Asianet Suvarna News Asianet Suvarna News

Subhash Chandra Bose ನೇತಾಜಿ ಆಜಾದ್ ಹಿಂದ್ ಫೌಜ್‌ನಿಂದ ಭಾರತಕ್ಕೆ ಸ್ವಾತಂತ್ರ್ಯ, ಗಾಂಧಿಯಿಂದಲ್ಲ, ಬೋಸ್ ಸಂಬಂಧಿ!

  • ಗಾಂಧಿಯ ಅಹಿಂಸಾ ಚಳುವಳಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ
  • ನೇತಾಜಿ ಹಾಗೂ ಆಜಾದ್ ಹಿಂದ್ ಫೌಜ್‌ನಿಂದ ಭಾರತ ಸ್ವತಂತ್ರ
  • ನೆಹರೂಗೆ ಬೋಸ್ ನಡುವೆ ಶೀತಲ ಸಮರ, ಇತಿಹಾಸ ಪುಟದಿಂದ ಬೋಸ್ ಔಟ್
  • ನೆಹರೂ ತಿರುಚಿದ ಇತಿಹಾಸ, ಬೋಸ್ ಸಂಬಂಧಿ ಅಸಮಾಧಾನ
Netaji Subhas Chandra Bose and Azad Hind Fauj brought India independence not Gandhi says Bose nephew ckm
Author
Bengaluru, First Published Jan 23, 2022, 11:00 PM IST

ಕೋಲ್ಕತಾ(ಜ.23):  ಭಾರತ 1947ರಲ್ಲಿ ಸ್ವಾತಂತ್ರ್ಯ(indian independence) ಪಡೆದಿದ್ದು ನೇತಾಜಿ ಸುಭಾಷ್ ಚಂದ್ರ ಬೋಸ್(Subhas Chandra Bose) ಹಾಗೂ ಅವರ ಅಜಾದ್ ಹಿಂದ್ ಫೌಜ್ ಸೇನೆಯಿಂದ ಹೊರತು ಮೋಹನ್ ದಾಸ್ ಕರಮ್ ಚಂದ್ರ ಗಾಂಧಿಯಿಂದಲ್ಲ(mohan das karam chandra gandhi) ಎಂದು ಬೋಸ್ ಸೋದರಳಿಯ ಅರ್ಧೆಂದು ಬೋಸ್ ಹೇಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆಯಂದು ಭಾರತದ ತಿರುಚಿತ ಇತಿಹಾಸದ ಕತೆ ಬಿಚ್ಚಿಟ್ಟಿದ್ದಾರೆ. 

ಗಾಂಧಿ ನಡೆಸಿದ ಅಹಿಂಸಾ ಚಳುವಳಿಗಳಿಂದ ಭಾರತ ಸ್ವಾತಂತ್ರ್ಯ ಪಡೆದಿಲ್ಲ. ಗಾಂಧಿ ಚಳುವಳಿಗಳು ತೋರ್ಪಡಿಕೆಗೆ ಮಾತ್ರ ಸೀಮಿತವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ನಾಯಕನಾಗಿ ಗುರುತಿಸಿಕೊಳ್ಳಬೇಕು ಅನ್ನೋ ಹಂಬಲವಿತ್ತೇ ಹೊರತು ನೈಜ ಸ್ವಾತಂತ್ರ್ಯದ ಕಿಚ್ಚು ಇರಲಿಲ್ಲ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಅಜಾದ್ ಹಿಂದ್ ಫೌಜ್(Azad Hind Fauj) ಸೇನೆಗೆ ಬ್ರಿಟೀಷ್ ಬೆಚ್ಚಿತ್ತು. ಪರಿಣಾಮ ಸ್ವಾತಂತ್ರ್ಯ ದಕ್ಕಿತು ಎಂದು ಅರ್ಧೆಂದು ಬೋಸ್ ಹೇಳಿದ್ದಾರೆ.  ಇದೇ ವೇಳೆ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ(Jawaharlal Nehru ) ಮಾಡಿದ ರಾಜಕೀಯ ಕುತಂತ್ರದ ವಿರುದ್ಧವೂ ಅಸಮಾಧಾನ ತೋಡಿಕೊಂಡಿದ್ದಾರೆ. 

Netaji Subhas Chandra Bose Statue : ಹಾಲೋಗ್ರಾಮ್‌ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ!

ಭಾರತ ಇತಿಹಾಸ(History) ತಿರುಚಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಇತಿಹಾಸ ಪುಟದಿಂದ ದೂರ ಉಳಿದಿದ್ದಾರೆ. ಇದು  ಜವಾಹರ್ ಲಾಲ್ ನೆಹರೂ ಮಾಡಿದ ರಾಜಕೀಯ. ನೇತಾಜಿ ದೇಶದ ಕ್ರಾಂತಿಕಾರಿ ನಾಯಕನಾಗಿ, ಭಾರತದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸ್ವಾತಂತ್ರ್ಯ ಪಡೆದ ಕ್ರೆಡಿಟ್ ನೇತಾಜಿ ಪಾಲಾಗಲಿದೆ ಅನ್ನೋ ಆತಂಕ ನೆಹರೂ ಹಾಗೂ ಗಾಂಧಿಗೂ ಇತ್ತು. ಹೀಗಾಗಿ ನೇತಾಜಿ ಹಾಗೂ ನೆಹರೂ ನಡುವ ಶೀತಲ ಸಮರ ನಡೆಯುತ್ತಲೇ ಇತ್ತು. ಪರಿಣಾಮ ಭಾರತದ ಇತಿಹಾಸ ಪುಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಗ್ರಾಮ ಕಾಣದಾಗಿದೆ ಎಂದಿದ್ದಾರೆ.

 

ಭಾರತಕ್ಕೆ ಸ್ವಾತಂತ್ರ್ಯ ನೀಡಲು ನೇತಾಜಿ ಸುಭಾಷ್ ಚಂದ್ರಬೋಸ್ ಹಾಗೂ ಅವರ ಆಜಾದ್ ಹಿಂದ್ ಫೌಜ್ ಕಾರಣ ಎಂದು ಅಂದಿನ ಇಂಗ್ಲೆಂಡ್ ಪ್ರಧಾನಿ ಕ್ಲೆಮೆಂಟ್ ರಿಚರ್ಡ್ ಅಟ್ಲಿ ಹೇಳಿದ್ದಾರೆ. ಆದರೆ ಇದ್ಯಾವುದು ಭಾರತದ ಇತಿಹಾಸದಲ್ಲಿಲ್ಲ. ತಮಗೆ ಬೇಕಾದ ನಾಯಕರು ಮಾತ್ರ ಭಾರತದ ಇತಿಹಾಸದಲ್ಲಿ ಚಿತ್ರಿಸಲಾಗಿದೆ. ರಕ್ತಚರಿತ್ರೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ಭಾರತದ ಇತಿಹಾಸದಲ್ಲಿ ಕಾಣುವುದಿಲ್ಲ ಎಂದು ಬೋಸ್ ಸಂಬಂಧಿ ಹೇಳಿದ್ದಾರೆ.ಇದೇ ವೇಳೆ ನೇತಾಜಿ ಸುಭಾಷ್ ಚಂದ್ರಬೋಸ್ 125ನೇ ಜನ್ಮದಿನಾಚರಣೆಗೆ ವಿಶೇಷ ಮಹತ್ವ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. 

Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

ಈ ವರ್ಷದಿಂದ ಗಣರಾಜ್ಯೋತ್ಸವ ಸಂಭ್ರಮ ಜನವರಿ 23 ರಿಂದ ಆರಂಭಗೊಳ್ಳಲಿದೆ. ಪ್ರತಿ ವರ್ಷ ಜನವರಿ 24ರಿಂದ ಆರಂಭಗೊಳ್ಳುತ್ತಿತ್ತು. ನೇತಾಜಿ 125ನೇ ಜನ್ಮದಿನ(Subhash Chandra Bose 125th birth anniversary) ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಗಣರಾಜ್ಯೋತ್ಸವ ಸಂಬ್ರಮದಲ್ಲಿ ಸೇರಿಸಲಾಗಿದೆ. ಕಳೆದ ವರ್ಷ ಪ್ರಧಾನಿ ಮೋದಿ ಜನವರಿ 23ನೇ ದಿನವನ್ನು ಪರಾಕ್ರಮ ದಿವಸ್ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. 

ಜನವರಿ 23, 1897ರಲ್ಲಿ ಹುಟ್ಟಿದ ನೇತಾಜಿ ಸುಭಾಷ್ ಚಂದ್ರಬೋಸ್, ಆಜಾದ್ ಹಿಂದ್ ಫೌಜ್ ಸೇನೆ ಕಟ್ಟಿ ಭಾರತದ ಸ್ವಾತಂತ್ರ್ಯಕ್ಕೆ ನಿರಂತರ ಹೋರಾಟ ನಡೆಸಿದರು. ಆದರೆ ಬೋಸ್ ವಿಚಾರದಲ್ಲಿ ನೆಹರೂ ಹಾಗೂ ಕಾಂಗ್ರೆಸ್ ರಾಜಕೀಯವಾಡಿದೆ ಅನ್ನೋದು ಇಂದು ನಿನ್ನೆಯ ಕೂಗಲ್ಲ. ಬೋಸ್ ಸಾವಿನ ಹಿಂದೆಯೂ ರಾಜಕೀಯ ಅಡಗಿದೆ ಅನ್ನೋ ಆರೋಪಗಳು ಹಲವು ಬಾರಿ ಮುನ್ನಲೆಗೆ ಬಂದಿದೆ.

Follow Us:
Download App:
  • android
  • ios