ಬೆಂಕಿಗೆ ಆಹುತಿಯಾದ ದೆಹಲಿ-ದರ್ಭಾಂಗಾ ಸೂಪರ್‌ಫಾಸ್ಟ್ ರೈಲು, ಸರೈ ನಿಲ್ದಾಣದಲ್ಲಿ ದುರಂತ!
ಒಡಿಶಾ ರೈಲು ದುರಂತದ ಬಳಿಕ ಕೆಲ ರೈಲು ದುರ್ಘಟನೆಗಳು ಸಂಭವಿಸಿದೆ. ಇದೀಗ ದೆಹಲಿ-ದರ್ಭಾಂಗಾ ಸೂಪರ್‌ಫಾಸ್ಟ್ ರೈಲಿನ ಬೋಗಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಲಖನೌ(ನ.15) ದೆಹಲಿ-ದರ್ಭಾಂಗಾ ಸೂಪರ್‌ಫಾಸ್ಟ್ ರೈಲು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ದೆಹಲಿಯಿಂದ ಹೊರಟು ಉತ್ತರ ಪ್ರದೇಶದ ಸರೈ ಭೋಪಟ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ದರ್ಭಾಂಗಾನತ್ತ ಹೊರಟ ರೈಲಿನಲ್ಲಿ ಸಣ್ಣ ಹೊಗೆ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಟೇಶನ್ ಮಾಸ್ಟರ್ ತಕ್ಷಣವೇ ಲೋಕೋಪೈಲೆಟ್‌ಗೆ ಮಾಹಿತಿ ನೀಡಿ ರೈಲು ನಿಲ್ಲಿಸಲಾಗಿದೆ. ಪ್ರಯಾಣಿಕರನ್ನು ತಕ್ಷಣವೇ ಇಳಿಸಲಾಗಿದೆ.ಈ ವೇಳೆ ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡು ಬೋಗಿ ಹೊತ್ತಿ ಉರಿದಿದೆ.
ಎಸ್1 ಕೋಚ್ ಬೋಗಿಯಲ್ಲಿ ಸಣ್ಣ ಹೊಗೆ ಹೊರಬರುತ್ತಿರುವುದನ್ನು ಸ್ಟೇಶನ್ ಮಾಸ್ಟರ್ ಗಮನಿಸಿದ್ದಾರೆ. ಸ್ಟೇಶನ್ ಮಾಸ್ಟರ್ ಸಮಯ ಪ್ರಜ್ಞೆಯಿಂದ ಮಹಾ ದುರಂತವೊಂದು ತಪ್ಪಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಲಾಗಿದೆ. ಇತ್ತ ಸಣ್ಣದಾಗಿ ಕಾಣಿಸಿಕೊಂಡ ಹೊಗೆ ಒಂದೇ ಸಮನೆ ಬೆಂಕಿ ಆವರಿಸಿಕೊಂಡು ಹೊತ್ತಿ ಉರಿದಿದೆ.
ಸಲಾಂ ಆರತಿ, ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಮರು ಸ್ಥಾಪಿಸಲು ಎಸ್ ಡಿಪಿಐ ಆಗ್ರಹ
ಬೆಂಕಿ ಕಾಣಿಸಿಕೊಂಡ ಬೋಗಿಯನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಪಟಾಲ್‌ಕೋಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂರು ವಾರಗಳ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ಸಂಭವಿಸಿತ್ತು. ಇನ್ನು ಜುಲೈ ತಿಂಗಳಲ್ಲಿ ರಾಣಿ ಕಮಲಾಪತಿ- ಹಜ್ರತ್ ನಿಜಾಮುದ್ದೀನ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್‌ನಲ್ಲಿ ಬ್ಯಾಟರಿ ಸ್ಫೋಟಗೊಂಡಿತ್ತು. ಸ್ಫೋಟದಿಂದ ರೈಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದು ವಂದೇ ಭಾರತ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಮೊದಲ ಘಟನೆಯಾಗಿದೆ.
ಜೂನ್ ತಿಂಗಳಲ್ಲಿ ಒಡಿಶಾದ ಪುರಿಗೆ ಹೊರಟಿದ್ದ ದುಗ್‌ರ್-ಪುರಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಛತ್ತೀಸ್‌ಗಡದ ದುಗ್‌ರ್‍ನಿಂದ ಪುರಿಗೆ ಬರುತ್ತಿದ್ದ ರೈಲು ಒಡಿಶಾದ ನೌಪಾದಾ ಜಿಲ್ಲೆಯ ಖರಿಯಾರ್ ರೋಡ್ ನಿಲ್ದಾಣದಲ್ಲಿ ನಿಂತಿತ್ತು. ಆಗ ಅದರ ಬಿ3 ಬೋಗಿಯ ಚಕ್ರದ ಬ್ರೇಕ್ ಪ್ಯಾಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದರು.
ರೈಲು ಖಾಸಗಿಕರಿಸುವ ನಡೆ ದೇಶ ವಿರೋಧಿ ಕೆಲಸ : ಸಿಐಟಿಯು