ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಶೋಭಾ ಎನ್. ಸೇರಿದಂತೆ ಕರ್ನಾಟಕದ 7 ಅಧಿಕಾರಿಗಳಿಗೆ 2026ರ 'ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ' ಒಲಿದಿದೆ. ಅತ್ಯುತ್ತಮ ತನಿಖೆ ಮತ್ತು ವೃತ್ತಿಪರತೆಗಾಗಿ 6 ಪೊಲೀಸ್ ಹಾಗೂ ಒಬ್ಬ ಎಫ್‌ಎಸ್‌ಎಲ್ ಅಧಿಕಾರಿಗೆ ಈ ಪ್ರತಿಷ್ಠಿತ ಗೌರವ ಲಭಿಸಿದೆ.

ಕೇಂದ್ರದ ಪ್ರತಿಷ್ಠಿತ ಪದಕ ಪ್ರಕಟವಾಗಿದ್ದು, ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಶೋಭಾ ಸೇರಿ ಕರ್ನಾಟಕದ ಒಟ್ಟು 7 ಮಂದಿ ಅಧಿಕಾರಿಗಳು 2026ರ ಸಾಲಿನ 'ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ'ಕ್ಕೆ ಭಾಜನರಾಗಿದ್ದಾರೆ.

7 ಜನರಿಗೆ ಪದಕ!

2026 ರ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ ಪ್ರಕಟ ಅದರಲ್ಲಿ ಕರ್ನಾಟಕದ 6 ಪೊಲೀಸ್ ಹಾಗೂ ಒಬ್ಬ ಎಫ್ ಎಸ್ ಎಲ್ ಅಧಿಕಾರಿ ಸೇರಿ 7 ಮಂದಿ ಕೇಂದ್ರ ಗೃಹ ಮಂತ್ರಿ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ. ನಾಲ್ವರು ಪೊಲೀಸ್ ಇನ್ಸ್ಪೆಕ್ಟರ್, ಒರ್ವ ಎಎಸ್ಐ, ಒಬ್ಬ ಸಿಎಚ್ ಸಿ ಸೇರಿ 6 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪದಕ ಇನ್ಸ್ಪೆಕ್ಟರ್ ಗಳಾದ ಶೋಭಾ ಎನ್, ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್, ಎಂ ಶ್ರೀನಿವಾಸ್ ರಾವ್, ಮಂಜುನಾಥ್, ಹಾಗೂ ಎ ಎಸ್ ಐ ರತ್ಮಮ್ಮ, ಸಿ ಎಚ್ ಸಿ ಬಾಲಕೃಷ್ಣ ವೈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೇಂದ್ರದ ಪ್ರತಿಷ್ಠಿತ ಪದಕ ಪ್ರಕಟ!

ಈ ಗೌರವಕ್ಕೆ ಪಾತ್ರರಾದವರಲ್ಲಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಹಾಗೂ ಒಬ್ಬರು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಸೇರಿದ್ದಾರೆ. ಪದಕ ಪಡೆದ ಆರು ಪೊಲೀಸ್ ಸಿಬ್ಬಂದಿಗಳಲ್ಲಿ ನಾಲ್ವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಒಬ್ಬರು ಎಎಸ್ಐ ಮತ್ತು ಒಬ್ಬರು ಸಿಎಚ್‌ಸಿ ಇದ್ದಾರೆ.

ಇತರ ಪೊಲೀಸ್ ಸಿಬ್ಬಂದಿ!

ಎಎಸ್‌ಐ ರತ್ಮಮ್ಮ ಹಾಗೂ ಸಿಎಚ್‌ಸಿ ಬಾಲಕೃಷ್ಣ ವೈ. ಅವರು ಕೂಡ ಈ ಪ್ರತಿಷ್ಠಿತ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ತನಿಖೆಗೆ ತಾಂತ್ರಿಕ ಬಲ ತುಂಬಿದ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (RFSL) ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಅವರಿಗೂ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ ಲಭಿಸಿದೆ.

ಅತ್ಯುತ್ತಮ ತನಿಖೆಗೆ ಮನ್ನಣೆ!

ಈ ಪದಕವನ್ನು ಅಪರಾಧ ತನಿಖೆಯಲ್ಲಿ ಅತ್ಯುನ್ನತ ಗುಣಮಟ್ಟ, ವೃತ್ತಿಪರತೆ ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ದೇಶದ ಅತ್ಯುತ್ತಮ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ವರ್ಷ ನೀಡಲಾಗುತ್ತದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಮತ್ತು ವೀಡಿಯೊ ಸೋರಿಕೆ ಪ್ರಕರಣ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಜಟಿಲ ಪ್ರಕರಣದ ತನಿಖೆಯನ್ನು ಹಗಲಿರುಳು ನಡೆಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಇನ್‌ಸ್ಪೆಕ್ಟರ್ ಶೋಭಾ ಎನ್. ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿತ್ತು.

ರಾಜ್ಯ ಪೊಲೀಸ್ ಇಲಾಖೆಗೆ ಹೆಮ್ಮೆ!

ಅತ್ಯಂತ ಸವಾಲಿನ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಒಟ್ಟಿಗೆ ಈ ಗೌರವ ಸಿಕ್ಕಿರುವುದು ಕರ್ನಾಟಕ ಪೊಲೀಸ್ ಇಲಾಖೆಯ ಹೆಮ್ಮೆಯನ್ನು ಹೆಚ್ಚಿಸಿದೆ. ಡಿಜಿಟಲ್ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಮೈಸೂರು ಆರ್‌ಎಫ್‌ಎಸ್‌ಎಲ್ ಅಧಿಕಾರಿ ಡಾ. ಚಂದ್ರಶೇಖರ್ ಅವರ ಪಾತ್ರ ದೊಡ್ಡದಾಗಿದ್ದು, ತನಿಖೆಯಲ್ಲಿ ವಿಧಿವಿಜ್ಞಾನದ ಮಹತ್ವವನ್ನು ಈ ಪದಕ ಸಾಬೀತುಪಡಿಸಿದೆ.