ನವದೆಹಲಿ, (ಮೇ.17):  ಕೊರೋನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಲಾಕ್‌ಡೌನ್ ನಿರೀಕ್ಷೆಯಂತೆ ವಿಸ್ತರಣೆ ಮಾಡಲಾಗಿದೆ.

"

ಕೇಂದ್ರ ಸರ್ಕಾರ 4ನೇ ಹಂತದ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ದೇಶಾದ್ಯಂತ ಮೇ 31 ರವರೆಗೂ ಲಾಕ್ಡೌನ್ ಜಾರಿಯಲ್ಲಿರುತ್ತದೆ.ಇಂದು (ಭಾನುವಾರ) ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಆದ್ರೆ, ಕೊರೋನಾ ಮತ್ತಷ್ಟು ಹೆಚ್ಚುಗುತ್ತಿರುವುದರಿಂದ 4ನೇ ಹಂತದ ಲಾಕ್‌ಡೌನ್ ಜಾರಿ ಮಾಡಿದೆ.

ಲಾಕ್‌ಡೌನ್‌ನಿಂದ ನೇಣಿಗೆ ಕೊರಳೊಡ್ಡಿದ ನಟ, ರಾಜ್ಯಕ್ಕೆ ಮತ್ತೆ ಕೊರೋನಾ ಕಂಟಕ; ಮೇ.17ರ ಟಾಪ್ 10 ಸುದ್ದಿ!

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಲಾಕ್ಡೌನ್ ವಿಸ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಗಳಿಂದ ವಿಸ್ತೃತವಾದ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ತಿಳಿಸಲಾಗಿದೆ.

ಕೊರೋನಾ ಸೋಂಕು ಹರಡದಂತೆ ತಡೆಯಲು ಲಾಕ್ಡೌನ್ ವಿಸ್ತರಣೆ ಮಾಡಬೇಕು. ಇದರೊಂದಿಗೆ ಆರ್ಥಿಕ ಚಟುವಟಿಕೆಗಳು ದೇಶಾದ್ಯಂತ ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್.ಡಿ.ಎಂ.ಎ.) ತಿಳಿಸಿದೆ.

ಉನ್ನತ ವಿಪತ್ತು ನಿರ್ವಹಣಾ ಸಂಸ್ಥೆಯಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗೃಹ ಸಚಿವಾಲಯಕ್ಕೆ ನೀಡಿದ ಶಿಫಾರಸುಗಳ ಅನ್ವಯ ಈ ಆದೇಶ ಪ್ರಕಟವಾಗಿದೆ. ದೇಶದಲ್ಲಿ ಕೊವಿಡ್​-19 ತಡೆಗಟ್ಟಲು ಇನ್ನೂ ಹೆಚ್ಚಿನ ನಿಯಂತ್ರಣಾ ಕ್ರಮಗಳು ಅಗತ್ಯ ಇರುವ ಕಾರಣ ಲಾಕ್​ಡೌನ್​ ಅವಧಿ ವಿಸ್ತರಣೆ ಮಾಡಲಾಗಿದ್ದು, ಎಲ್ಲ ರಾಜ್ಯಸರ್ಕಾರಗಳಿಗೂ ಸೂಚನೆ ನೀಡಲಾಗಿದೆ.