ ಕಾರು ವಿಮಾನವಾಗಿ ಬದಲಾಗುವ ತಂತ್ರಜ್ಞಾನದ ಫ್ಲೈಯಿಂಗ್ ಕಾರು ಅಭಿವೃದ್ಧಿ ಪಡಿಸಿದೆ. ಯಶಸ್ವಿ ಪರೀಕ್ಷೆ ಕೂಡ ನಡೆಸಲಾಗಿದ್ದು, ಇದು ವಿಶ್ವದ ಗಮನಸೆಳೆದಿದೆ.

ದಶಕಗಳ ಕನಸು ನನಸು, ಯಶಸ್ವಿಯಾಗಿ ಹಾರಾಟ ನಡೆಸಿದ ಹಾರುವ ಕಾರು!

ಕ್ಲೈನ್ ವಿಶನ್ ಫ್ಲೈಯಿಂಗ್ ಕಾರು ರಸ್ತೆಯಲ್ಲಿ ಹಾಗೂ ಗಾಳಿಯಲ್ಲಿ ಎರಡರಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ನೂತನ ಫ್ಲೈಯಿಂಗ್ ಕಾರು 1,100 ಕೆಜಿ ತೂಕವಿದ್ದು, 200 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. 

ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊಟ್ಟ ಮೊದಲ ಹಾರುವ ಕಾರು!.

ಈ ಫ್ಲೈಯಿಂಗ್ ಕಾರಿನ ವಿಶೇಷತೆ ಅಂದರೆ ರಸ್ತೆಯಲ್ಲಿ ಸಂಚರಿಸುವ ಈ ಕಾರು, ಕೇವಲ 3 ನಿಮಿಷದಲ್ಲಿ ವಿಮಾನವಾಗಿ ರೂಪಾಂತರಗೊಳ್ಳಲಿದೆ. ಇಷ್ಟೇ ಅಲ್ಲ, ವಿಮಾನದ ರೀತಿಯಲ್ಲಿ ರನ್ ವೇ ಮೂಲಕ ನೇರವಾಗಿ ಆಕಾಶಕ್ಕೆ ಹಾರಲಿದೆ. 

ನೂತನ ಫ್ಲೈಯಿಂಗ್ ಕಾರು ಅತ್ಯಂತ ಆಕರ್ಷಕವಾಗಿದೆ. ಇತರ ಕಾರುಗಳಂತೆ ದಾರಿಯಲ್ಲಿ ಸಂಚರಿಸಲಿದೆ. ಕಾರು ಹಾಗೂ ವಿಮಾನ ಎರಡು ತಂತ್ರಜ್ಞಾನಗಳನ್ನು ನಾಜೂಕಾಗಿ ಅಳವಡಿಸಲಾಗಿದೆ. ಇದಕ್ಕಾಗಿ ಕಳೆದ 30  ವರ್ಷಗಳಿಂದ ಕ್ಲೈನ್ ವಿಶನ್ ಸಂಸ್ಥೆ ಪರೀಕ್ಷೆಯಲ್ಲಿ ತೊಡಗಿತ್ತು.