Asianet Suvarna News Asianet Suvarna News

ಕೋರ್ಟ್ ಆವರಣದಲ್ಲೇ ಪರಸ್ಪರ ಗುಂಡು ಹಾರಿಸಿದ ವಕೀಲರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.  ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ವಕೀಲರೇ ಪರಸ್ಪರ ಗುಂಡಿನ ದಾಳಿ ನಡೆಸಿದ್ದು, ಘಟನೆಯ ದೃಶ್ಯಗಳು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

New delhi Lawyers group shot at each other inside the Tis Hazari court premises incident was caught on CCTV akb
Author
First Published Jul 5, 2023, 3:23 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.  ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ವಕೀಲರೇ ಪರಸ್ಪರ ಗುಂಡಿನ ದಾಳಿ ನಡೆಸಿದ್ದು, ಘಟನೆಯ ದೃಶ್ಯಗಳು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನ್ಯಾಯ ನೀಡಬೇಕಾದ ವಕೀಲರೇ ಹೀಗೆ ಪರಸ್ಪರ ಕಿತ್ತಾಡಿ ಗುಂಡಿನ ದಾಳಿ ನಡೆಸಿದ್ದು ನಾಚಿಕೆಗೇಡಿಗೆ ಕಾರಣವಾಗಿದೆ. 

ಎರಡು ವಕೀಲರ ಗುಂಪಿನ ಮಧ್ಯೆ ಈ ಗುಂಡಿನ ದಾಳಿ ನಡೆದಿದೆ. ವಾಗ್ವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಗಾಳಿಯಲ್ಲಿ ಗುಂಡು ಹಾರಿಸಿವೆ  ದೆಹಲಿ ಉತ್ತರ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಮಧ್ಯಾಹ್ನ 1. 35ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆ ನಡೆದ ತೀಸ್ ಹಜಾರಿ ಕೋರ್ಟ್(Tis Hazari court) ಸುಬ್ಜಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. 

ಕೋರ್ಟ್ ಆವರಣದಲ್ಲೇ ಬಡಿದಾಡಿಕೊಂಡರು ಪೊಲೀಸರು-ವಕೀಲರು!

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ವಕೀಲರ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಗಾಳಿಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಮತ್ತೆ ಕೆಲವರು ಕಲ್ಲು ಬಿಸಾಕುತ್ತಿರುವ ದೃಶ್ಯವೂ ವೀಡಿಯೋದಲ್ಲಿ ಸೆರೆ ಆಗಿದೆ. ಈ ಘಟನೆಯನ್ನು ದೆಹಲಿ ಬಾರ್ ಕೌನ್ಸಿಲ್‌ನ ಮುಖ್ಯಸ್ಥರಾದ ಕೆಕೆ ಮನನ್ ತೀವ್ರವಾಗಿ ಖಂಡಿಸಿದ್ದಾರೆ.  ಅಲ್ಲದೇ ಈ ಬಗ್ಗೆ ವಿಸ್ತಾರವಾದ ತನಿಖೆ ಮಾಡುವುದಾಗಿ ಅವರು ಹೇಳಿದ್ದಾರೆ. 

ಈ ಘಟನೆಯಲ್ಲಿ ಬಳಸಿದ  ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆಲಾಗಿದೆಯೋ ಎಂದು ವಿಚಾರಣೆ ಮಾಡಲಾಗುತ್ತದೆ. ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆಯಲಾಗಿದ್ದರೂ ಕೂಡ  ಯಾವುದೇ ವಕೀಲರಾಗಲಿ ಇತರರಾಗಲಿ ಅದನ್ನು ಕೋರ್ಟ್‌ನಲ್ಲಾಗಲ್ಲಿ ಸುತ್ತಲಿನ ಪ್ರದೇಶದಲ್ಲಾಗಲಿ ಬಳಸುವಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.  

ವಕೀಲರ ಮುಷ್ಕರಕ್ಕೆ ಸುಪ್ರೀಂ ನಿರ್ಬಂಧ: ವಕೀಲರು ಕರ್ತವ್ಯದಿಂದ ದೂರ ಉಳಿವಂತಿಲ್ಲ: ಸುಪ್ರೀಂಕೋರ್ಟ್‌ 

 

 

Follow Us:
Download App:
  • android
  • ios