ಬೆಳಗಿನ ಸಮಯದಲ್ಲಿ ವಿದ್ಯುತ್‌ ಬಳಸಿದರೆ ಸಾಮಾನ್ಯ ಸುಂಕಕ್ಕಿಂತ 10-20% ಕಡಿಮೆ ಇರುತ್ತದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ತಿಳಿಸಿದೆ. 

ನವದೆಹಲಿ (ಜೂ.23): ಪ್ರಸ್ತುತ ಇರುವ ವಿದ್ಯುತ್‌ ವ್ಯವಸ್ಥೆಗೆ ಎರಡು ಮಹತ್ವದ ಬದಲಾವಣೆ ಮಾಡಲು ಕೇಂದ್ರವು ಶುಕ್ರವಾರ ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ಗೆ ತಿದ್ದುಪಡಿಯನ್ನು ಅಂಗೀಕರಿಸಿದೆ. ಈ ಬದಲಾವಣೆಗಳು ದಿನದ ಸಮಯದ (ToD) ದರ ವ್ಯವಸ್ಥೆಯ ಅನುಷ್ಠಾನ ಮತ್ತು ಸ್ಮಾರ್ಟ್ ಮೀಟರಿಂಗ್ ನಿಬಂಧನೆಗಳಿಗೆ ಸಂಬಂಧಪಟ್ಟದ್ದಾಗಿದೆ. ಟೈಮ್‌ ಆಫ್‌ ಡೇ (ಟಿಓಡಿ) ಟ್ಯಾರಿಫ್‌ ವ್ಯವಸ್ಥೆ ಎಂದು ಹೇಳಲಾಗಿದ್ದು, ದಿನದ ಎಲ್ಲಾ ಸಮಯದಲ್ಲೂ ವಿದ್ಯುತ್‌ಗೆ ಒಂದೇ ದರವನ್ನು ವಿಧಿಸುವುದಕ್ಕಿಂತ, ನೀವು ವಿದ್ಯುತ್‌ಗೆ ಪಾವತಿಸುವ ಬೆಲೆ ದಿನದ ಸಮಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸೌರ ಗಂಟೆಗಳು ಅಂದರೆ, ದಿನದ ಬೆಳಗಿನ ಅವಧಿಯಲ್ಲಿ (ರಾಜ್ಯ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರ ಹೇಳುವ 8 ಗಂಟೆಗಳ ಅವಧಿ) ವಿದ್ಯುತ್‌ ದರಗಳು ಎಂದಿನ ದರಕ್ಕಿಂತ ಶೇ. 10 ರಿಂದ 20ರಷ್ಟು ಕಡಿಮೆ ಇರುತ್ತದೆ. ಆದರೆ, ಹೆಚ್ಚಿನ ಬಳಕೆಯ ಸಮಯದಲ್ಲಿ (ಪೀಕ್‌ ಅವರ್ಸ್‌ ಟೈಮಿಂಗ್‌)ನಲ್ಲಿ ವಿದ್ಯುತ್‌ ದರವು ಶೇ 10 ರಿಂದ 20ರಷ್ಟು ಏರಿಕೆಯಾಗಲಿದೆ. 

2024ರ ಏಪ್ರಿಲ್ 1 ರಿಂದ ಗರಿಷ್ಠ 10 ಕಿಲೋವ್ಯಾಟ್ ಅಥವಾ ಹೆಚ್ಚಿನ ಬೇಡಿಕೆಯೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಮತ್ತು 2025ರ ಏಪ್ರಿಲ್ 1 ರಿಂದ ಕೃಷಿ ಗ್ರಾಹಕರನ್ನು ಹೊರತುಪಡಿಸಿ ಇತರ ಎಲ್ಲ ಗ್ರಾಹಕರಿಗೆ ಟಿಓಡಿ ಸುಂಕಗಳು ಅನ್ವಯವಾಗುತ್ತವೆ ಎಂದು ವಿದ್ಯುತ್ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿದ ತಕ್ಷಣ ದಿನದ ಸುಂಕವನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ವಿದ್ಯುತ್‌ ಸಚಿವಾಲಯ ತಿಳಿಸಿದೆ.

ಟಿಓಡಿ ಟ್ಯಾರಿಫ್‌ ಇಂಧನ ವ್ಯವಸ್ಥೆಯಲ್ಲಿ ಬರುವ ಎಲ್ಲಾ ಗ್ರಾಹಕರಿಗೆ ಗೆಲುವು-ಗೆಲುವಿನ ಅವಕಾಶವನ್ನು ನೀಡುತ್ತದೆ ಎಂದು ಕೇಂದ್ರ ಇಂಧನ ಹಾಗೂ ಮರುಬಳಕೆ ಇಂಧನ ಸಚಿವ ಆರ್‌ಕೆ ಸಿಂಗ್‌ ಹೇಳಿದ್ದಾರೆ.
'ಟಿಓಡಿ ಟ್ಯಾರಿಫ್‌ ಅನ್ವಯ ಪೀಕ್‌ ಅವರ್ಸ್‌ ಅಂದರೆ ಹೆಚ್ಚಿನ ಇಂಧನ ಬಳಕೆಯಾಗುವ ಸಮಯದಲ್ಲಿ ವಿದ್ಯುತ್‌ ಬಳಕೆ ಮಾಡಿದರೆ ದರ ಹೆಚ್ಚಾಗಿರುತ್ತದೆ. ಇನ್ನು ಬೆಳಗಿನ ಸಮಯದಲ್ಲಿ ಹಾಗೂ ಸಾಮಾನ್ಯ ಗಂಟೆಗಳಲ್ಲಿ ವಿದ್ಯುತ್‌ ಬಳಕೆ ಮಾಡಿದರೆ ಸಾಮಾನ್ಯ ದರ ಬರುತ್ತದೆ. ಸುಂಕದ ಪ್ರಕಾರ ತಮ್ಮ ಲೋಡ್ ಅನ್ನು ನಿರ್ವಹಿಸಲು ಗ್ರಾಹಕರಿಗೆ ಬೆಲೆ ಸಂಕೇತಗಳನ್ನು ಕಳುಹಿಸುತ್ತವೆ. ToD ಸುಂಕದ ಕಾರ್ಯವಿಧಾನದ ಅರಿವು ಮತ್ತು ಪರಿಣಾಮಕಾರಿ ಬಳಕೆಯೊಂದಿಗೆ, ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಬಹುದು. ಸೌರ ವಿದ್ಯುತ್ ಅಗ್ಗವಾಗಿರುವುದರಿಂದ, ಸೌರ ಸಮಯದಲ್ಲಿ ಸುಂಕವು ಕಡಿಮೆ ಇರುತ್ತದೆ, ಆದ್ದರಿಂದ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ, ”ಎಂದು ಸಚಿವರು ಹೇಳಿದರು.

ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬೊಮ್ಮಾಯಿ

"ಸೌರವಲ್ಲದ ಸಮಯದಲ್ಲಿ ಉಷ್ಣ ಮತ್ತು ಜಲವಿದ್ಯುತ್ ಮತ್ತು ಅನಿಲ ಆಧಾರಿತ ಸಾಮರ್ಥ್ಯವನ್ನು ಬಳಸಲಾಗುತ್ತದೆ - ಅವುಗಳ ವೆಚ್ಚಗಳು ಸೌರಶಕ್ತಿಗಿಂತ ಹೆಚ್ಚಾಗಿರುತ್ತದೆ - ಇದು ದಿನದ ಸುಂಕದ ಸಮಯದಲ್ಲಿ ಪ್ರತಿಫಲಿಸುತ್ತದೆ. ಈಗ ಗ್ರಾಹಕರು ತಮ್ಮ ಶಕ್ತಿಯನ್ನು ಕಡಿಮೆ ಮಾಡಲು ತಮ್ಮ ಬಳಕೆಯನ್ನು ಯೋಜಿಸಬಹುದು. ವಿದ್ಯುತ್ ವೆಚ್ಚಗಳು ಕಡಿಮೆಯಾದಾಗ ಸೌರ ಸಮಯದಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಪ್ಲ್ಯಾನ್‌ ಮಾಡಬೇಕು' ಎಂದು ಹೇಳಿದ್ದಾರೆ.

ವಿದ್ಯುತ್‌ ದರ ಏರಿಕೆ ವಿರುದ್ಧ ಧರಣಿ: ಅರ್ಧ ರಾಜ್ಯದಲ್ಲಿ ವಾಣಿಜ್ಯೋದ್ಯಮ ಬಂದ್‌