Netaji Subhas Chandra Bose Statue : ಹಾಲೋಗ್ರಾಮ್‌ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ!

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ
ಭಾನುವಾರ ಹಾಲೋಗ್ರಾಮ್‌ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ ಪ್ರದಾನ 
 

PM Narendra Modi unveil hologram statue of Netaji Subhas Chandra Bose at India Gate san

ನವದೆಹಲಿ (ಜ. 23): ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhas Chandra Bose) ಅವರ 125ನೇ ಜನ್ಮದಿನದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ  (Prime Minister Narendra Modi)ಅವರು ನವದೆಹಲಿಯ ಪ್ರತಿಷ್ಠಿತ ಇಂಡಿಯಾ ಗೇಟ್ (India Gate) ವಲಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್‌ (hologram) ಪ್ರತಿಮೆಯನ್ನು ಅನಾವರಣ ಮಾಡಿದರು. ಇಂಡಿಯಾ ಗೇಟ್ ನ ಹಿಂದೆ ಇರುವ ಮೇಲಾವರಣದ ಮಂಟಪದಲ್ಲಿ ಗ್ರಾನೈಟ್ ಪ್ರತಿಮೆ ನಿರ್ಮಾಣವಾಗುವವರೆಗೂ ಅವರ ಹಾಲೋಗ್ರಾಮ್‌ ಪ್ರತಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2019, 2020, 2021 ಮತ್ತು 2022 ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು(Subhas Chandra Bose Aapda Prabandhan Puraskar) ಪ್ರದಾನ ಮಾಡಿದರು.

ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದರು. "ಐತಿಹಾಸಿಕ ಸ್ಥಳದಲ್ಲಿ ಐತಿಹಾಸಿಕ ಸಂದರ್ಭದಲ್ಲಿ" ಪ್ರತಿಮೆ ಅನಾವರಣಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಲ್ಲಿಯವರೆಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿವಸ ಎಂದು ಆಚರಣೆ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಪರಾಕ್ರಮ ದಿವಸದೊಂದಿಗೆ ದೇಶದ ಗಣರಾಜ್ಯೋತ್ಸವ ಸಂಭ್ರಮಗಳು ಇದೇ ದಿನದಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಇದಕ್ಕೂ ಮುನ್ನ ಜನವರಿ 24 ರಿಂದ 29ರವರೆಗೆ ಗಣರಾಜ್ಯೋತ್ಸವ ಸಂಭ್ರಮ ಎಂದು ಅಚರಣೆ ಮಾಡಲಾಗುತ್ತಿತ್ತು.

ಸ್ವತಂತ್ರ ಭಾರತದ ಕನಸಿನಲ್ಲಿ ಎಂದಿಗೂ ನಂಬಿಕೆ ಕಳೆದುಕೊಳ್ಳಬೇಡಿ. ಭಾರತವನ್ನು ಅಲುಗಾಡಿಸುವ ಶಕ್ತಿ ಜಗತ್ತಿನ ಯಾವ ದೇಶಕ್ಕೂ ಇಲ್ಲ ಎಂದು ನೇತಾಜಿ ಹೇಳುತ್ತಿದ್ದರು. ಇಂದು ನಾವು ಅವರ ಸ್ವತಂತ್ರ ಭಾರತದ ಕನಸುಗಳನ್ನು ನನಸು ಮಾಡುವ ಗುರಿ ಹೊಂದಿದ್ದೇವೆ. ಸ್ವಾತಂತ್ರ್ಯದ 100ನೇ ವರ್ಷ 2047ರ ಮೊದಲು ನವ ಭಾರತದ ಗುರಿ ನಮ್ಮದಾಗಿದೆ ಎಂದು ಪ್ರಧಾನಿ ಹೇಳಿದರು.
 


ಹೇಗಿದೆ ಹಾಲೋಗ್ರಾಮ್‌ ಪ್ರತಿಮೆ: ಹಾಲೋಗ್ರಾಮ್‌  ಪ್ರತಿಮೆಯು 30,000 ಲ್ಯೂಮೆನ್ಸ್ 4K ಪ್ರೊಜೆಕ್ಟರ್‌ನಿಂದ ಚಾಲಿತವಾಗಿದೆ. ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ನೋಡುವ ವೀಕ್ಷಕರಿಗೆ ಇವುಗಳು ಕಾಣದ ರೀತಿಯಲ್ಲಿ ಹಾಲೋಗ್ರಾಫಿಕ್ ಪರದೆಯನ್ನು ನಿರ್ಮಿಸಲಾಗಿದೆ. ನೇತಾಜಿ ಅವರ 3ಡಿ ಚಿತ್ರವನ್ನು ಇದರ ಮೇಲೆ ಚಿತ್ರಿಸಲಾಗಿದ್ದು ಹಾಲೋಗ್ರಾಮ್ ನ ಪರಿಣಾಮವನ್ನು ಪ್ರಕ್ಷೇಪಿಸಲಾಗಿದೆ. ಹಾಲೋಗ್ರಾಮ್ ಪ್ರತಿಮೆಯೂ ಕೂಡ ನೈಜ ಪ್ರತಿಮೆ ಇರುವಷ್ಟೇ 28 ಅಡಿ ಎತ್ತರ ಮತ್ತು 6 ಅಡಿ ಅಗಲವನ್ನು ಹೊಂದಿದೆ. 1968ರವರೆಗೂ ಈ ಮಂಟಪದ ಮೇಲಾವರಣದಲ್ಲಿ ಐದನೇ ಕಿಂಗ್ ಜಾರ್ಜ್ ಪ್ರತಿಮೆ ಇದ್ದವು. ಇದನ್ನು ತೆಗೆದುಹಾಕಿದ ಬಳಿಕ ಈ ಸ್ಥಳವು ಖಾಲಿ ಉಳಿದಿತ್ತು.

Netaji statue ಸುಭಾಷ್‌ ಚಂದ್ರಬೋಸ್‌ ಹಾಲೋಗ್ರಾಂ ಪುತ್ಥಳಿ ಸಂಜೆ 6ಕ್ಕೆ ಅನಾವರಣ, ಐತಿಹಾಸಿಕ, ಪಾರಂಪರಿಕ ಸ್ಥಳದಲ್ಲಿ ಪ್ರತಿಮೆ!
ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ: ಸಮಾರಂಭದಲ್ಲಿ ಪ್ರಧಾನಿ ಮೋದಿ, 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರವು ವಾರ್ಷಿಕ ಸುಭಾಸ್ ಚಂದ್ರ ಬೋಸ್ ಆಪ್ತ್ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯ ಸಂಸ್ಥೆಗೆ ದೊರೆತದಲ್ಲಿ 51 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ವ್ಯಕ್ತಿಗೆ ದೊರೆತಲ್ಲಿ 5 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

Subhash Chandra Bose @ 125: ದಾಸ್ಯವನ್ನು ಧಿಕ್ಕರಿಸಿ ನಿಂತ ನೇತಾಜಿ ನಮಗೆ ಈಗಲೂ ಸ್ಪೂರ್ತಿ​​​​​​​
ಆಪ್ತ ಪ್ರಬಂಧನ್ ಪ್ರಶಸ್ತಿ ಪುರಸ್ಕೃತರು:
2019: ಗಾಜಿಯಾಬಾದ್ ಎನ್ ಡಿಆರ್ ಎಫ್ 8ನೇ ಬೆಟಾಲಿಯನ್
2020: ವಿಪತ್ತು ನಿಯಂತ್ರಣ ಮತ್ತು ನಿರ್ವಹಣಾ ಕೇಂದ್ರ (ಡಿಎಂಎಂಸಿ), ಉತ್ತಾರಖಂಡ
2020: ಕುಮಾರ್ ಮುನ್ನನ್ ಸಿಂಗ್ (ವೈಯಕ್ತಿಕ)
2021: ರಾಜೇಂದ್ರ ಕುಮಾರ್ ಭಂಡಾರಿ (ವೈಯಕ್ತಿಕ)
2021: ಸುಸ್ಥಿರ ಪರಿಸರ ಮತ್ತು ಪರಿಸರ ಅಭಿವೃದ್ಧಿ ಸೊಸೈಟಿ (ಸೀಡ್ಸ್) 
2022: ಗುಜರಾತ್ ವಿಪತ್ತು ನಿರ್ವಹಣಾ ಸಂಸ್ಥೆ (ಜಿಐಡಿಎಂ)
2022: ವಿನೋದ್ ಶರ್ಮ, ಸಿಕ್ಕಿಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ (ವೈಯಕ್ತಿಕ)

Latest Videos
Follow Us:
Download App:
  • android
  • ios