ಮಹಿಳೆಯರು ಯಾವ ಉಡುಪು ಧರಿಸಬೇಕು, ಹೇಗೆ ಧರಿಸಬೇಕು ಎಂಬುದನ್ನು ಧರ್ಮೀಯರು, ಲಂಪಟರು ನಿರ್ಧರಿಸುವುದಲ್ಲ. ಈ ಹಕ್ಕು ಮಹಿಳೆಗಿದೆ. ಇದನ್ನು ಕಸಿಯುವ ಪ್ರಯತ್ನ ಅಂತ್ಯವಾಗಲಿ ಎಂದು ಸದ್ಗುರು ಜಗ್ಗಿವಾಸುದೇವ್ ಹೇಳಿದ್ದಾರೆ. ಹಿಜಾಬ್ ವಿರೋಧಿಸಿ ನಡೆಯತ್ತಿರುವ ಪ್ರತಿಭಟನೆ ಕುರಿತು ಸದ್ಗುರು ಸಂದೇಶ ಇಲ್ಲಿದೆ.
ಬೆಂಗಳೂರು(ಸೆ.21): ಸರಿಯಾಗಿಲ್ಲ ಹಿಜಾಬ್ ಧರಿಸಿಲ್ಲ ಅನ್ನೋ ಕಾರಣದಿಂದ ಹತ್ಯೆಯಾದ ಇರಾನ್ ಯುವತಿ ಪರ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಕಾರರ ಮೇಲೆ ಸರ್ಕಾರ ಗುಂಡಿನ ದಾಳಿ ನಡೆಸಿ ಐವರ ಸಾವಿಗೂ ಕಾರಣವಾಗಿದೆ. ಪ್ರತಿಭಟನೆ ಜೋರಾಗುತ್ತಿದೆ. ವಿಶ್ವದ ಹಲವು ನಾಯಕರು ಪ್ರತಿಭಟನಾನಿರತರ ಪರ ಮಾತನಾಡುತ್ತಿದ್ದಾರೆ. ಇದೀಗ ಸದ್ಗುರು ಜಗ್ಗಿ ವಾಸುದೇವ್ ಖಡಕ್ ಸಂದೇಶ ಸಾರಿದ್ದಾರೆ. ಮಹಿಳೆಯರು ಹೇಗೆ ಉಡುಪು ಧರಿಸಬೇಕು ಅನ್ನೋದನ್ನು ಧರ್ಮ, ಧರ್ಮದ ಮುಖಂಡರು, ಲಂಪಟರು ನಿರ್ಧರಿಸಬಾರದು. ಅವರ ಉಡುಗೆ ತೊಡುಗೆಯನ್ನು ಮಹಿಳೆ ನಿರ್ಧರಿಸಲಿ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಮಹಿಳೆ ಏನೂ ಧರಿಸಿದ್ದಾಳೆ, ಅದು ಧರ್ಮಕ್ಕೆ ವಿರೋಧ ಅನ್ನೋ ಹೆಸರಿನಲ್ಲಿ ಆಕೆಯನ್ನು ಶಿಕ್ಷಿಸುವ ಪ್ರತೀಕಾರದ ಸಂಸ್ಕೃತಿ ಕೊನೆಯಾಗಲಿ ಎಂದು ಸದ್ಗುರು ಜಗ್ಗಿವಾಸುದೇವ್ ಹೇಳಿದ್ದಾರೆ.
ಧರ್ಮ(Religion) ಹಾಗೂ ಇತರ ಹೆಸರಿನಲ್ಲಿ ಮಹಿಳೆಯರ ಉಡುಪು(Women Dress) ಅಥವಾ ಇನ್ಯಾವುದೇ ಹಕ್ಕನ್ನು(Rights) ಕಸಿಯುವುದು ಸರಿಯಲ್ಲ ಎಂದು ಸದ್ಗುರು ಹೇಳಿದ್ದಾರೆ. ಧರ್ಮೀಯರು, ಲಂಪಟರ ಈ ಹೆಸರಿನಲ್ಲಿ ಮಹಿಳೆಯರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ ಎಂದು ಸದ್ಗುರು( sadhguru )ಸೂಕ್ಷ್ಮವಾಗಿ ಹೇಳಿದ್ದಾರೆ. ಇರಾನ್ ಹಿಜಾಬ್ ವಿರೋಧಿಸಿ(Iran Hijab Protest) ನಡೆಯುತ್ತಿರುವ ಹೋರಾಟಕ್ಕೆ ಹಲವು ದೇಶಗಳ ನಾಯಕರು ಬೆಂಬಲ ಸೂಚಿಸಿದ್ದಾರೆ.
ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರತಿಭಟನೆ, ಭಾರತದಲ್ಲಿ ಬೇಕು, ದ್ವಂದ್ವ ನಿಲುವಿನ ಸಮರ ಯಾಕೆ?
ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, ಐವರ ಸಾವು
ಇರಾನ್‌ನಲ್ಲಿ ಹಿಜಾಬ್ ಧರಿಸದಿದ್ದಕ್ಕೆ ಪೊಲೀಸರಿಂದ ಬಂಧಿತಳಾಗಿ ಮೃತಪಟ್ಟಯುವತಿ ಮಹ್ಸಾ ಅಮಿನಿ ಪರವಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಸೋಮವಾರ ಭದ್ರತಾ ಪಡೆಗಳು ಗುಂಡು ಚಲಾಯಿಸಿದ್ದು, ಒಟ್ಟು 5 ಜನರು ಮೃತಪಟ್ಟಿದ್ದಾರೆ. ಹಿಜಾಬ್ ಸರಿಯಾಗಿ ಧರಿಸದಿದ್ದಕ್ಕೆ 22 ವರ್ಷದ ಯುವತಿ ಮಹ್ಸಾ ಅಮಿನಿಯನ್ನು ಇರಾನಿನ ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸರ ವಶದಲ್ಲೇ ಮಹ್ಸಾ ಕೋಮಾ ಸ್ಥಿತಿಗೆ ತಲುಪಿ ಬಳಿಕ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ರಾಷ್ಟಾ್ರದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಮಹಿಳೆಯರು ಕೂದಲು ಕತ್ತರಿಸಿ, ಹಿಜಾಬ್ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದರು.
ಇದರ ಬೆನ್ನಲ್ಲೇ ಮಹ್ಸಾಳ ಹುಟ್ಟೂರಾದ ಸಾಕೆಜ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ದಿವಾಂದ್‌ರ್ರೇಹ್‌ನಲ್ಲಿ ಇಬ್ಬರು ಹಾಗೂ ದೆಹಗೋಲನ್‌ನಲ್ಲಿ ಒಬ್ಬ ವ್ಯಕ್ತಿ ಕೂಡಾ ಪ್ರತಿಭಟನೆ ವೇಳೆ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಖುರ್ದಿಷ್ ರೈಟ್ಸ್ ಸಂಸ್ಥೆ ತಿಳಿಸಿದೆ.
ಇರಾನ್‌ನಲ್ಲಿ ತೀವ್ರಗೊಂಡ Anti Hijab Protest; ಕೂದಲು ಕತ್ತರಿಸಿಕೊಂಡು ಹಿಜಾಬ್ ಸುಟ್ಟ ಮಹಿಳೆಯರು
ಏನಿದು ಘಟನೆ:
ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ಮಹ್ಸಾ ಅಮಿನಿ ಎಂಬ ಮಹಿಳೆ ಮೃತಪಟ್ಟಘಟನೆ ಇರಾನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಾವಿರಾರು ಮಹಿಳೆಯರು ಬೀದಿಗಿಳಿದು ಹಿಜಾಬ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಕಟ್ಟರ್ ಇಸ್ಲಾಂ ಸಂಪ್ರದಾಯ ಪಾಲನೆ ಮಾಡುವ ಇರಾನ್ ದೇಶದಲ್ಲೂ ಮಹಿಳೆಯರು ಹಿಜಾಬ್ ಸುಟ್ಟು, ತಲೆ ಕೂದಲನ್ನು ಕತ್ತರಿಸಿಕೊಂಡು ಪೊಲೀಸರ ವಿರುದ್ಧ ಆರಂಭಿಸಿರುವ ಈ ಬೃಹತ್ ಅಭಿಯಾನ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿದ್ದು, ಅಚ್ಚರಿಗೂ ಕಾರಣವಾಗಿದೆ.
