ಸಿಬಿಐ ಯಾವುದೇ ರಾಜ್ಯಕ್ಕೆ ತೆರಳಿ ಅಲ್ಲಿನ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವ ಮುನ್ನ ಆ ರಾಜ್ಯದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಸಿಬಿಐ ತನಿಖೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ವಿಪಕ್ಷಗಳ ಆಡಳಿತವಿರುವ 9 ರಾಜ್ಯಗಳು ಸಾಮಾನ್ಯ ಅನುಮತಿ ಹಿಂಪಡೆದಿವೆ.
ನವದೆಹಲಿ(ಡಿಸೆಂಬರ್ 12, 2023): ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ, ಈ ನಡುವೆಯೇ, ರಾಜ್ಯಗಳ ಪೂರ್ವಾನುಮತಿ ಇಲ್ಲದೆಯೇ ಸಿಬಿಐಗೆ ತನಿಖೆ ನಡೆಸುವ ಅಧಿಕಾರ ನೀಡುವ ಕುರಿತು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.
ಕೆಲವೊಂದು ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಅನುಮತಿ ರದ್ದುಪಡಿಸಿರುವ ಕಾರಣ ಮಹತ್ವದ ಪ್ರಕರಣಗಳ ತನಿಖೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಪೂರ್ವಾನುಮತಿ ನಿಯಮ ತೆಗೆಯಬೇಕು. ಆದರೆ ಇದೇ ವೇಳೆ ತನಿಖಾ ಸಂಸ್ಥೆಗಳು ತಾರತಮ್ಯ ಮಾಡುತ್ತಿವೆ ಎಂಬ ಭಾವನೆ ರಾಜ್ಯಗಳನ್ನು ಕಾಡದಿರುವಂತೆ ನೋಡಿಕೊಳ್ಳಲು ಮತ್ತು ತನಿಖೆಯನ್ನು ತಾರತಮ್ಯ ರಹಿತವಾಗಿ ಮಾಡಲು ಕೆಲವೊಂದು ಸುರಕ್ಷತಾ ಕ್ರಮಗಳನ್ನೂ ಅಳವಡಿಸಬೇಕು ಎಂದು ಸಮಿತಿ ಹೇಳಿದೆ.
ಇದನ್ನು ಓದಿ: ಕೈ ಸಂಸದ ಸಾಹು ಬಳಿ 350 ಕೋಟಿ ಪತ್ತೆ: ಜನ ಹೇಗೆ ಕಪ್ಪುಹಣ ಸಂಗ್ರಹಿಸ್ತಾರೋ ಅರ್ಥ ಆಗಲ್ಲ ಎಂದಿದ್ದ ಹಳೆ ಟ್ವೀಟ್ ವೈರಲ್
ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯನ್ನು ಡೆಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯಡಿ ರಚಿಸಲಾಗಿದೆ. ಅದರನ್ವಯ ಸಿಬಿಐ ಯಾವುದೇ ರಾಜ್ಯಕ್ಕೆ ತೆರಳಿ ಅಲ್ಲಿನ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವ ಮುನ್ನ ಆ ರಾಜ್ಯದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಸಿಬಿಐ ತನಿಖೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ವಿಪಕ್ಷಗಳ ಆಡಳಿತವಿರುವ 9 ರಾಜ್ಯಗಳು ಸಾಮಾನ್ಯ ಅನುಮತಿ ಹಿಂಪಡೆದಿವೆ.
ರಾಜ್ಯಗಳ ಈ ಕ್ರಮದಿಂದ ಹಲವು ಮಹತ್ವದ ಪ್ರಕರಣಗಳ ತನಿಖೆಗೆ ಅಡ್ಡಿಯಾಗುತ್ತಿದೆ. ಸಿಬಿಐ ಹಲವು ಇತಿಮಿತಿಗಳ ನಡುವೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರಾಜ್ಯಗಳಲ್ಲಿ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರದ ಪ್ರಮಾಣ ಏರಿಕೆಗೆ ಕಾರಣವಾಗುತ್ತಿದೆ.
ಇದನ್ನು ಓದಿ: ಬಿಜೆಪಿಗರ ಮೇಲೆ ಐಟಿ ದಾಳಿ ಆದರೂ ದುಡ್ಡು ಸಿಗುತ್ತೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಹೀಗಾಗಿ ರಾಜ್ಯಗಳ ಪೂರ್ವಾನುಮತಿ ಇಲ್ಲದೆಯೇ ತನಿಖೆ ನಡೆಸುವ ಹೆಚ್ಚಿನ ಅಧಿಕಾರವನ್ನು ಸಿಬಿಐಗೆ ನೀಡುವ ತುರ್ತು ಅನಿವಾರ್ಯತೆ ಇದೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಬ್ಬಂದಿ, ಕಾನೂನು ಮತ್ತು ನ್ಯಾಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಅದು ಸಂಸದನ ಮನೆ ಅಲ್ಲ..ಕೋಟಿ ನೋಟಿನ ಕೋಟೆ..! ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್ ಮುಖಂಡ..?
