Asianet Suvarna News Asianet Suvarna News

ಶೇಂಗಾಹೊಲದಲ್ಲಿ ಭಾರಿ ಗಾತ್ರದ ಮೂಲಂಗಿ ಬೆಳೆದ ಮಹಾರಾಷ್ಟ್ರದ ರೈತ

ಮಹಾರಾಷ್ಟ್ರದಲ್ಲಿ ದಲ್ಲಿ  ರೈತರೊಬ್ಬರು ಭಾರಿ ಗಾತ್ರದ ಮೂಲಂಗಿ ಬೆಳೆದಿದ್ದು, ಒಂದೊಂದು ಮೂಲಂಗಿಯೂ 5 ಕೆಜಿ ಗಿಂತ ಹೆಚ್ಚು ತೂಕ ತೂಗುತ್ತಿದೆ.,

New experiment with groundnut field Maharashtra farmer grows giant radish Each Weighing Over Five Kg akb
Author
First Published Mar 15, 2023, 12:59 PM IST | Last Updated Mar 15, 2023, 3:21 PM IST

ಬೀಡ್: ಒಂದು ಮೂಲಂಗಿ ಎಷ್ಟು ಕೇಜಿ ತೂಗಬಹುದು. ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಕೊಳ್ಳುವ ಅಥವಾ ನೋಡಿರುವ ಮೂಲಂಗಿಗಳು ಒಂದು ಕೇಜಿ ಆಗಬೇಕಾದರೆ ಕನಿಷ್ಟ 3-4 ಮೂಲಂಗಿಯಾದರು ಬೇಕು. ಆದರೆ ಮಹಾರಾಷ್ಟ್ರದಲ್ಲಿ ರೈತರೊಬ್ಬರು ಭಾರಿ ಗಾತ್ರದ ಮೂಲಂಗಿ ಬೆಳೆದಿದ್ದು, ಒಂದೊಂದು ಮೂಲಂಗಿಯೂ 5ಕ್ಕಿಂತ ಹೆಚ್ಚು ತೂಕ ತೂಗುತ್ತಿದೆ., ನೀರಿನ ಕೊರತೆಯಿಂದ ನಿತ್ಯ ಬರಗಾಲ ಎದುರಿಸುತ್ತಿದ್ದರೂ ಮಹಾರಾಷ್ಟ್ರದ ಬೀಡು ಜಿಲ್ಲೆಯ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಹಾಗೆಯೇ ಈಗ ಬೀಡ್‌  ಜಿಲ್ಲೆಯ ಕೊಲೆವಾಡಿ ಗ್ರಾಮದ ಜ್ಞಾನದೇವ್ ಶೇಷರಾವ್ ನೆಟ್ಕೆ ಅವರು ಆಧುನಿಕ ತಂತ್ರಜ್ಞಾನ ಬಳಸಿ 5 ಕೇಜಿಗೂ ಅಧಿಕ ತೂಕದ ದೈತ್ಯ ಮೂಲಂಗಿಯನ್ನು ಬೆಳೆಸಿ ಗಮನ ಸೆಳೆದಿದ್ದಾರೆ. ಅವರ ಈ ಸಾಧನೆ ಸ್ಥಳೀಯ ಕೃಷಿ ಸಮುದಾಯದಲ್ಲಿ ಉತ್ಸಾಹ ಹೆಚ್ಚಿಸಿದ್ದು, ಈ ವಿಶೇಷವನ್ನು ನೋಡಲು ರೈತರು ಇವರ ಕೃಷಿ ಭೂಮಿಗೆ ಆಗಾಗ ಭೇಟಿ ನೀಡುತ್ತಿದ್ದಾರೆ. 

ಅಂತರ ಬೆಳೆಯೊಂದಿಗೆ ನವೀನ ಪ್ರಯೋಗ

ಸಾಂಪ್ರದಾಯಿಕ ಕೃಷಿಕರಾಗಿದ್ದ ಜ್ಞಾನದೇವ್ ನೆಟ್ಕೆ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಶೇಂಗಾದೊಂದಿಗೆ (ಕಡ್ಲೆಬೀಜ) ಮೂಲಂಗಿ ನಾಟಿ ಮಾಡಿ ಪ್ರಯೋಗ ಮಾಡಿದರು. ಎಲ್ಲರಿಗೂ ಆಶ್ಚರ್ಯವಾಗುವಂತೆ, ಅರ್ಧ ಗುಂಟೆ ಪ್ರದೇಶದಲ್ಲಿ ಮೂಲಂಗಿ ಭಾರಿ ಇಳುವರಿ ನೀಡಿತು. ಇಲ್ಲಿ ಬೆಳೆದ ಒಂದೊಂದು ಮೂಲಂಗಿ ಐದು ಕಿಲೋಗ್ರಾಂಗಳಷ್ಟು ತೂಕವಿತ್ತು.  ಜ್ಞಾನದೇವ್ ಅವರ ವಿನೂತನ ಕೃಷಿ ವಿಧಾನಗಳು ಸ್ಥಳೀಯ ಕೃಷಿಕ ಸಮುದಾಯದಲ್ಲಿ ಕುತೂಹಲ ಮೂಡಿಸಿದೆ.

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ

ಒಂದಲ್ಲ, ಎರಡಲ್ಲ ಹದಿನೈದು ದೊಡ್ಡ ಗಾತ್ರದ ಮೂಲಂಗಿ

ಮೂಲಂಗಿಗಳು (Radishes) ಸಾಮಾನ್ಯವಾಗಿ ಕಾಲು ಕೇಜಿಯಿಂದ ಹಿಡಿದು ಗರಿಷ್ಠ ಒಂದು ಕೇಜಿಯವರೆಗೆ ತೂಗುತ್ತವೆ. ಆದರೆ  ಜ್ಞಾನದೇವ್ (Gyandev Netke) ಅವರ ಹೊಲದಲ್ಲಿ ಬೆಳೆದ ಮೂಲಂಗಿ ತನ್ನ ತೂಕದಿಂದಲೇ ಬೆಳೆಗಾರನಿಗೆ ಅಚ್ಚರಿ ಮೂಡಿಸಿದೆ. ಒಟ್ಟು ಮೂಲಂಗಿಗಳಲ್ಲಿ 15 ಮೂಲಂಗಿಗಳು 5 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿದ್ದು, ಸಾಮಾನ್ಯ ತೂಕದ ವ್ಯಾಪ್ತಿಯನ್ನು ಮೀರಿದೆ. ಈ ವಿಚಾರ ಅಲ್ಲಿ ಸಂಚಲನ ಮೂಡಿಸಿದ್ದು,  ಸುತ್ತಮುತ್ತಲ ಅನೇಕ ರೈತರು ಕೃಷಿ ಸಂಶೋಧಕರು ಜ್ಞಾನದೇವ್ ಅವರ ಕೃಷಿ ಭೂಮಿಗೆ ಆಗಮಿಸಿ ಅವರ ಕೃಷಿ ತಂತ್ರಗಳನ್ನು ಗಮನಿಸುತ್ತಿದ್ದಾರೆ. 

ಭಾರಿ ಮೂಲಂಗಿ ಬೆಳೆ ಹಿಂದಿನ ಕಾರಣ

ಜ್ಞಾನದೇವ್ ಅವರ ಹೊಲದಲ್ಲಿ ಬೆಳೆದ ಈ ಭಾರೀ ಗಾತ್ರದ ಮೂಲಂಗಿಗೆ ಕಾರಣವಾದ ಅಂಶಗಳ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಹಸುವಿನ ಸಗಣಿ, 10-26-26 (ಬೆಳೆಗಳಿಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅನ್ನು ಪೂರೈಸಲು ಬಳಸುವ ಸಂಕೀರ್ಣ ಗೊಬ್ಬರ) ಮತ್ತು ಸೂಪರ್ ಫಾಸ್ಫೇಟ್ ಸೇರಿದಂತೆ ಸಾವಯವ ಗೊಬ್ಬರಗಳ ಬಳಕೆ ಕಾರಣವೆಂದು ಹೇಳಿದ್ದಾರೆ. ಈ ಗೊಬ್ಬರಗಳ ಬಳಕೆ  ಮೂಲಂಗಿಗಳ ಆಕರ್ಷಕ ಗಾತ್ರಕ್ಕೆ ಕೊಡುಗೆ ನೀಡಿರಬಹುದು ಎಂದು ಅವರು ಹೇಳುತ್ತಾರೆ. 

Latest Videos
Follow Us:
Download App:
  • android
  • ios