ಶರದ್‌ ಪವಾರ್‌ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಗಡಿಯಾರದ ಚಿಹ್ನೆಯ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ ಸಮಯ ಬದಲಾಗಲಿದೆ ಎಂದು ಇಟ್ಟ ನಿರೀಕ್ಷೆ ಸುಳ್ಳಾಗಿದೆ. ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಲ್ಕೇ ದಿನದಲ್ಲಿ ಅವರು ಯುಟರ್ನ್ ಹೊಡೆದಿದ್ದಾರೆ. 

ಮುಂಬೈ (ಮೇ.5): ಕೇವಲ ನಾಲ್ಕು ದಿನಗಳ ಹಿಂದೆ ರಾಷ್ಟ್ರೀಯವಾದ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶರದ್‌ ಪವಾರ್‌, ಯೂ ಟರ್ನ್ ಹೊಡೆದಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಶರದ್‌ ಪವಾರ್‌ ತಮ್ಮ ರಾಜೀನಾಮೆ ಪತ್ರವನ್ನು ವಾಪಾಸ್‌ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ನಾಯಕರ ಭಾವನೆಗಳಿಗೆ ಅವಮಾನ ಮಾಡುವ ಉದ್ದೇಶ ಹೊಂದಿಲ್ಲ. ನಾನು ಕೋರ್ ಕಮಿಟಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ನನ್ನ ನಿರ್ಧಾರವನ್ನು ಹಿಂಪಡೆಯುತ್ತೇನೆ ಎಂದು ಹೇಳಿದರು. ಅಚ್ಚರಿ ಎನ್ನುವಂತೆ ಅಜಿತ್ ಪವಾರ್ ಈ ಪತ್ರಿಕಾಗೋಷ್ಠಿಯಿಂದ ದೂರ ಉಳಿದಿದ್ದರು. ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆದಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್, ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದರು. ಇದಾದ ಬಳಿಕ ಸಮಿತಿಯ ಉಳಿದ ಸದಸ್ಯರೂ ಬೆಂಬಲಿಸಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಟೇಲ್ ಮಾಧ್ಯಮಗಳ ಮುಂದೆ ಬಂದು ನಿರ್ಧಾರದ ಬಗ್ಗೆ ತಿಳಿಸಿದರು. ಇದಾದ ನಂತರ ಎಲ್ಲಾ ನಾಯಕರು ತಮ್ಮ ನಿರ್ಧಾರವನ್ನು ತಿಳಿಸಲು ಪವಾರ್ ಅವರ ಮನೆಗೆ ತಲುಪಿದ್ದರು.

ಶರದ್‌ ಪವಾರ್‌ ಮನೆಗೆ ಹಿರಿಯ ನಾಯಕರು ಭೇಟಿಕೊಟ್ಟ 5.30 ಗಂಟೆಗಳ ಬಳಿಕ ಸಂಹೆ 5.30ಕ್ಕೆ ಸುದ್ದಿಗೋಷ್ಠಿ ಕರೆದ ಶರದ್‌ ಪವಾರ್‌, ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದರು. ಆದರೆ, ಈ ಸಮಯದಲ್ಲಿ ಅವರ ಸೋದರಳಿಯ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಉಪಸ್ಥಿತರಿರಲಿಲ್ಲ. ಈ ಕುರಿತು ಪವಾರ್ ಅವರನ್ನು ಪ್ರಶ್ನಿಸಿದಾಗ, ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ ಎಂದಷ್ಟೇ ಹೇಳಿದರು.

ಪಕ್ಷ ಪುನರ್‌ರಚನೆಗೆ ಸೂಚಿಸಿದ ಪವಾರ್‌: ಮಾಧ್ಯಮಗಳೊಂದಿಗಿನ ಸಂವಾದದಲ್ಲಿ, 'ಭವಿಷ್ಯದಲ್ಲಿ ಎನ್‌ಸಿಪಿಯ ಉತ್ತರಾಧಿಕಾರಿಯ ಬಗ್ಗೆ ಯೋಜನೆಯನ್ನು ಮಾಡಬೇಕಾಗಿದೆ. ಮುಂದೆ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ನಿರ್ಧರಿಸಬೇಕು. ಪಕ್ಷದಲ್ಲಿನ ಸಂಘಟನಾ ಬದಲಾವಣೆ ಬಗ್ಗೆಯೂ ಗಮನ ಹರಿಸಲಿದ್ದಾರೆ. ಈಗ ಹೊಸ ಹುರುಪಿನಿಂದ ಪಕ್ಷಕ್ಕಾಗಿ ದುಡಿಯುತ್ತೇನೆ' ಎಂದು ಪವಾರ್ ಹೇಳಿದರು.

ಪವಾರ್ ರಾಜೀನಾಮೆ ನೀಡಿದ ಬಳಿಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು 16 ಸದಸ್ಯರ ಕೋರ್ ಕಮಿಟಿಯನ್ನು ರಚಿಸಿದ್ದರು. ಶುಕ್ರವಾರ ಮುಂಬೈನಲ್ಲಿ ಸಮಿತಿ ಸಭೆ ನಡೆಸಿತ್ತು. ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಅವರು ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಪ್ರಸ್ತಾಪವನ್ನು ಮಂಡಿಸಿದರು ಮತ್ತು ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಸಮಿತಿಯ ಉಳಿದ ಸದಸ್ಯರು ಕೂಡ ನಿರ್ಣಯವನ್ನು ಬೆಂಬಲಿಸಿದರು ಮತ್ತು ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ನಿರಂತರ ಪ್ರತಿಭಟನೆಯ ನಂತರ, ಶರದ್ ಪವಾರ್ ಅವರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ 16 ಸದಸ್ಯರ ಸಮಿತಿಯ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಪಕ್ಷದ ಕೋರ್ ಕಮಿಟಿ ಸಭೆ ಮುಗಿದ ನಂತರ ಮುಂಬೈನ ಯಶವಂತ್ ರಾವ್ ಚವಾಣ್ ಸೆಂಟರ್ ನಿಂದ ಹೊರಬಂದ ಪ್ರಫುಲ್ ಪಟೇಲ್ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಇದಾದ ನಂತರ ಎಲ್ಲಾ ನಾಯಕರು ಪವಾರ್ ಅವರನ್ನು ಭೇಟಿಯಾಗಿ ತಮ್ಮ ನಿರ್ಧಾರವನ್ನು ತಿಳಿಸಿದರು. 

Breaking: ಮಹಾ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್‌: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

ಶರದ್ ಪವಾರ್ ಅವರು ನಮಗೆ ತಿಳಿಸದೆ ನಿರ್ಧಾರ ತೆಗೆದುಕೊಂಡರು. ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರ ಬೇಡಿಕೆಯ ಮೇರೆಗೆ ಸಮಿತಿಯು ಅವರ ರಾಜೀನಾಮೆಯನ್ನು ತಿರಸ್ಕರಿಸಿತು. ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಅವರಲ್ಲಿ ಮನವಿ ಮಾಡಿದ್ದೇವೆ. ದೇಶ ಮತ್ತು ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಅವರಲ್ಲಿ ಮನವಿ ಮಾಡಿದ್ದೇವೆ. ಎನ್‌ಸಿಪಿ ಮಾತ್ರವಲ್ಲ, ಇತರ ಪಕ್ಷಗಳೂ ಪವಾರ್ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಮನವಿ ಮಾಡಿಕೊಂಡಿವೆ ಎಂದು ಪ್ರಫುಲ್‌ ಪಟೇಲ್‌ ಸುದ್ದಿಗೋಷ್ಠಶರದ್ ಪವಾರ್ ಜಿ ಅವರ ನಿಲುವು ಮತ್ತು ಅವರ ಗೌರವವು ವಿಭಿನ್ನವಾಗಿದೆ. ಈಗ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಪವಾರ್ ಸಾಹೇಬ್ ತಮ್ಮ ಅವಧಿಯನ್ನು ಪೂರ್ಣಗೊಳಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದರು.

ಬೆಳಗ್ಗೆ ಬೆಳಗ್ಗೆಯೇ ಮತ್ತಿನಲ್ಲಿ ಮಾತಾಡ್ತಾರೆ: ಸಂಜಯ್‌ ರಾವತ್‌ಗೆ ದೇವೇಂದ್ರ ಫಡ್ನವೀಸ್‌ ತಿರುಗೇಟು