ನವದೆಹಲಿ(ಜ.18) ನೆರೆ ರಾಷ್ಟ್ರಗಳ ನಾಯಕರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಲಸಿಕಾ ಅಭಿಯಾ ಮಹತ್ ಕಾರ್ಯವನ್ನು ಶ್ಲಾಘಿಸಿದ್ದಾರೆ.  ಕೊರೋನಾ ವೈರಸ್‌ನಿಂದ ಕಂಗೆಟ್ಟು ಕುಳಿತಿರುವ ವಿಶ್ವಕ್ಕೆ ಭಾರತ ದಾರೀದೀಪವಾಗಿದೆ ಎಂದು ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ನೆರೆ ರಾಷ್ಟ್ರಗಳ ನಾಯಕರು ಮುಕ್ತಕಂಠದಿಂದ ಭಾರತವನ್ನು ಹೊಗಳಿದ್ದಾರೆ.

'ವಿವಿಧ ದೇಶಕ್ಕೆ ಲಸಿಕೆ ಪೂರೈಕೆ ಭಾರತದ ಹೆಮ್ಮೆ'

ಯಶಸ್ವಿ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಹೃದಯ ತುಂಬಿದ ಶುಭಕಾಮನೆಗಳು ಎಂದು ಶ್ರೀಲಂಕಾ ರಾಷ್ಟ್ರಪತಿ ಗೋತಾಬಯ ರಾಜಪಕ್ಷೆ ಟ್ವೀಟ್ ಮಾಡಿದ್ದಾರೆ. ಭಾರತದ ತೆಗೆದುಕೊಂಡ ಮಹತ್ವದ ಲಸಿಕಾ ವಿತರಣೆ ನಿರ್ಧಾರಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಲಂಕ ಪ್ರಧಾನ ಮಂತ್ರಿ ಮಹೀಂದ್ರ ರಾಜಪಕ್ಷೆ ಹೇಳಿದ್ದಾರೆ.

ವಾಕ್ಸಿನೇಷನ್ ಮೇಲ್ವಿಚಾರಣೆ ಮಾಡಿದ ಮೋದಿ; ಮೊದಲ ದಿನ 1.91 ಲಕ್ಷ ಮಂದಿಗೆ ಲಸಿಕೆ!

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಭೂತಾನ್ ಪ್ರಧಾನ ಮಂತ್ರಿ ಡಾ. ಲೊಟೆ ಶೆರಿಂಗ್ ಸೇರಿದಂತೆ ನೆರೆ ರಾಷ್ಟ್ರಗಳ ಪ್ರಮುಖ ನಾಯಕರು ಮೋದಿಗೆ ಸಲಾಂ ಹೇಳಿದ್ದಾರೆ.