ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಮತ್ತು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕಾಗಿದೆ. 

ಇರಾನ್‌ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದೆ. ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಮಹ್ಸಾ ಅಮಿನಿಯನ್ನು ಇರಾನ್‌ನ ನೈತಿಕತೆ ಪೋಲೀಸ್ (Moral Police) ನವರು ಸರಿಯಾಗಿ ಹಿಜಾಬ್ ಧರಿಸದಿದ್ದಕ್ಕೆ ಬಂಧಿಸಿದರು. ಅಂದರೆ ಆ ಮಹಿಳೆ ತಮ್ಮ ಕೂದಲನ್ನು (Hair) ಸಂಪೂರ್ಣವಾಗಿ ಮುಚ್ಚಿಕೊಂಡಿರಲಿಲ್ಲ ಎಂಬ ಕಾರಣ ನೀಡಿ ಬಂಧಿಸಲಾಗಿತ್ತು.ಕಳೆದ ವಾರದ ಆರಂಭದಲ್ಲಿ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಆಕೆಯನ್ನು ಬಂಧಿಸಿದ ನಂತರ ಕೋಮಾಕ್ಕೆ ಜಾರಿದ್ದ ಮಹಿಳೆ ಶುಕ್ರವಾರ ನಿಧನರಾಗಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಮಹಿಳಾ ಹಕ್ಕುಗಳ ಪ್ರತಿಭಟನೆ (Protest) ಹೆಚ್ಚಾಗಿದೆ. ಆಕೆಯನ್ನು ಥಳಿಸಲಾಯಿತು ಎಂಬ ಸಾಮಾಜಿಕ ಮಾಧ್ಯಮದ (Social Media) ಅನುಮಾನಗಳನ್ನು ಇರಾನ್‌ ಪೊಲೀಸರು ತಳ್ಳಿಹಾಕಿದ್ದು, ಬಂಧಿತ ಇತರ ಮಹಿಳೆಯರೊಂದಿಗೆ ಅವಳು ಇದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಆದರೂ ಪೊಲೀಸರ ಹೇಳಿಕೆಯಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ಹಲವಾರು ಪ್ರತಿಭಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿವೆ. ಕೆಲವು ವಿಡಿಯೋಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಇರಾನ್ ಪಡೆಗಳು ಅಶ್ರುವಾಯು ಬಳಸುತ್ತಿರುವುದನ್ನು ಕಾಣಬಹುದು. 7 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಧಾರ್ಮಿಕ ಶಿರಸ್ತ್ರಾಣವನ್ನು ಧರಿಸಬೇಕೆಂಬ ಇರಾನಿನ ತೀವ್ರವಾದಿ ನಿಯಮಕ್ಕೆ ವಿರೋಧದ ಸಾಂಕೇತಿಕ ಕ್ರಿಯೆಯಲ್ಲಿ, ಕೆಲವು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ಗಳನ್ನು ಸುಟ್ಟುಹಾಕಿದ ಘಟನೆಗಳು ನಡೆದಿದೆ.

ಇದನ್ನು ಓದಿ: Hijab ಧರಿಸದ್ದಕ್ಕೆ ಯುವತಿ ಬಂಧನ: ಕೋಮಾದಲ್ಲಿದ್ದ ಮಹಿಳೆ ಸಾವು

Scroll to load tweet…

ಈ ಸಂಬಂಧ ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಾಸಿಹ್ ಅಲಿನೆಜಾದ್ ಅವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, "ಹಿಜಾಬ್ ಪೊಲೀಸು ಮಹ್ಸಾ ಅಮಿನಿ ಅವರನ್ನು ಕೊಂದದ್ದನ್ನು ವಿರೋಧಿಸಿ ಇರಾನಿಯನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಮತ್ತು ಹಿಜಾಬ್ ಅನ್ನು ಸುಡುವ ಮೂಲಕ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ. ನಾವು 7 ನೇ ವಯಸ್ಸಿನಿಂದ ನಮ್ಮ ಕೂದಲು ರಕ್ಷಣೆಯನ್ನು ಮಾಡದಿದ್ದರೆ ನಮಗೆ ಶಾಲೆಗೆ ಹೋಗಲು ಅಥವಾ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸತ್ತಿದ್ದೇವೆ" ಎಂದೂ ಬರೆದುಕೊಂಡಿದ್ದಾರೆ.

Scroll to load tweet…

ಅಲ್ಲದೆ, ಮಾಸಿಹ್ ಅಲಿನೆಜಾದ್ ಮತ್ತೊಂದು ಟ್ವೀಟ್‌ನಲ್ಲಿ, ಇದು ನಿಜವಾದ ಇರಾನ್, ಇರಾನ್‌ನ ಸಕ್ವೆಜ್‌ನಲ್ಲಿ ಭದ್ರತಾ ಪಡೆಗಳು ಮಹ್ಸಾ ಅಮಿನಿಯ ಸಾವಿನ ನಂತರ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಮೊದಲ ಹಿಜಾಬ್ ಪೊಲೀಸರು 22 ವರ್ಷದ ಹುಡುಗಿಯನ್ನು ಕೊಂದರು ಮತ್ತು ಈಗ ಬಂದೂಕುಗಳನ್ನು ಬಳಸುತ್ತಿದ್ದಾರೆ ಮತ್ತು ದುಃಖಿತ ಜನರ ವಿರುದ್ಧ ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ ಎಂದು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Onam: ಹಿಜಾಬ್ ಧರಿಸಿ ಶಾಲೆಯಲ್ಲಿ ಡ್ಯಾನ್ಸ್‌ ಮಾಡಿದ ಕೇರಳ ಬಾಲಕಿಯರು: ವಿಡಿಯೋ ನೋಡಿ..

Scroll to load tweet…

ತಮ್ಮ ಹಿಜಾಬ್‌ಗಳನ್ನು ತೆಗೆದ ಮಹಿಳೆಯರಿಗೆ ನೈತಿಕತೆಯ ಪೊಲೀಸ್ ಘಟಕಗಳಿಂದ ಕಠಿಣ ಶಿಕ್ಷೆಯಾಗಿ ಕಂಡುಬರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಮತ್ತು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಲೇಬೇಕಾಗಿದೆ. ಈ ಕಾನೂನು ಉಲ್ಲಂಘಿಸಿದ ಅಪರಾಧಿಗಳು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಕಾರ್ಯಕರ್ತರು "ಅನೈತಿಕ ನಡವಳಿಕೆ" ಯ ವಿರುದ್ಧ ಕಠಿಣ ಆಡಳಿತಗಾರರ ದಮನದ ಹೊರತಾಗಿಯೂ ಹಿಜಾಬ್‌ ತೆಗೆದುಹಾಕಲು ಮಹಿಳೆಯರನ್ನು ಒತ್ತಾಯಿಸಿದ್ದಾರೆ.