Asianet Suvarna News Asianet Suvarna News

NEET Resultನಲ್ಲಿ ದೋಷ: ಮರು ಪರೀಕ್ಷೆಗೆ ಆಗ್ರಹ!

*ತಾಳೆಯಾಗದ ಕೀ-ಉತ್ತರ ಹಾಗೂ ಫಲಿತಾಂಶ
*ಕೆಲವು ವಿದ್ಯಾರ್ಥಿಗಳಿಗೆ ಎರಡೆರೆಡು Rank
*ಸೆಪ್ಟೆಂಬರ್ 12 ರಂದು  ನಡೆಸಲಾಗಿದ್ದ ನೀಟ್ ಪರೀಕ್ಷೆ

NEET Result 2021 Has Errors Claim Students and Demand Re-exam
Author
Bengaluru, First Published Nov 5, 2021, 7:57 AM IST

ನವದೆಹಲಿ (ನ.5): ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA) ನ.1ರಂದು ಬಿಡುಗಡೆ ಮಾಡಿದ ನೀಟ್‌ ಪರೀಕ್ಷೆಯ (NEET) ಫಲಿತಾಂಶದಲ್ಲಿ ಹಲವಾರು ದೋಷಗಳು ಕಂಡುಬಂದಿವೆ. ಹಾಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಮೆಡಿಕಲ್(Medical), ಡೆಂಟಲ್(Dental) ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ಸೋಮವಾರ ಪ್ರಕಟವಾಗಿತ್ತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತನ್ನ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಿತ್ತು, ಇದರಲ್ಲಿ ಮೂರು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ.

NEET Result: ಮೇಘನ್, ಜಶನ್ ಕರ್ನಾಟಕಕ್ಕೆ ಟಾಪರ್

ಎನ್‌ಟಿಎ ಬಿಡುಗಡೆ ಮಾಡಿದ್ದ ಕೀ- ಆನ್ಸರ್‌ (Key answer) ಮತ್ತು ತಮಗೆ ಸಿಕ್ಕಿದ ಫಲಿತಾಂಶವನ್ನು (Result) ಹೋಲಿಸಿದಾಗ ಅಂಕಗಳಲ್ಲಿ ಭಾರೀ ವ್ಯತ್ಯಾಸವಿದೆ. ಜೊತೆಗೆ ತಮಗೆ ಎರಡೆರಡು ರ‍್ಯಾಂಕ್‌ಗಳನ್ನು ನೀಡಲಾಗಿದೆ. ಹೀಗಾಗಿ ಒಟ್ಟಾರೆ ಫಲಿತಾಂಶ ಪ್ರಕ್ರಿಯೆಯಲ್ಲಿ ಭಾರೀ ದೋಷ ಕಂಡುಬರುತ್ತಿದೆ. ಜೊತೆಗೆ ಈ ಬಾರಿ ನೀಟ್‌ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದೆ. ಹಾಗಾಗಿ ಮರು ಪರೀಕ್ಷೆ ( NEET Re-Exam) ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲೂ ವಿದ್ಯಾರ್ಥಿಗಳು ಈ ಬಗ್ಗೆ  ಹೇಳಿಕೊಂಡಿದ್ದು #NEETscam and #NEETResult2021 ಹ್ಯಾಶ್‌ಟ್ಯಾಗ್ ಬಳಸುವ  ಮೂಲಕ ಟ್ವೀಟ್‌ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಎರಡೆರಡು ರ‍್ಯಾಂಕ್!

ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಂಕಪಟ್ಟಿಯಲ್ಲಿ ಎರಡು ರ‍್ಯಾಂಕ್‌ಗಳನ್ನು ಪಡೆದಿರುವ ಬಗ್ಗೆಯೂ ಕೆಲವು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಪ್ರತಿ ಅಂಕಪಟ್ಟಿಯಲ್ಲಿ, NTA ಪಡೆದಿರುವ ALL India ರ‍್ಯಾಂಕ್‌ ನಮೂದಿಸಿದೆ. ಪ್ರತಿ ವಿದ್ಯಾರ್ಥಿಗೆ NEET  Overall ರ‍್ಯಾಂಕ್‌ ಮತ್ತು Counselling Rank ನೀಡಿದೆ. ಆದರೆ ನನ್ನ ವಿಷಯದಲ್ಲಿ, ಕೌನ್ಸೆಲಿಂಗ್ ಪ್ರಕ್ರಿಯೆಗೆ ನನಗೆ ಎರಡು ವಿಭಿನ್ನ ರ‍್ಯಾಂಕ್‌ ನೀಡಲಾಗಿದೆ, ಇದು ನನಗೆ ಗೊಂದಲಮಯವಾಗಿದೆ.' ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

 

 

ಈ ಬಾರಿ ಕೌನ್ಸೆಲಿಂಗ್ ಪ್ರಕ್ರಿಯೆ ವೇಳೆ ಪರಿಗಣಿಸುವ ರ‍್ಯಾಂಕ್‌, NTAನೀಡಿರುವ ರ‍್ಯಾಂಕ್‌ ಬೇರೆ ಬೇರೆಯಾಗಿರುತ್ತವೆ ಎಂದು ಎನ್‌ಟಿಎ ತಿಳಿಸಿದೆ. ರ‍್ಯಾಂಕ್‌ ನೀಡುವ ಪ್ರಕ್ರಿಯೆಯಲ್ಲಿ ಎನ್‌ಟಿಎ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಿಲ್ಲ, ಆದರೆ  ಎಮ್‌ಸಿಸಿ (Medical Counselling Committee (MCC)) ಅಭ್ಯರ್ಥಿಗಳ ವಯಸ್ಸನ್ನು ಪರಿಗಣಿಸಿದೆ.  ಹಾಗಾಗಿ ಎನ್‌ಟಿಎ ಮತ್ತು ಎಮ್‌ಸಿಸಿ ಪ್ರತ್ಯೇಕ ರ‍್ಯಾಂಕ್‌ಗಳನ್ನು ಪರಿಗಣಿಸುತ್ತಿವೆ.‌ ಈ ವರ್ಷ, ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸ್ಕೋರ್ 138 ರಿಂದ 720 ರ ವ್ಯಾಪ್ತಿಯಲ್ಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ವೇಳಾಪಟ್ಟಿಯನ್ನು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಶೀಘ್ರದಲ್ಲೇ mcc.nic.in ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

NEET ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾರ್ಥಿನಿ ದೇಶಕ್ಕೆ ದ್ವಿತೀಯ

ಕೌನ್ಸೆಲಿಂಗ್ ಎರಡು ಹಂತಗಳಲ್ಲಿ ನಡೆಯಲಿದ್ದು ALL India Quota (AIQ) ಸೀಟುಗಳು ಮತ್ತು ರಾಜ್ಯ ಮಟ್ಟದ ಕೋಟಾಗಳನ್ನು ಪರಿಗಣಿಸಲಾಗುತ್ತಿದೆ . ಶೇಕಡಾ 15 ರಷ್ಟು ಸೀಟುಗಳನ್ನು AIQ ಅಡಿಯಲ್ಲಿ ಕಾಯ್ದಿರಿಸಿದ್ದರೆ, 85 ರಷ್ಟು ಸೀಟುಗಳನ್ನು ಆಯಾ ರಾಜ್ಯ ಕೌನ್ಸೆಲಿಂಗ್ ಇಲಾಖೆಗಳು ಭರ್ತಿ ಮಾಡಲಿವೆ. NEET 2021 ಗೆ ನೋಂದಾಯಿಸಿದ ಒಟ್ಟು 16.14 ಲಕ್ಷ ಅಭ್ಯರ್ಥಿಗಳ ಪೈಕಿ 15.44 ಲಕ್ಷ ವಿದ್ಯಾರ್ಥಿಗಳು ಸೆಪ್ಟೆಂಬರ್ 12 ರಂದು ಪರೀಕ್ಷೆಯನ್ನು ಬರೆದಿದ್ದರು. 

Follow Us:
Download App:
  • android
  • ios