'ವಿವಿಧ ದೇಶಕ್ಕೆ ಲಸಿಕೆ ಪೂರೈಕೆ ಭಾರತದ ಹೆಮ್ಮೆ'

ಭಾರತದ ಜನಸಂಖ್ಯೆ 138 ಕೋಟಿಯಿದ್ದು, ಕೇಂದ್ರ ಸರ್ಕಾರ 160 ಕೋಟಿಯಷ್ಟು ಲಸಿಕೆ ಖರೀದಿ ಮಾಡಿದೆ| ಹೆಚ್ಚುವರಿ 30 ಕೋಟಿ ಲಸಿಕೆ ಖರೀದಿಸಿದೆ| ಬ್ರೆಜಿಲ್‌ಗೆ 20 ಲಕ್ಷ ಲಸಿಕೆ ರವಾನೆ| ನೇಪಾಳ, ಯುಕೆ, ಬಾಂಗ್ಲಾದೇಶಗಳು ಭಾರತದ ಲಸಿಕೆಗೆ ಬೇಡಿಕೆಯನ್ನಿಟ್ಟಿರುವುದು ಗಮನಿಸಿದರೆ ವಿಶ್ವದಲ್ಲಿಯೇ ಭಾರತದ ಗೌರವ ಹೆಚ್ಚಳ| 

MP Sanganna Karadi Talks Over Corona Vaccine grg

ಕೊಪ್ಪಳ(ಜ.17):  ಭಾರತೀಯ ವಿಜ್ಞಾನಿಗಳು ಸಂಶೋಧನೆ ಮಾಡಿದ ಲಸಿಕೆಯನ್ನು ದೇಶಾದ್ಯಂತ ವಿತರಣೆ ಮಾಡಲಾಗುತ್ತಿದೆ. ನೇಪಾಳ, ಯುಕೆ, ಬ್ರೆಜಿಲ್ದೇಶಗಳಿಗೂ ಪೂರೈಕೆ ಮಾಡುತ್ತಿರುವುದು ಭಾರತದ ಹೆಮ್ಮೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಲಸಿಕೆ ವಿತರಣಾ ಕಾರ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಕಾರ್ಯ ಶ್ಲಾಘನೀಯ ಎಂದರು. ಭಾರತದ ಜನಸಂಖ್ಯೆ 138 ಕೋಟಿಯಿದ್ದು, ಕೇಂದ್ರ ಸರ್ಕಾರ 160 ಕೋಟಿಯಷ್ಟು ಲಸಿಕೆ ಖರೀದಿ ಮಾಡಿದೆ. ಹೆಚ್ಚುವರಿ 30 ಕೋಟಿ ಲಸಿಕೆ ಖರೀದಿಸಿದೆ. ಬ್ರೆಜಿಲ್ಗೆ 20 ಲಕ್ಷ ಲಸಿಕೆ ರವಾನೆ ಮಾಡಲಾಗಿದೆ. ನೇಪಾಳ, ಯುಕೆ, ಬಾಂಗ್ಲಾದೇಶಗಳು ಭಾರತದ ಲಸಿಕೆಗೆ ಬೇಡಿಕೆಯನ್ನಿಟ್ಟಿರುವುದು ಗಮನಿಸಿದರೆ ವಿಶ್ವದಲ್ಲಿಯೇ ಭಾರತದ ಗೌರವ ಹೆಚ್ಚಳವಾಗುತ್ತಿದೆ.

ಬಿಜೆಪಿ ಸರ್ಕಾರ ರಚನೆಗೆ ಪಂಚಮಸಾಲಿ‌ ಮಠಾಧೀಶರ ಪಾತ್ರ ದೊಡ್ಡದು: ಜಯಮೃತ್ಯುಂಜಯ ಶ್ರೀ

ನೆರೆಯ ಚೀನಾ ದೇಶದ ಬಗ್ಗೆ ನಂಬಿಕೆ ಹೋಗಿದೆ. ಅದು ಮೋಸ ಮಾಡುತ್ತಿರುವುದು ಜಗತ್ತಿಗೆ ಗೊತ್ತಿದೆ. ಆದರೆ, ಭಾರತ ಮಾತ್ರ ಎಲ್ಲರ ಒಳತಿಗಾಗಿಯೇ ಇರುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ. ಹೀಗಾಗಿಯೇ ಜಗತ್ತಿನ ನಾನಾ ದೇಶಗಳು ಭಾರತದ ಲಸಿಕೆ ಖರೀದಿಗೆ ಮುಂದಾಗಿವೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11700 ಜನರು ಲಸಿಕೆ ಪಡೆಯಲಿದ್ದು, ಸರ್ಕಾರ 6500 ಡೋಸ್ಲಸಿಕೆ ಹಂಚಿಕೆ ಮಾಡಿದೆ. ಪ್ರತಿ ದಿನ 100 ಲಸಿಕೆ ಹಾಕುವ ಕಾರ್ಯ ನಡೆಯಲಿದೆ. 30 ಆರೋಗ್ಯ ತಂಡ ರಚನೆ ಮಾಡಿದ್ದು ಅವರು ಲಸಿಕೆ ಹಾಕಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಹಾಗೂ ಸಿಎಂ, ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ ಚಾಕಚಕ್ಕೆತೆಯಿಂದ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಈ ದಿಸೆಯಲ್ಲಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದರು.
 

Latest Videos
Follow Us:
Download App:
  • android
  • ios