ಒಟಿಟಿಯಲ್ಲಿ ಯಾವ ಸಿರೀಸ್ ಚೆನ್ನಾಗಿದೆ..! ಮೆಟ್ರೋ ಪ್ರಯಾಣದ ವೇಳೆ ಮಕ್ಕಳ ಜೊತೆ ಪ್ರಧಾನಿ ಮಾತು
ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಇಂದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಈ ವೇಳೆ ಪ್ರಧಾನಿ ಮೆಟ್ರೋ ಬೋಗಿಗಳಲ್ಲಿ ತುಂಬಿದ್ದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ತೆರಳುವ ವೇಳೆ ಇಂದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಈ ವೇಳೆ ಪ್ರಧಾನಿ ಮೆಟ್ರೋ ಬೋಗಿಗಳಲ್ಲಿ ತುಂಬಿದ್ದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದರು. ನಂತರ ದೆಹಲಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಧಾನಿ ಅಲ್ಲಿ ಭಾಷಣ ಮಾಡುತ್ತಾ, ಹಲವು ವಿಚಾರಗಳನ್ನು ಹಂಚಿಕೊಂಡರು.
ಇಲ್ಲಿನ ವಿದ್ಯಾರ್ಥಿಗಳಂತೆ ನಾನು ಇಂದು ಮೆಟ್ರೋದಲ್ಲಿ ಪ್ರಯಾಣಿಸಿದೆ. ವಿದ್ಯಾರ್ಥಿಗಳಲ್ಲಿ ಮಾತನಾಡಲು ಸಾಕಷ್ಟು ವಿಚಾರಗಳಿವೆ. ವಿಜ್ಞಾನದ ವಿಷಯಗಳ ಚರ್ಚೆಯಿಂದ ಹಿಡಿದು ಒಟಿಟಿಯಲ್ಲಿ ಬರುವ ಹೊಸ ಸರಣಿಗಳವರೆಗೆ ಅವರು ಯಾವುದೇ ವಿಷಯಗಳನ್ನು ಬಿಡುವುದಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ಮೋದಿ ಹೇಳಿದರು. ಅವರು ಸೂರ್ಯನ ಕೆಳಗೆ ಇರುವ ಪ್ರತಿಯೊಂದು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಯಾವ ಸಿನಿಮಾ ನೋಡಿದ್ರಿ, ಒಟಿಟಿಯಲ್ಲಿ ಯಾವ ಸಿರೀಸ್ ಚೆನ್ನಾಗಿದೆ. ನೀವು ಆ ರೀಲ್ಸ್ ನೋಡಿದ್ದೀರೋ ಇಲ್ಲವೋ ಹೀಗೆ ಅವರ ಬಳಿ ಚರ್ಚಿಸಲು ಸಾಗರದಷ್ಟು ವಿಚಾರಗಳಿವೆ ಎಂದು ಪ್ರಧಾನಿ ಹೇಳಿದರು.
ಇದರ ಜೊತೆಗೆ ಪ್ರಧಾನಿ ಟ್ವಿಟ್ಟರ್‌ನಲ್ಲಿ ಮೆಟ್ರೋ ಪ್ರಯಾಣದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಸಹ ಪ್ರಯಾಣಿಕರಾಗಿ ಯುವ ಜನತೆ ಇರುವುದು ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಹಲವು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದು, ಮೋದಿ ಮೆಟ್ರೋ ಪ್ರಯಾಣದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದು ದೇಶ ತೊರೆಯುತ್ತಿದ್ದರು ಇಂದು ಇಲ್ಲೇ ಸ್ಟಾರ್ಟ್ಅಪ್ ಸ್ಥಾಪಿಸ್ತಿದ್ದಾರೆ: ಐಐಟಿ ಕಾನ್ಪುರ ನಿರ್ದೇಶಕ
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಇಂದು ಮೂರು ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಜೊತೆಗೆ ಕಾಫಿ ಟೇಬಲ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಈಗ ನಿರ್ಮಾಣವಾಗುವ ಕಟ್ಟಡಗಳಲ್ಲಿ ತಂತ್ರಜ್ಞಾನದ ಅಧ್ಯಾಪಕರು, ಕಂಪ್ಯೂಟರ್ ಸೆಂಟರ್ (Computer) ಮತ್ತು ಶೈಕ್ಷಣಿಕ ವಿಭಾಗ ಇರಲಿದೆ. ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ 7 ಮಹಡಿಯ ಕಟ್ಟಡ ಇದಾಗಿರಲಿದೆ. ಈ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಭಾಗಿಯಾಗಿದ್ದರು. ದೆಹಲಿ ವಿವಿ ದಕ್ಷಿಣ ಕ್ಯಾಂಪಸ್ ನಿರ್ದೇಶಕ ಪ್ರಕಾಶ್ ಸಿಂಗ್ ಮಾತನಾಡಿ, ವಿಶ್ವವಿದ್ಯಾನಿಲಯವು ಕಂಪ್ಯೂಟರ್ ಕೇಂದ್ರವನ್ನು ಹೊಂದಿದ್ದು, ಅದು ಕೇವಲ ಎರಡು ಅಂತಸ್ತಿನದ್ದಾಗಿದೆ ಎಂದು ಹೇಳಿದರು.
ದೆಹಲಿ ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
ಒಟ್ಟಿನಲ್ಲಿ ಏನಾದರೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ದೆಹಲಿ ಮೆಟ್ರೋ ಇಂದು ಪ್ರಧಾನಿ ಪ್ರಯಾಣದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ಮೆಟ್ರೋದಲ್ಲಿ ಪ್ರಧಾನಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋ ವೀಡಿಯೋಗಳು ವೈರಲ್ ಆಗಿವೆ.