Asianet Suvarna News

2024ರಲ್ಲಿ ಬಿಜೆಪಿ ವಿರುದ್ದ ಒಗ್ಗಟ್ಟಾಗಿ ಸ್ಪರ್ಧೆ; ದಿಢೀರ್ ವಿರೋಧ ಪಕ್ಷ ಸಭೆ ಕರೆದ ಶರದ್ ಪವಾರ್!

  • ಕೇಂದ್ರ ರಾಜಕೀಯದಲ್ಲಿ ಭಾರಿ ಸಂಚಲನ, ಪ್ರಶಾಂತ್ ಕಿಶೋರ್-ಪವಾರ್ ಭೇಟಿ
  • 2ನೇ ಭೇಟಿ ಬಳಿಕ ವಿರೋಧ ಪಕ್ಷದ ಜೊತೆ ದಿಢೀರ್ ಸಭೆ ಕರೆದ ಶರದ್ ಪವಾರ್
  • 2024ರಲ್ಲಿ ಮೋದಿ ಕೆಳಗಿಳಿಸಿ ಪವಾರ್‌ಗೆ ಪಟ್ಟ ಕಟ್ಟುವ ಕುರಿತು ಮಹತ್ವದ ಚರ್ಚೆ
NCP chief Sharad Pawar calls Opposition party meet after meeting with Prashant Kishor ckm
Author
Bengaluru, First Published Jun 21, 2021, 7:01 PM IST
  • Facebook
  • Twitter
  • Whatsapp

ನವದೆಹಲಿ(ಜೂ.21): ಕೇಂದ್ರ ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗುತ್ತಿದೆ. 2024ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ತಯಾರಿ ಆರಂಭಗೊಂಡಿದೆ. ಇದೀಗ ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಥರ್ಡ್ ಫ್ರಂಟ್ ಮುಂದಾಗಿದೆ. ಇದಕ್ಕೆ ಚುನಾವಣಾ ರಣನೀತಿಗಾರ ಪ್ರಶಾಂತ್ ಕಿಶೋರ್, NCP ಮುಖ್ಯಸ್ಥ ಶರದ್ ಪವಾರ್ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಮಾತುಕತೆ ಬೆನ್ನಲ್ಲೇ ಶರದ್ ಪವಾರ್ ನಾಳೆ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.

ಮೋದಿಗೆ ಎದುರಾಳಿ ಸೃಷ್ಟಿ?: ಪವಾರ್‌- ಪ್ರಶಾಂತ್‌ ಕಿಶೋರ್ ಚರ್ಚೆ, ಭಾರೀ ಸಂಚಲನ!.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ 2ನೇ ಬಾರಿಗೆ ಶರದ್ ಪವಾರ್ ಭೇಟಿಯಾಗಿದ್ದಾರೆ. ಜೂನ್ 11 ರಂದು ಪವಾರ್ ನಿವಾಸಕ್ಕೆ ತೆರಳಿದ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿದ್ದರು. ಇದೀಗ 2ನೇ ಬಾರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಎಡರಂಗ ಪಕ್ಷ ಒಗ್ಗಟ್ಟಾಗಿ ಹೋರಾಡುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

2024ಕ್ಕೆ ಶರದ್ ಪವಾರ್ ನೇತೃತ್ವದಲ್ಲಿ ಎಡರಂಗ ಪಕ್ಷ ಪ್ರಧಾನಿ ಮೋದಿ ಎದಿರಿಸಲು ಸಜ್ಜಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಶರದ್ ಪವಾರ್ ಜೊತೆ ಕಿಶೋರ್ ಚರ್ಚೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ ಮಾತುಗಳಲ್ಲಿ ಇದೀಗ ಎರಡಂಗಕ್ಕೆ ಹೆಚ್ಚಿನ ವಿಶ್ವಾಸವಿದೆ. ಹೀಗಾಗಿ ಕಿಶೋರ್ ಮಾತುಕತೆ ಬೆನ್ನಲ್ಲೇ ಶರದ್ ಪವಾರ್ ನಾಳೆ(ಜೂ.22) ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ. 

ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!

ನಾಳೆ ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. 15 ಕ್ಕೂ ಹೆಚ್ಚಿನ ಪಕ್ಷಗಳಿಗೆ ಶರದ್ ಪವಾರ್ ಆಹ್ವಾನ ನೀಡಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ಹಿರಿಯ ನಾಯಕರಾದ ಫಾರೂಕ್ ಅಬ್ದುಲ್ಲಾ, ಯಶ್ವಂತ್ ಸಿನ್ಹಾ, ಪವನ್ ವರ್ಮಾ, ಸಂಜಯ್ ಸಿಂಗ್, ಡಿ ರಾಜಾ, ನ್ಯಾಯಮೂರ್ತಿ ಎಪಿ ಸಿಂಗ್, ಜಾವೇದ್ ಅಖ್ತರ್, ಕೆಟಿಎಸ್ ತುಳಸಿ ಮತ್ತು ಕರಣ್ ಥಾಪರ್  ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ.

Follow Us:
Download App:
  • android
  • ios